ದಿನದ ಸುದ್ದಿ

ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಇಬ್ಬರು ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದಲ್ಲಿ ಸೆರೆ

Published

on

ಸುದ್ದಿದಿನ ಡೆಸ್ಕ್ : ನಿಷೇಧಿತ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು ಹೊಂದಿರುವ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಬಂಧಿಸಿದ್ದಾರೆ.

ಅವರಲ್ಲಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಾದಚಾರಿಗಳು ಹಾಗೂ ವಾಹನಗಳ ಹುಡುಕಾಟ ನಡೆಸುತ್ತಿರುವಾಗ ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಅನುಮಾನಾಸ್ಪದವಾಗಿ ಚಲಿಸುತ್ತಿರುವುದನ್ನು ಗಮನಿಸಿ, ಅವರನ್ನು ಪ್ರಶ್ನಿಸಿದಾಗ ಚೆಕ್‌ಪೋಸ್ಟ್ ಮುರಿಯಲು ಪ್ರಯತ್ನಿಸಿದ್ದರು.

ಆಗ ಅವರನ್ನು ಗಡಿ ಭದ್ರತಾ ಪಡೆ ಬಂಧಿಸಿತು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಅಬಿದ್ ಅಲಿ ಮತ್ತು ಫೈಸಲ್ ಹಸನ್ ಪರ್ರ‍ೆ ಇಬ್ಬರೂ ಹರ್ಪೋರಾ ಅಚ್ಚನ್ ಪುಲ್ವಾಮಾ ನಿವಾಸಿಗಳಾಗಿದ್ದಾರೆ ಎಂದು ಗುರುತಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version