ಸಿನಿ ಸುದ್ದಿ

ತಂಗಿಗಾಗಿ ಮದುವೆ ನಿರಾಕರಿಸುವನೇ ಸಂತು? ವೀಕ್ಷಿಸಿ ಇಂದು ರಾತ್ರಿ 8ಕ್ಕೆ ನಿಮ್ಮ ಉದಯ ಟಿವಿಯಲ್ಲಿ

Published

on

ಸುದ್ದಿದಿನ ಡೆಸ್ಕ್ : ಪ್ರೀತಿಸ್ತಿರೋ ಶಿವರಂಜಿನಿಗಾಗಿ ಮನೆಗೆಲಸದವನಾಗಿ ಬಂದು, ಎಲ್ಲರ ಮನವೊಲಿಸಿ ಹಲವಾರು ಕಥೆಕಟ್ಟಿ, ಸಂತು ಕೊನೆಗೂ ಅವಳನ್ನ ಮದುವೆಯಾಗುವಲ್ಲಿ ಸಫಲನಾಗುತ್ತಾನೆ. ಆದರೆ ಅಷ್ಟರಲ್ಲೇ ತಂಗಿ ಖುಷಿಯ ಕಿಡ್ನ್ಯಾಪ್ ಆಗಿ ಸಂಭ್ರಮವನ್ನ ಸಂಭ್ರಮಿಸಲಾಗದೇ ಒದ್ದಾಡುತ್ತಿರುತ್ತಾನೆ. ಮದುವೆ ಮನೆಯಂತೆ ಅಲಂಕಾರಗೊಂಡಿರೋ ರೂಮು, ಒಬ್ಬ ಪುರೋಹಿತ, ಹೋಮಕುಂಡ ಇವೆಲ್ಲವನ್ನ ನೋಡಿ ಬಂಧಿಯಾಗಿರುವ ಖುಷಿ ಗಾಬರಿಯಾಗುತ್ತಾಳೆ. ತಾನೆಲ್ಲಿರುವೆ ಎಂಬ ಗೊಂದಲದ ನಡುವೆ ಮಂತ್ರ ಹೇಳುತ್ತಿರೋ ಪುರೋಹಿತನಲ್ಲಿ ಕೇಳಿದಾಗ ಇದು ತನ್ನದೇ ಮದುವೆ ಎಂಬ ಆಘಾತ ಅವಳಿಗೆ ಆಗುವುದು. ಅವಳನ್ನ ಅಪಹರಿಸಿರುವುದು ಯಾರು? ಅವಳು ಎಲ್ಲಿರುವಳೆಂದು ಗೊಂದಲದಲ್ಲಿರುವ ಸಂತು ಕಂಗಾಲಾಗಿದ್ದಾನೆ.

ಅವನ ದುಗುಡ ಬೇಸಾರವನ್ನ ಕಂಡ ವೀರ ಪ್ರತಾಪನಿಗೆ ಈ ಮದುವೆ ನಿಂತು ಹೋಗಿ ಅಲಮೇಲಮ್ಮನ ಮಾನ ವiರ್ಯಾದೆ ಹೋಗುವುದೆಂಬ ಆತಂಕ. ಹಾಗಾಗಿ ಸಂತು ಬಳಿ ಬಂದು ಮದುವೆ ನಡೆಯದೇ ಹೋದರೆ ಕೊಲೆ ಮಾಡುವುದಾಗಿ ಅವನನ್ನ ಅಲಮೇಲಮ್ಮ ಬೆದರಿಸುತ್ತಾಳೆ. ಸಾವಿರ ಸುಳ್ಳು ಹೇಳಿ ಮದುವೆ ಮಾಡು ಎಂಬಂತೆ ಇಲ್ಲಿ ಸಂತು ಹಲವಾರು ಕಥೆಕಟ್ಟಿ ಇವಾಗ ಫಜೀತಿಗೆ ಸಿಕ್ಕಿಬಿದ್ದಿದ್ದಾನೆ. ಈ ಎಲ್ಲ ಆಘಾತಕಾರಿ ಬೆಳವಣಿಗೆ ಕಂಡು, ಇಲ್ಲಿಯವರೆಗೂ ಆಡಿದ ನಾಟಕವನ್ನೆಲ್ಲ ಅಲಮೇಲಮ್ಮನಿಗೆ ಹೇಳಿ ಈ ಮದುವೆ ಮುರಿದು ತಂಗಿನ ಹುಡುಕೋ ನಿರ್ಧಾರ ಮಾಡುತ್ತಾನೆ ಸಂತು. ತನ್ನ ಬದ್ಧ ವೈರಿ ಕೃಷ್ಣವೇಣಿಯ ಮಗ ಸಂತು ಎಂದು ಗೊತ್ತಾದರೇ ಅಲಮೇಲಮ್ಮ ಅವನನ್ನ ಸುಮ್ಮನೆ ಬಿಡುವಳೇ? ಸಂತು ಈ ಇಲ್ಲ ಚಕ್ರವ್ಯೂಹದಿಂದ ಹೇಗೆ ಹೊರಬರುತ್ತಾನೆ ಅನ್ನೋ ಕುತೂಹಲ ಉದಯಟಿವಿಯಲ್ಲಿ ಪ್ರಸಾರವಾಗ್ತಿರೋ ಇಂದಿನ ಬ್ರಹ್ಮಾಸ್ತ್ರ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.
ವೀಕ್ಷಿಸಿ ‘ಬ್ರಹ್ಮಾಸ್ತ್ರ’ ಇಂದು (12.09.18) ರಾತ್ರಿ 8ಕ್ಕೆ ಉದಯ ಟಿವಿಯಲ್ಲಿ.

Leave a Reply

Your email address will not be published. Required fields are marked *

Trending

Exit mobile version