ರಾಜಕೀಯ
ಗಣರಾಜ್ಯದಿನ ಪರೇಡ್‍ಗೆ ಟ್ರಂಪ್ ಅತಿಥಿ
ಸುದ್ದಿದಿನ ಡೆಸ್ಕ್: ಮುಂದಿನ ವರ್ಷ ದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯ ದಿನಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ. ವಾರಗಳ ಹಿಂದಷ್ಟೆ ಅಮೆರಿಕಕ್ಕೆ ಭಾರತ ಸರಕಾರ ಪತ್ರ ಬರೆದಿದ್ದು, ಈ ಕುರಿತು ಅಲ್ಲಿಂದ ಅಧಿಕೃತ ಸಮ್ಮತಿ ಹೊರಬೀಳಬೇಕು.
ಭಾರತ ಸರಕಾರದ ಈ ನಡೆಯು ಅಮೆರಿಕ ಜತೆಗಿನ ಸ್ನೇಹವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ. ಈ ಹಿಂದೆ ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಅವರು ಗಣರಾಜ್ಯ ದಿನದ ಪರೇಡ್‍ನಲ್ಲಿ ಪಾಲ್ಗೊಂಡಿದ್ದರು.
ಇರಾನ್ ಜತೆಗೆ ಕಟುವಾಗಿ ನಡೆದುಕೊಳ್ಳಲೂ ಅಮೆರಿಕ ವಿಧಿಸಿದ ವ್ಯಾಪಾರ ಕಾನೂನುಗಳೇ ಕಾರಣ. ಬೇರೆ ದೇಶಗಳು ಅಮೆರಿಕದ ಮಾತನ್ನು ಕಡೆಗಣಿಸಿವೆಯಾದರೂ, ಭಾರತ ಮಾತ್ರ ಅದಕ್ಕೆ ಸಮ್ಮತಿ ವ್ಯಕ್ತಪಡಿಸಿ ಅದರಂತೆ ನಡೆಯುತ್ತಿದೆ. ಹಾಗಾಗಿ ಅಮೆರಿಕ ಹಾಗೂ ಭಾರತದ ವ್ಯಾಪಾರ ಒಪ್ಪಂದಗಳು ಇನ್ನೂ ಗಟ್ಟಿಯಾಗಿವೆ.
ಈ ಮೊದಲು ಅಮೆರಿಕಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಟ್ರಂಪ್ ಅವರನ್ನು ಭೇಟಿಯಾಗಿ ವ್ಯಾಪಾರ ಒಪ್ಪಂದಗಳ ಕುರಿತು ಚರ್ಚೆ ನಡೆಸಿದ್ದರು. ಅಮೆರಿಕದೊಟ್ಟಿಗಿನ ನಾಗರಿಕ ಪರಮಾಣು ಒಪ್ಪಂದಕ್ಕೆ ಇನ್ನಷ್ಟೆ ಒಪ್ಪಿಗೆ ಸಿಗಬೇಕಿದೆ. ಟ್ರಂಪ್ ಅವರ ಭೇಟಿ ಭಾರತದ ಅಭಿವೃದ್ಧಿ ಕಾರ್ಯಗಳ ಮೇಲೆ ಧನಾತ್ಮಕ ಪರಿಣಾಮ ಬೀರುವ ಸಾಧ್ಯತೆಗಳಿವೆ.