ದಿನದ ಸುದ್ದಿ

ಯುಕ್ರೇನ್ – ರಷ್ಯ ಯುದ್ಧ | ನವೀನ್ ಮೃತದೇಹ ಭಾರತಕ್ಕೆ ತರುವುದು ಕಷ್ಟ : ಸಿಎಂ ಬಸವರಾಜ ಬೊಮ್ಮಾಯಿ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ಬೆಂಗಳೂರು: ಕನ್ನಡಿಗ ನವೀನ್ ಉಕ್ರೇನ್ಗೆ ವಿದ್ಯಾಭ್ಯಾಸಕ್ಕೆಂದು ತೆರಳಿದ್ದವರು ರಷ್ಯಾ ದಾಳಿಗೆ ಮಂಗಳವಾರ ಬಲಿಯಾಗಿದ್ದಾರೆ. ನಾವು ಅವರ ಕುಟುಂಬಕ್ಕೆ ಪರಿಹಾರ ನೀಡುತ್ತೇವೆ ಅಂತ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಮುಖಮಂತ್ರಿ ಬಸವರಾಜ ಬೊಮ್ಮಾಯಿ, ನವೀನ್ ಮೃತದೇಹ ಹೋಲುವ ಕೆಲವು ಫೋಟೋ ದೊರಕಿವೆ. ನವೀನ್ ಸ್ನೇಹಿತರು ಫೋಟೋಗಳನ್ನು ಕಳುಹಿಸಿದ್ದಾರೆ. ಈ ಬಗ್ಗೆ ಭಾರತದ ರಾಯಭಾರ ಕಚೇರಿ ಜತೆ ಚರ್ಚೆ ಮಾಡುತ್ತೇನೆ. ಮೃತದೇಹವನ್ನು ಭಾರತಕ್ಕೆ ತರಲು ಪ್ರಯತ್ನಿಸುತ್ತೇವೆ. ಯುದ್ಧ ನಡೆಯುತ್ತಿರುವ ಹಿನ್ನೆಲೆ ಸ್ವಲ್ಪ ಕಷ್ಟವಾಗುತ್ತಿದೆ ಎಂದರು.

ಇದನ್ನೂ ಓದಿ |ವಿಡಿಯೋ | ಮನೆಗೆ ಮರಳಿದ ನಿಮಗೆ ಸ್ವಾಗತ : ಉಕ್ರೇನ್ ನಿಂದ ಹಿಂದಿರುಗಿದವರನ್ನು ಸ್ವಾಗತಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ

ನವೀನ್ ಜತೆಗಿದ್ದ ಸ್ನೇಹಿತರ ಮಾಹಿತಿ ಕಲೆಹಾಕುತ್ತಿದ್ದು, ಇಂತಹ ಯುದ್ಧದ ಸಮಯದಲ್ಲಿ ಕಾಂಗ್ರೆಸ್ ರಾಜಕಾರಣ ಮಾತನಾಡುತ್ತದೆ. ಅಂದರೆ ಕಾಂಗ್ರೆಸ್ ಎಷ್ಟು ತಳ ಮಟ್ಟಕ್ಕೆ ಹೋಗಿದೆ ಅನ್ನುವುದು ಗೊತ್ತಾಗುತ್ತದೆ. ಈ ಹಿಂದೆ ಯುದ್ಧ ನಡೆದಾಗ ಒಬ್ಬರನ್ನು ಕರೆತರಲಿಲ್ಲ. ಈಗ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version