ಸಿನಿ ಸುದ್ದಿ
‘ದಿ ವಿಲನ್’ ಸಿನೆಮಾಗೆ U/A ಸರ್ಟಿಫಿಕೇಟ್..!
ಸುದ್ದಿದಿನ ಡೆಸ್ಕ್ : ಬಹುನಿರೀಕ್ಷಿತ ದಿ ವಿಲನ್ ಸಿನಿಮಾದ ರಿಲೀಸ್ ಡೇಟ್ ಫೈನಲಿ ಅನೌನ್ಸ್ ಆಗಿದೆ. ಡಾ.ಶಿವರಾಜ್ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ದಿ ವಿಲನ್ ಸಿನಿಮಾ ಮುಂದಿನ ತಿಂಗಳು ಅಕ್ಟೋಬರ್ 18ಕ್ಕೆ ವಿಶ್ವದಾದ್ಯಂತ 1000ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ತೆರೆಗೆ ಬರಲಿದೆ.
ಸಿ.ಆರ್ ಮನೋಹರ್ ನಿರ್ಮಾಣದ, ಜೋಗಿ ಪ್ರೇಮ್ ನಿರ್ದೇಶನದ ದಿ ವಿಲನ್ ಸಿನಿಮಾ ಇದೇ ಅಕ್ಟೋಬರ್ 18ಕ್ಕೆ ತೆರೆಗೆ ಬರಲು ರೆಡಿಯಾಗಿದೆ. ರಿಲೀಸ್ ಕುರಿತಾದ ಅಧಿಕೃತ ಮಾಹಿತಿಯನ್ನ, ಗಣೇಶ ಹಬ್ಬದ ಸಂದರ್ಭದಲ್ಲಿ ನಿರ್ದೇಶಕ ಪ್ರೇಮ ಹೊರಹಾಕಿದ್ದಾರೆ. ಈಗಾಗ್ಲೆ ಸಿನಿಮಾದ ಸೆನ್ಸಾರ್ ಮುಗಿದಿದ್ದು, ಸಿನಿಮಾಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಈಗ ಸಿನಿಮಾದ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಲಾಗಿದೆ.
ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ದಿ ವಿಲನ್ ಮೂರು ಭಾಷೆಗಳಲ್ಲಿ ತೆರೆಗೆ ಬರ್ತಾ ಇದೆ. ಕನ್ನಡದ ಜೊತೆಗೆ ತಮಿಳು ಹಾಗೂ ತೆಲುಗಿನಲ್ಲಿ ದಿ ವಿಲನ್ ಸಿನಿಮಾ ರಿಲೀಸ್ ಆಗ್ತಾ ಇದೆ. ತೆಲುಗು ಹಾಗು ತಮಿಳಿನಲ್ಲಿ ಕಿಚ್ಚ ಸುದೀಪ್ಗೆ ದೊಡ್ಡ ಫ್ಯಾನ್ ಬೇಸ್ ಇದ್ದು, ಶಿವಣ್ಣ ಮಾಸ್ ಹೀರೋ ಆಗಿ ತಮಿಳು, ತೆಲುಗಿನಲ್ಲೂ ದಿ ವಿಲನ್ ಮೂಲಕ ಅಬ್ಬರಿಸಲಿದ್ದಾರೆ. ಈಗಾಗ್ಲೆ ಸಿನಿಮಾದ ಹಾಡುಗಳು ರಿಲೀಸ್ ಆಗಿ ಭರ್ಜರಿ ರೆಸ್ಪಾನ್ಸ್ ಪಡೆದಿದ್ದು, ಸಿನಿಮಾಕ್ಕಾಗಿ ಕಾಯ್ತಾ ಇದ್ದ ಫ್ಯಾನ್ಸ್ಗೆ ಹಬ್ಬದ ದಿನ ಭರ್ಜರಿ ಉಡುಗೊರೆ ಸಿಕ್ಕಿದೆ.