ದಿನದ ಸುದ್ದಿ
ಕೇರಳಕ್ಕೆ 700 ಕೋಟಿ ರೂ. ದೇಣಿಗೆ ನೀಡಿದ ಅರಬ್ ದೇಶ
ಸುದ್ದಿದಿನ ಡೆಸ್ಕ್: ಮಹಾಮಳೆಗೆ ತತ್ತರಿಸಿ ಹೋಗಿರುವ ಕೇರಳ ರಾಜ್ಯಕ್ಕೆ ನೆರವಿನ ಹಸ್ತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅರಬ್ ರಾಷ್ಟ್ರಗಳು ನೆರವಿಗೆ ಬಂದಿದೆ. 700 ಕೋಟಿ ರೂ. ಆರ್ಥಿಕ ನೆರವು ನೀಡಲು ಮುಂದಾಗಿದೆ. ಕೇರಳವನ್ನು ಮರುನಿರ್ಮಾಣ ಮಾಡಲು ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರಧಾನಿ ಮೊಹಮ್ಮದ್ ಬಿನ್ ರಶೀದ್ ಅಲ್ ಮುಕ್ತೌಮ್ ತುರ್ತು ಸಮಿತಿ ರಚನೆ ಮಾಡಲಾಗುವುದು. ಎಲ್ಲರೂ ಸ್ವಪ್ರೇರಣೆಯಿಂದ ದೇಣಿಗೆ ನೀಡುವಂತೆ ಎರಡು ದಿನಗಳ ಹಿಂದೆ ಟ್ವಿಟರ್ ಮಾಡಿದ್ದಾರೆ.
ಶತಮಾನದಲ್ಲಿ ಕಂಡುಕೇಳರಿಯದಂಥ ಕೇರಳದಲ್ಲಿ ಪ್ರವಾಹ ಉಂಟಾಗಿದ್ದು, ಇದು ಪ್ರಪಂಚದ ಗಮನ ಸೆಳೆದಿದೆ. ಜನರು ತಾವಾಗಿಯೇ ದೇಣಿಗೆ ನೀಡಲು ಮುಂದೆ ಬರುತ್ತಿದ್ದಾರೆ. ಅದರಲ್ಲೂ ಅರಬ್ ನಲ್ಲಿರುವ ಕೇರಳಿಗರು 100 ಮಿಲಿಯನ್ ಡಾಲರನ್ನು ನೀಡುವುದಾಗಿ ಪ್ರಧಾನಿ ಅವರಿಗೆ ತಿಳಿಸಿದ್ದಾರೆ.