ರಾಜಕೀಯ

ಮೋದಿಜಿ ಬರ್ಥಡೇಗೆ ಟ್ವಿಟರ್ ಶುಭಾಶಯ; ಬಲೂನ್ ಹಾರಿಸಿದ ಟ್ವಿಟರ್

Published

on

ಸುದ್ದಿದಿನ ಡೆಸ್ಕ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಇದಕ್ಕೆ ನಾವೇನ್ ಕಮ್ಮಿ ಅಂತಾ ಟ್ವಿಟರ್ ಮೋದಿ ಅವರ ಖಾತೆಯಲ್ಲಿ ಬಲೂನ್ ಹಾರಿ ಬಡುವ ಮೂಲಕ ಗ್ರ್ಯಾಂಡಾಗಿ ಬರ್ಥಡೇ ಸೆಲೆಬ್ರೇಟ್ ಮಾಡುತ್ತಿದೆ.

43.9 ಮಿಲಿಯನ್ ಫಾಲೋವರ್ಸ್ ಹೊಂದಿರುವ ಮೋದಿ ಟ್ವಿಟರ್ ಅಕೌಂಟ್ ಗೆ ಕೋಟ್ಯಂತರ ಶುಭಾಶಯಗಳು ಹರಿದು ಬರುತ್ತಿವೆ. ದೇಶ, ವಿದೇಶಗಳ ಗಣ್ಯರು ಮೋದಿ ಅವರ ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ. ಟ್ವಿಟರ್ ಸಹ ಮೋದಿಜಿ ಬರ್ಥಡೇ ಗ್ರ್ಯಾಂಡಾಗಿ ಆಚರಿಸುತ್ತಿದ್ದು, ಬಲೂನ್ ಹಾರಿಬಿಡುವ ಮೂಲಕ ಶುಭಾಶಯ ಕೋರುತ್ತಿದೆ.

ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಶುಭಾಶಯ ಕೋರಿದ್ದರು. ಕುಮಾರಸ್ವಾಮಿ ಅವರಿಗೆ ಮೋದಿಜಿ ರಿಪ್ಲೇ ಮಾಡಿದ್ದು, ಕುಮಾರಸ್ವಾಮಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version