ದಿನದ ಸುದ್ದಿ
ತುಂಗಾ ನದಿ ನೀರು ಹರಿವಿನ ಪ್ರಮಾಣ ಹೆಚ್ಚಳ | ಹೊನ್ನಾಳಿ-ಹರಿಹರ ಜನತೆ ಎಚ್ಚರದಿಂದಿರಿ : ಡಿಸಿ ಮನವಿ
ಸುದ್ದಿದಿನ, ದಾವಣಗೆರೆ : ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಭಾರಿ ಮಳೆ ಆಗುತ್ತಿದ್ದು ತುಂಗಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಳವಾಗುತ್ತಿದ್ದು ಡ್ಯಾಮ್ ನಿಂದ ಯಾವುದೇ ಸಂದರ್ಭದಲ್ಲಿ ನೀರು ಬಿಡಬಹುದಾದ ಸಂಭವವಿದೆ.
ನದಿ ದಂಡೆಯಲ್ಲಿ ಬರುವ ಹೊನ್ನಾಳಿ ಮತ್ತು ಹರಿಹರ ಪಟ್ಟಣಗಳ ಹಾಗೂ ಗ್ರಾಮಗಳ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಹಾಗೂ ನದಿ ಅಪಾಯ ಮಟ್ಟ ಮೀರಿ ಹರಿದಾಗ ತೊಂದರೆಗೊಳಗಾಗುವ ಸಾರ್ವಜನಿಕರು ಜಿಲ್ಲಾಡಳಿತದಿಂದ ತೆರೆಯುವ ಕಾಳಜಿ ಕೇಂದ್ರಗಳಿಗೆ ಹೋಗಲು ಸಿದ್ದರಿರಬೇಕು ಮತ್ತು ಜಾನುವಾರುಗಳನ್ನು ನದಿ ಬಳಿಗೆ ಬಿಡದಂತೆ ಎಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243