ದಿನದ ಸುದ್ದಿ
ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತದೊಂದಿಗೆ ‘ಉಮ್ಮೀದ್ -2024’ ಕಾಯ್ದೆಯಾಗಿ ಜಾರಿ
ಸುದ್ದಿದಿನಡೆಸ್ಕ್:ವಕ್ಫ್ ತಿದ್ದುಪಡಿ ಮಸೂದೆ, ಏಕೀಕೃತ ವಕ್ಫ್ ನಿರ್ವಹಣೆ ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ, ‘ಉಮ್ಮೀದ್ 2024’, ರಾಷ್ಟ್ರ ಪತಿ ದ್ರೌಪದಿ ಮುರ್ಮು ಅವರ ಅಂಕಿತದೊಂದಿಗೆ, ಕಾಯ್ದೆಯಾಗಿ, ದೇಶಾದ್ಯಂತ ಜಾರಿಗೊಂಡಿವೆ.
ಮುಸಲ್ಮಾನ್ ವಕ್ಫ್ ರದ್ದು ಮಸೂದೆ – 2024ಕ್ಕೂ ರಾಷ್ಟ್ರ ಪತಿಯವರು, ತಮ್ಮ ಒಪ್ಪಿಗೆ ಸೂಚಿಸಿದ್ದು, ಆ ಕಾಯ್ದೆ ರದ್ದುಗೊಂಡಿದೆ. ದೇಶಾದ್ಯಂತ ವಕ್ಫ್ ಆಸ್ತಿ ನಿರ್ವಹಣೆ ಹಾಗೂ ಆಡಳಿತದ ಜೊತೆಗೆ, ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು, ಉಮ್ಮೀದ್ ಕಾಯ್ದೆ ಹೊಂದಿದೆ. ವಕ್ಫ್ ರಚನೆಯನ್ನು ಮರು ವ್ಯಾಖ್ಯಾನಿಸಿ, ಸರ್ಕಾರದ ಮೇಲ್ವಿಚಾರಣೆಯನ್ನು ಸಬಲೀಕರಿಸುವುದಕ್ಕೆ ಆದ್ಯತೆ ನೀಡಲಾಗಿದೆ.
ವಕ್ಫ್ ತಿದ್ದುಪಡಿ ಕುರಿತು, ಜಂಟಿ ಸಂಸದೀಯ ಮಂಡಳಿಯಲ್ಲಿ ನಡೆದ ಚರ್ಚೆಗಳು ಐತಿಹಾಸಿಕ; ಸಂವಿಧಾನ ಮತ್ತು ಕಾನೂನು ತಜ್ಞರ ಸಲಹೆ ಪಡೆದು, ವಕ್ಫ್ ತಿದ್ದುಪಡಿ ಮಸೂದೆ- 2024 ‘ಉಮ್ಮೀದ್’ ಹಾಗೂ ಮುಸಲ್ಮಾನ್ ವಕ್ಫ್ ರದ್ದು ಮಸೂದೆ – 2024 ಅನ್ನು, ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಲಾಗಿದೆ ಎಂದು, ಕೇಂದ್ರದ ಅಲ್ಪ ಸಂಖ್ಯಾತರ ವ್ಯವಹಾರಗಳ ಖಾತೆ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.
ಲೋಕಸಭೆಯಲ್ಲಿ, 288 ಸಂಸದರು ಮಸೂದೆಗಳ ಪರ ಹಾಗೂ 232ಸಂಸದರು ವಿರೋಧ ನಿಲುವು ತಾಳಿ, ಮತ ಚಲಾಯಿಸಿದ್ದಾರೆ.
ರಾಜ್ಯಸಭೆಯ128 ಜನ ಸಂಸದರು, ಮಸೂದೆಯ ಪರವಾಗಿ ಹಾಗೂ 95 ಜನ ಸಂಸದರು, ಮಸೂದೆಯ ವಿರುದ್ಧ ತಮ್ಮ ನಿಲುವು ವ್ಯಕ್ತಪಡಿಸಿ, ಮತ ಚಲಾಯಿಸಿದರು.
ಕನಿಷ್ಠ ಇಬ್ಬರು ಮಹಿಳಾ ಸದಸ್ಯೆಯರು ಸೇರಿದಂತೆ, ಕೇಂದ್ರ ವಕ್ಫ್ ಮಂಡಳಿಯ ಎಲ್ಲಾ ಸದಸ್ಯರು ಮುಸ್ಲಿಮರಾಗಿರಬೇಕು. ಇಬ್ಬರು ಸದಸ್ಯರು ಮುಸ್ಲಿಮೇತರರಾಗಿರಬೇಕು. ಸಂಸದರು, ವಿಶ್ರಾಂತ ನ್ಯಾಯಾಧೀಶರು ಮತ್ತು ಕಾಯ್ದೆಯ ಪ್ರಕಾರ ಮಂಡಳಿಗೆ ನೇಮಕಗೊಂಡ ಗಣ್ಯ ವ್ಯಕ್ತಿಗಳು, ಮುಸ್ಲಿಮರಾಗಿರಬೇಕಿಲ್ಲ.
ಮುಸ್ಲಿಮೇತರ ಸದಸ್ಯರು ಮತ್ತು ಮಹಿಳೆಯರನ್ನು, ವಕ್ಫ್-ಸಂಬಂಧಿತ ಸಂಸ್ಥೆಗಳಲ್ಲಿ ಸೇರಿಸಿಕೊಳ್ಳುವ ಮೂಲಕ, ಒಳಗೊಳ್ಳುವಿಕೆಯನ್ನು ಖಚಿತಪಡಿಸುವುದಕ್ಕೆ, ಆದ್ಯತೆ ನೀಡಲಾಗಿದೆ.
ಈ ನಿಬಂಧನೆಗಳು, ದೇಶದಲ್ಲಿ, ವಕ್ಫ್ ಆಸ್ತಿ ನಿರ್ವಹಣೆಯನ್ನು, ಪಾರದರ್ಶಕ, ವಿಶ್ವಾಸಾರ್ಹ ಹಾಗೂ ತಂತ್ರಜ್ಞಾನ ಆಧರಿಸಿ, ಆಧುನೀಕರಿಸುವ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ ಎಂದು, ಸ್ಪಷ್ಟ ಪಡಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243