ರಾಜಕೀಯ

‘ಮಹಾ’ ಸರ್ಕಾರ ಉಳಿಸಲು ರಾಜಕೀಯ ರಂಗಕ್ಕೆ ಎಂಟ್ರಿ ಕೊಟ್ಟ ಉದ್ಧವ್‌ ಪತ್ನಿ ರಶ್ಮಿ ಠಾಕ್ರೆ

Published

on

ಸುದ್ದಿದಿನ,ಮುಂಬೈ: ಮಹಾರಾಷ್ಟ್ರದ ಕಾಂಗ್ರೆಸ್-ಶಿವಸೇನೆ-ಎನ್ಸಿಪಿ ಯ ಮಹಾ ವಿಕಾಸ ಅಘಾಡಿ ಸರ್ಕಾರ ಉಳಿಸುವ ನಿಟ್ಟಿನಲ್ಲಿ ಸಿಎಂ ಉದ್ಧವ್‌ ಠಾಕ್ರೆಯವರ ಪತ್ನಿ ರಶ್ಮಿ ಠಾಕ್ರೆ ಅವರು ರಾಜಕೀಯ ಚದುರಂಗದ ಆಟಕ್ಕೆ ಇಳಿದಿದ್ದಾರೆ.

ಶಿವಸೇನೆಯ ಪಕ್ಷದ ಬಂಡಾಯ ಶಾಸಕರಿಗೆ ಕರೆ ಮಾಡಿ ಉದ್ಧವ್‌ ಠಾಕ್ರೆ ಪರವೇ ನಿಲ್ಲುವಂತೆ ಫೋನ್‌ ಮಾಡುತ್ತಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ಬಂಡಾಯ ಶಾಸಕರ ಪತ್ನಿಯರಿಗೆ ಕರೆ ಮಾಡಿ ಸಿಎಂ ಠಾಕ್ರೆ ಅವರ ಇರುವಂತೆ ಮನವೊಲಿಸಿ ಎಂದು ರಶ್ಮಿ ಠಾಕ್ರೆ ಪೋನ್ ಮೂಲಕ ಕೇಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ರಶ್ಮಿ ಠಾಕ್ರೆ ಅವರ ಕರೆಯ ಮೇರೆಗೆ ಕೆಲವು ಶಾಸಕರ ಪತ್ನಿಯರು ದೂರದ ಗುವಾಹಾಟಿ­ಯಲ್ಲಿರುವ ತಮ್ಮ ಪತಿಯಂದಿರಿಗೆ ಡಯಲ್‌ ಮಾಡಿದ್ದಾರಂತೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version