ದಿನದ ಸುದ್ದಿ

ಮಹಿಳಾ ಸಿಬ್ಬಂದಿ ಮೇಲೆ ಲಾಠಿ ಚಾರ್ಜ್ ಮಾಡಿಸಿದ ಟಿಆರ್ ಎಂಎನ್ ಕಂಪನಿ

Published

on

ಟಿಆರ್‍ಎಂಎನ್ ಕಂಪನಿಯು ತನ್ನ 150 ಮಹಿಳಾ ಸಿಬ್ಬಂದಿ ಮೇಲೆ ದೌರ್ಜನ್ಯ ನಡೆಸಿರುವುದಾಗಿ ಫೇಸ್ ಬುಕ್‍ನಲ್ಲಿ ವೈರಲ್ ಆಗುತ್ತಿರುವ ವಿಡಿಯೊ

ಬೆಂಗಳೂರು ಹೊರ ವಲಯದ ದಾಬಸ್ ಪೇಟೆ ಬಳಿ ಇರುವ ಟಿಆರ್‍ಎಂಎನ್ (ಟೋಕಿಯಾ ರಿಕಾ ಮಿಂಡಾ ಇಂಡಿಯಾ ಪ್ರೈವೇಟ್ ಲಿಮಿಟೆಡ್) ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 150 ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆದಿದೆ ಎಂಬ ಕುರಿತು ಫೇಸ್‍ಬುಕ್‍ನಲ್ಲಿ ವ್ಯಾಪಕ ಚರ್ಚೆಯಾಗುತ್ತಿದ್ದು, ಈ ಕುರಿತು ದೌರ್ಜನ್ಯಕ್ಕೊಳಗಾದ ಹೆಣ್ಣುಮಕ್ಕಳು ವಿಡಿಯೊ ಮಾಡಿ ಜಾಲ ತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ದೌರ್ಜನ್ಯಕ್ಕೊಳಗಾಗಿದ್ದಾರೆ ಎನ್ನಲಾದ ಹೆಣ್ಣಮಕ್ಕಳ ಮೇಲೆ ಲಾಠಿ ಚಾರ್ಜ್ ಕೂಡ ನಡೆದಿದ್ದು, ಈ ಪೈಕಿ ಹತ್ತು ಮಂದಿಯ ಬಟ್ಟೆ ಎಳೆದಾಡಿದ್ದಾರೆ ಎಂದು ಸಿಐಟಿಯು ಕಾರಯ್ಕರ್ತ ಮೋಹನ್ ಎಂ.ಬಿ ಎಂಬುವರು ಫೇಸ್‍ಬುಕ್‍ನಲ್ಲಿ ಆರೋಪಿಸಿದ್ದಾರೆ.

 

ಕಾರಣ ಏನು?

ವಿಡಿಯೊದಲ್ಲಿರುವ ಹೆಣ್ಣುಮಕ್ಕಳು ಮಾತನಾಡಿರುವ ಪ್ರಕಾರ, 2015ರ ಜನವರಿಯಲ್ಲಿ ಸಂಸ್ಥೆಯಲ್ಲಿ ಯೂನಿಯನ್ ರಚನೆಯಾಗಿದೆ. ಇದರಿಂದ ಖುದ್ದುಹೋದ ಕಂಪನಿಯು ಹನ್ನೆರಡು ಜನ ಕಾರ್ಮಿಕರನ್ನು ಅಮಾನತು ಮಾಡಲಾಗಿದೆ. ಏಪ್ರಿಲ್‍ನಲ್ಲಿ ಮತ್ತೆ ನಾಲ್ವರನ್ನು ಸಸ್ಪೆಂಡ್ ಮಾಡಲಾಗಿದೆ.

ಈ ಪ್ರಕರಣ ನಡೆದ ನಂತರವೂ ಕಾರ್ಮಿಕರು ಒಳಗೇ ಇದ್ದು ಶಾಂತಿಯುತ ಹೋರಾಟ ನಡೆಸಲು ಕಂಪನಿಯು ವಿರೋಧ ವ್ಯಕ್ತಪಡಿಸಿದೆ. ಯೂನಿಯನ್ ರಚನೆ ಮಾಡಿಕೊಂಡವರನ್ನೇ ಗುರಿಯಾಗಿಟ್ಟುಕೊಂಡು ಒಂದಲ್ಲಾ ಒಂದು ಕಿರುಕುಳ ನೀಡುತ್ತಿದೆ ಎಂಬುದು ಈ ಹೆಣ್ಣುಮಕ್ಕಳ ಆರೋಪ.

ನಡತೆ ಸರಿಯಿಲ್ಲ ಎಂದು ಪತ್ರ ಬರೆದರು

ಯೂನಿಯನ್ ರಚನೆ ಮಾಡಿಕೊಂಡ ಹೆಣ್ಣುಮಕ್ಕಳ ಮೇಲೆ ಕಣ್ಣಿಟ್ಟಿದ್ದ ಕಂಪನಿಯವರು ಆ ಹೆಣ್ಣುಮಕ್ಕಳ ಮನೆಯವರಿಗೆ ಕರೆಮಾಡಿ ಹೆದರಿಸುತ್ತಿದ್ದರು ಎಂದು ವಿಡಿಯೊದಲ್ಲಿ ಆರೋಪಿಸಲಾಗಿದೆ. ಇದಲ್ಲದೆ ಅವರ ನಡತೆ ಸರಿಯಿಲ್ಲ ಎಂದು ಕಂಪನಿಯವರೇ ಮನೆಗೆ ಪತ್ರ ಬರೆಯುತ್ತಿದ್ದರು ಎಂದು ಮತ್ತೊಬ್ಬ ಹೆಣ್ಣುಮಕ್ಕಳು ತಿಳಿಸಿದ್ದಾರೆ.

ಋತುಸ್ರಾವ ನೋವಿಗೂ ಸ್ಪಂದಿಸಲಿಲ್ಲ

ವಿಡಿಯೊದಲ್ಲಿ ಮತ್ತೊಬ ಸಿಬ್ಬಂದಿ ಮಾತನಾಡಿರುವ ಪ್ರಕಾರ. ಯೂನಿಯನ್ ಮಾಡಿಕೊಂಡಿರುವ ಹೆಣ್ಣುಮಕ್ಕಳನ್ನು ಋತುಸ್ರಾವದ ಅವಧಿಯಲ್ಲೂ ಹೆಚ್ಚು ಕೆಲಸ ಮಾಡಿಸಲಾಗುತ್ತಿದೆ. ಸ್ವಲ್ಪ ರೆಸ್ಟ್ ತೆಗೆದುಕೊಳ್ಳುತ್ತೇವೆ ಎಂದು ಅನುಮತಿ ಕೇಳಿದರೆ ಗಂಡಸರ ಟಾಯ್ಲೆಟ್ ರೂಂ ಬಳಿ ನಿಲ್ಲಿಸಿ ವಿದ್ಯುತ್ ನಿಲುಗಡೆ ಮಾಡಿ ಚಿತ್ರ ಹಿಂಸೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ತಮಗೆ ಏನೇ ತೊಂದರೆಯಾದರೂ ಹೆಚ್ ಆರ್ ವಿಭಾಗದವರೇ ಕಾರಣ ಎಂದು ದೂರಿದ್ದಾರೆ.

ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಈ ದೌರ್ಜನ್ಯ ಖಂಡಿಸಿ ಸಿಐಟಿಯು ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದಾರೆ. ದೌರ್ಜನ್ಯಕ್ಕೊಳಗಾದ ಹೆಣ್ಣುಮಕ್ಕಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನೆಪದಲ್ಲಿ ಹಿಂಸೆ ನೀಡಿದ್ದಾರೆ ಎಂದೂ ಫೇಸ್‍ಬುಕ್ ಪೋಸ್ಟ್‍ನಲ್ಲಿ ಆರೋಪಿಸಲಾಗಿದೆ.

ಟೋಕಿಯೊ ಮೂಲದ ಟಿಆರ್‍ಎಂಎನ್ ಕಂಪನಿಯು ಆಟೊಪಾಟ್ರ್ಸ್ ತಯಾರಿಕೆಯಲ್ಲಿ ಅಗ್ರಗಣ್ಯ ಕಂಪನಿಯಾಗಿದೆ. ಒಂದು ಎಂಎನ್ಸಿ ಕಂಪನಿಯು ಕನ್ನಡಿಗರ ಮೇಲೆ ನಡೆಸಿರುವ ಈ ದೌರ್ಜನ್ಯವನ್ನು ಸುದ್ದಿ ದಿನ ಎಂದಿಗೂ ಸಹಿಸುವುದಿಲ್ಲ.

 

Leave a Reply

Your email address will not be published. Required fields are marked *

Trending

Exit mobile version