ದಿನದ ಸುದ್ದಿ

ತ್ಯಾವಣಿಗೆ | ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಗುರುವಂದನೆ ; ಸ್ನೇಹ ಸಮ್ಮಿಲನ ಬೆಳ್ಳಿಹಬ್ಬ

Published

on

ಸುದ್ದಿದಿನ,ಚನ್ನಗಿರಿ:ತಾಲೂಕಿನ ತ್ಯಾವಣಿಗೆ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ದಿನಾಂಕ 23 ಫೆಬ್ರವರಿ 2025 ರಂದು 1998-99 ನೇ ಸಾಲಿನ ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗು ಸ್ನೇಹ ಸಮ್ಮಿಲನದ ಬೆಳ್ಳಿಹಬ್ಬ ಅದ್ದೂರಿಯಾಗಿ ನೆರವೇರಿತು.

ಈ ಸಂದರ್ಭದಲ್ಲಿ ಆಗ ಸೇವೆ ಸಲ್ಲಿಸುತಿದ್ದ ಗುರುಗಳಾದ ಎಸ್. ಓಂಕಾರಯ್ಯ, ಹೆಚ್. ಎಸ್. ಗುರುನಾಥಪ್ಪ, ಬಿ. ಜಿ. ಶಂಕರಮೂರ್ತಿ, ಜೆ. ದಾದಾಪೀರ್, ಪಿ. ಗದಿಗೆಪ್ಪ, ಹೆಚ್. ವಿ. ಕವಿತಾ, ಕೃಷ್ಣಮೂರ್ತಿ, ಬಿ. ನಾಗೇಶ್ ನಾಯ್ಕ್,
ದಿವಂಗತ ರವಿ ಯವರ ಕುಟುಂಬವರ್ಗವನ್ನು,ಬೋಧಕೇತರ ವರ್ಗದ ಜಗದೀಶ್, ಡಿ ‘ ಗ್ರೂಪ್ ನೌಕರರಾಗಿದ್ದ
ದಿ| ಪ್ರಕಾಶಯ್ಯ, ದಿ| ಸಿದ್ದಣ್ಣ ರವರ ಕುಟುಂಬವನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಗ್ರಾಮದ ಮುಖಂಡರಾದ ಹಾಗು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಪಿ. ಸಿ. ಗೋವಿಂದಸ್ವಾಮಿ, ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಯುತ. ಶರಣಪ್ಪ ಹಾಜರಿದ್ದರು. ಇದೇ ವೇಳೆ ನಮ್ಮನ್ನು ಅಗಲಿದ ಶಿಕ್ಷಕರಾದ ದಿ.ರವಿ ಹಾಗು ಗೆಳೆಯರ ಆತ್ಮಕ್ಕೆ ಶಾಂತಿ ಕೋರಲಾಯಿತು. ನಂತರ ಸ್ನೇಹಸಮ್ಮಿಲನದ ಬೆಳ್ಳಿಹಬ್ಬದಲ್ಲಿ ಗೆಳೆಯ, ಗೆಳತಿಯರು ಒಡಗೂಡಿ ತಮ್ಮ ಇಪ್ಪತ್ತೈದು ವರ್ಷಗಳ ಹಳೆಯ ನೆನಪುಗಳನ್ನು ಮೆಲುಕು ಹಾಕುವುದರ ಮೂಲಕ ಸಂಭ್ರಮಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version