ದಿನದ ಸುದ್ದಿ
ಉಡುಪಿಯ ಪದ್ಮಪ್ರಿಯಾ ಆತ್ಮಕ್ಕೆ ಶಾಂತಿ ಸಿಕ್ತು..! ಶಾಸಕರ ಪತ್ನಿ ಸಾವಿಗೆ ಕಾರಣವಾದ ಟಿವಿ ಅ್ಯಂಕರ್ ಗೂ ಅದೇ ಗತಿಯಾಯ್ತು..!
- ಪ್ರದೀಪ್ ಕುಮಾರ್, ಪತ್ರಕರ್ತ
ನಿಮಗೆ ಉಡುಪಿ ಪದ್ಮಪ್ರಿಯ ಪ್ರಕರಣ ಮರೆತು ಹೋಗಿರಬಹುದು. ನಾಲ್ಕೈದು ದಿನ ಟಿವಿಯಲ್ಲಿ ಪದ್ಮಪ್ರಿಯಾ ಸಾವಿನ ತರಾವರಿ ಕತೆ ಕೇಳಿ ಖುಷಿಯಲ್ಲೇ ಆಕ್ರೋಶ ವ್ಯಕ್ತಪಡಿಸಿ ಮರೆತಿರಬಹುದು. ಆದ್ರೆ ಪದ್ಮಪ್ರಿಯ ಆತ್ಮ ಮಾತ್ರ ಅದನ್ನು ಮರೆತಿಲ್ಲ. ಪದ್ಮಪ್ರೀಯ ಮತ್ತು ಆಕೆಯ ಗೆಳೆಯನ ಸಂಬಂಧದ ಬಗ್ಗೆ ಕತೆ ಕಟ್ಟಿ ಪದ್ಮಪ್ರೀಯ ಸಾವಿಗೆ ನೇರ ಕಾರಣನಾಗಿದ್ದ ಟಿವಿ ಅ್ಯಂಕರ್ ಗೆ ಇವತ್ತು ಅಂತದ್ದೇ ಅನೈತಿಕ ಸಂಬಂಧದ ಕಾರಣಕ್ಕಾಗಿ ಒದೆ ಬಿದ್ದಿದೆ.
ಅವತ್ತು ಶಾಸಕರ ಜೊತೆಗಿನ ಬದುಕಿನ ನಿರಾಸಕ್ತಿ ತಳೆದು ತನ್ನಷ್ಟಕ್ಕೆ ತಾನಿರ್ತೀನಿ ಅಂತ ಉಡುಪಿಯ ಪದ್ಮಪ್ರೀಯ ದೆಹಲಿಗೆ ಹೋಗಿದ್ದಳು. ಹೇರ್ ಕಟ್ ಮಾಡಿ, ತನ್ನ ಬಟ್ಟೆ, ನಡೆ ನುಡಿಗಳನ್ನು ಬದಲಿಸಿ ಹೊಸ ಬದುಕು ಕಟ್ಟಲು ಆಕೆ ದೆಹಲಿಗೆ ತೆರಳಿ ಐಟಿ ಕಂಪನಿಯಲ್ಲಿ ಕೆಲಸವನ್ನೂ ಹುಡುಕಿದ್ದಳು.
ದೆಹಲಿಯಲ್ಲಿ ಉಳಿದುಕೊಳ್ಳಲು ಮನೆಯೊಂದು ಬೇಕಾಗಿತ್ತು. ಆಗ ಆಕೆಯ ನೆನಪಿಗೆ ಬಂದಿದ್ದು ಬಾಲ್ಯದ ಗೆಳೆಯ ಅತುಲ್ ರಾವ್ ! ಗೆಳೆಯನಿಗೆ ಕರೆ ಮಾಡಿ ದೆಹಲಿಯಲ್ಲಿ ಫ್ಲ್ಯಾಟ್ ಒಂದನ್ನು ಬುಕ್ ಮಾಡಿಸಿಕೊಂಡಿದ್ದಷ್ಟೇ ಆಕೆ ಮಾಡಿದ ತಪ್ಪು. ಫ್ಲ್ಯಾಟ್ ಲೆಡ್ಜರ್ ನಲ್ಲಿ ಅತುಲ್ ರಾವ್ ಸಹಿ ಇತ್ತು. ಆಗ ಎಂಟ್ರಿಯಾಗಿದ್ದೇ ದೆಹಲಿ ಟಿವಿ9 ರಿಪೋರ್ಟರ್ ಶಿವಪ್ರಸಾದ್.
ಬದುಕು ಕಟ್ಟಿಕೊಳ್ಳಲು ದೆಹಲಿಗೆ ಬಂದ ಪದ್ಮಪ್ರಿಯಗೂ ಅತುಲ್ ರಾವ್ ಅನೈತಿಕ ಸಂಬಂಧವಿದೆ ಎಂದು ಟಿವಿ9 ನಲ್ಲಿ ಶಿವಪ್ರಸಾದ್ ಸುದ್ದಿ ಮಾಡಿದ. ಇಬ್ಬರ ಸಂಬಂಧದ ಬಗ್ಗೆ ಕಪೋಲಕಲ್ಪಿತ ಸುದ್ದಿಯನ್ನು ರೋಚಕವಾಗಿ 24 ಗಂಟೆಯೂ ನಿರಂತರ ಪ್ರಸಾರ ಮಾಡಲಾಯ್ತು. ಬದುಕಲು ಬಂದ ಪದ್ಮಪ್ರಿಯ ಟಿವಿ 9 ವರದಿ ನೋಡಿ ನೇಣಿಗೆ ಶರಣಾಗುವ ನಿರ್ಧಾರ ಮಾಡಿದಳು.
ಫ್ಲ್ಯಾಟ್ ನ ಬಾಗಿಲು ಒಡೆದು ಒಳ ಹೋದಾಗ ಪದ್ಮಪ್ರಿಯ ನೇಣಿನಲ್ಲಿದ್ದಳು ಮತ್ತು ಟಿವಿ9 ಆನ್ ಆಗಿತ್ತು. ಇಷ್ಟಕ್ಕೆ ಬಿಡದ ಶಿವಪ್ರಸಾದ್ ಆ ರೂಮಿನಲ್ಲಿದ್ದ ಮಂಚದ ಕೆಳಗೆ ನುಸುಳಿ ಪದ್ಮಪ್ರಿಯಾ ಸಂಬಂಧದ ಬಗ್ಗೆ ಲೈವ್ ಕೊಡಲಾರಂಬಿಸಿದ. ಪದ್ಮಪ್ರಿಯಾ ಸಾವಿಗೆ ಟಿವಿ9 ಶಿವಪ್ರಸಾದನೇ ಕಾರಣ ಎಂದು ಇಡೀ ರಾಜ್ಯ ಮಾತನಾಡಿಕೊಂಡಿತು. ಆದರೆ ಶಿವಪ್ರಸಾದ್ ಮಾತ್ರ ಅದು ತನ್ನ ಜೀವಮಾನದ ಸಾಧನೆ ಅಂದುಕೊಂಡ.
ಅದೇ ಶಿವಪ್ರಸಾದ್ ಇದೀಗ ಟಿವಿ ಚಾನೆಲ್ ಅ್ಯಂಕರ್. ಇವತ್ತು ಮತ್ತೊಬ್ಬರ ಪತ್ನಿ ಜೊತೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಮಹಿಳಾ ಅ್ಯಂಕರ್ ಜೊತೆ ಶಿವಪ್ರಸಾದ್ ಕಾರಿನಲ್ಲಿ ಹೋಗುತ್ತಿದ್ದಾಗ ಸಿನೀಮಿಯ ರೀತಿಯಲ್ಲಿ ಫಾಲೋ ಮಾಡಿಕೊಂಡು ಬಂದ ಗಂಡ ಶ್ರೀಧರ್, ಶಿವಪ್ರಸಾದ್ ಮೇಲೆ ಹಲ್ಲೆ ಮಾಡಿದ್ದಾನೆ. ಇವತ್ತು ಆ ಮಹಿಳಾ ಅ್ಯಂಕರ್ ಬರ್ತ್ ಡೇ ಇತ್ತು. ಹಾಗಾಗಿ ಇಬ್ಬರೂ ಸುತ್ತಾಡುತ್ತಿದ್ದರು.
ಕೊಡಿಗೆಹಳ್ಳಿ ಮೋರ್ ಎದುರು ಶಿವಪ್ರಸಾದ್ ಮತ್ತು ಮಹಿಳಾ ಅ್ಯಂಕರ್ ಜಾಲಿ ರೈಡ್ ನಲ್ಲಿ ಇದ್ದಾಗ ಸಾಫ್ಟ್ ವೇರ್ ಇಂಜಿನಿಯರ್ ಗಂಡ ಕಾರನ್ನು ಅಡ್ಡಗಟ್ಟಿ ಶಿವಪ್ರಸಾದ್ ಗೆ ಹಲ್ಲೆ ಮಾಡಿದ್ದಾನೆ. ಕಾರಿನ ಗಾಜುಪುಡಿ ಗೂಸಾ ನೀಡಿದ್ದಾನೆ. ಶ್ರೀಧರ್ ಹೇಳುವ ಪ್ರಕಾರ, ಅ್ಯಂಕರ್ ಸದಿವಪ್ರಸಾದ್ ನನ್ನ ಜೀವನ ನರಕ ಮಾಡಿದ್ದಾನೆ.
ನನ್ನ ಪತ್ನಿಯನ್ನು ನನ್ನಿಂದ ದೂರ ಮಾಡಿದ್ದಾನೆ. ಹಾಗಾಗಿ, ಇಂದು ರೆಡ್ಹ್ಯಾಂಡ್ ಆಕೆ ಮತ್ತು ಆತನನ್ನು ನಾನು ಹಿಡಿದು ಪೊಲೀಸರಿಗೆ ಕೊಟ್ಟಿದ್ದೇನೆ. ಪೊಲೀಸರ ಬಳಿಯೂ ಹೇಳಿಕೆ ನೀಡಿದ್ದೇನೆ ಎಂದು ಹಲ್ಲೆ ಮಾಡಿರೋ ಆರೋಪ ಹೊತ್ತಿರೋ ಮಹಿಳಾ ಅ್ಯಂಕರ್ ಗಂಡ ಶ್ರೀಧರ್ ಹೇಳುತ್ತಿದ್ದಾನೆ. ಅವತ್ತು ಶಾಸಕರ ಪತ್ನಿ ಪದ್ಮಪ್ರಿಯಾ ತಲೆಗೆ ಅನೈತಿಕ ಸಂಬಂಧ ಕಟ್ಟಿ ಆಕೆಯ ಸಾವಿಗೆ ಕಾರಣವಾದ ಅ್ಯಂಕರ್ ಶಿವಪ್ರಸಾದ್ ಈಗ ಏನನ್ನುತ್ತಾನೆ ?
ಸುದ್ದಿದಿನ.ಕಾಂ|ವಾಟ್ಸಾಪ್|9980346243