ದಿನದ ಸುದ್ದಿ
ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ
ಸುದ್ದಿದಿನ ಡೆಸ್ಕ್ : ಸಿಎಂ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ್ದಾರೆ. ಫೇಸ್ಬುಕ್ ಲೈವ್ ಮೂಲಕ ರಾಜೀನಾಮೆ ಘೋಷಿಸಿದ್ರು. ವಿಶ್ವಾಸ ಮತಕ್ಕೂ ಮುನ್ನವೇ ಉದ್ಧವ್ ಠಾಕ್ರೆ ರಿಸೈನ್ ಮಾಡಿದ್ದಾರೆ.
ಇಷ್ಟು ದಿನ ಸಹಕರಿಸಿದ ಸೋನಿಯಾ, ಶರದ್ ಪವಾರ್ಗೆ ಉದ್ಧವ್ ಧನ್ಯವಾದ ತಿಳಿಸಿದ್ರು. ಧನ್ಯವಾದದ ಬಳಿಕ ಸಿಎಂ ಠಾಕ್ರೆ ರಾಜೀನಾಮೆ ಘೋಷಿಸಿದ್ರು.
ರಾಜ್ಯಪಾಲರ ಸೂಚನೆಯಂತೆ ನಾಳೆ (ಜೂನ್ 30) ರಂದು ವಿಶ್ವಾಸ ಮತಯಾಚನೆ ಮಾಡಿ ಎಂದು ಉದ್ಧವ್ ಠಾಕ್ರೆ ನೇತೃತ್ವದ ಮೈತ್ರಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243