ದಿನದ ಸುದ್ದಿ
ವ್ಯಕ್ತಿಗೆ ಮಾರಕಾಸ್ತ್ರಗಳಿಂದ ಹಲ್ಲೆ : ಹಣದೋಚಿ ಪರಾರಿಯಾದ ದರೋಡೆಕೋರರು
ಸುದ್ದಿದಿನ ಡೆಸ್ಕ್ : ತುಮಕೂರಲ್ಲಿ ಮಿತಿಮೀರಿದೆ ದರೋಡೆಕೋರರ ಹಾವಳಿ. ಈ ಹಿನ್ನೆಯಲ್ಲಿ ಬೈಕ್ ಸವಾರನ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಹಣ,ವಾಚು ದರೋಡೆ ಮಾಡಿದ್ದಾರೆ.
ಗಿರೀಶ್ ಕುಮಾರ್(22) ಎಂವ ವ್ಯಕ್ತಿಯ ಮೇಲೆ ದಾಳಿ ಮಾಡಿರುವ ದರೋಡೆಕೋರರು, ಪಕ್ಕೆ, ಕೈ ಸೇರಿದಂತೆ ಬುಜಕ್ಕೆ ಮಾರಕಾಸ್ತ್ರಗಳಿಂದ ಚುಚ್ಚಿದ್ದಾರೆ. ಈ ಘಟನೆ ತುಮಕೂರು ನಗರದ ಶಾಂತಿನಗರದಲ್ಲಿ ನಡೆದಿದೆ.
ಬನಶಂಕರಿಯಿಂದ ಅಮರಜ್ಯೋತಿನಗರಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದ ಗಿರೀಶ್ ಕುಮಾರ್ ರನ್ನು
ಶಾಂತಿನಗರದಲ್ಲಿ ಬೈಕ್ ಅಡ್ಡಗಟ್ಟಿ 24ಸಾವಿರ ಹಣ, ವಾಚು ಕಿತ್ತು ಹಲ್ಲೆ ಮಾಡಿ ಪರಾರಿಯಾದಿದ್ದಾರೆ ದುಷ್ಕರ್ಮಿಗಳು. 9ಗಂಟೆ ಸುಮಾರಿನಲ್ಲಿ ನಡೆದಿರೋ ಘಟನೆಯಿದಾಗಿದ್ದು, ಬೈಕ್ ನಲ್ಲಿ ಬಂದಿದ್ದ ನಾಲ್ಕಕ್ಕೂ ಹೆಚ್ಚು ದರೋಡೆಕೋರರಿಂದ ಕೃತ್ಯ ನಡೆದಿದೆ. ಗಯಾಳು ಗಿರೀಶ್ ಕುಮಾರ್ ಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆಸ್ಪತ್ರೆಗೆ ಭೇಟಿ ನೀಡಿದ ಸಿಪಿಐ ರಾಮಕೃಷ್ಣ, ಜಯನಗರ ಪಿಎಸ್ ಐ ನವೀನ್ ಕುಮಾರ್ ಅವರು ಗಿರೀಶ್ ಆರೊಗ್ಯ ಹಾಗೂ ಘಟನೆ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ.ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401