ದಿನದ ಸುದ್ದಿ

ನ್ಯಾಷನಲ್ ಕಾಲೇಜು ಸಂಸ್ಥಾಪಕ ಉಮಾಪತಿ ನಲ್ಕುದುರೆ ನಿಧನ : ಸಂತಾಪ‌ ಸೂಚನೆ

Published

on

ಸುದ್ದಿದಿನ, ದಾವಣಗೆರೆ: ದಾವಣಗೆರೆ ಜಿಲ್ಲೆಯ, ಚನ್ನಗಿರಿ ತಾಲೂಕಿನ, ನಲ್ಕುದುರೆ ಗ್ರಾಮದ ಉಮಾಪತಿ ನಲ್ಕುದುರೆ (89) ವಯೋಸಹಜ ಖಾಯಿಲೆಯಿಂದ ಸೋಮವಾರ (ಅ.12) ನಿಧನರಾದರು. ಇವರು ನ್ಯಾಷನಲ್ ಕಾಲೇಜಿನ ಸಂಸ್ಥಾಪಕರು ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರಾಗಿದ್ದರು.

ಸೋಮವಾರ ಇವರ ಅಂತ್ಯಕ್ರಿಯೆ ನಡೆಸಲಾಗಿದ್ದು, ಪತ್ನಿ ಶಾರದಮ್ಮ, ಮಕ್ಕಳು,‌ಮೊಮ್ಮಕ್ಕಳು ಹಾಗೂ ಮರಿ ಮೊಮ್ಮಕ್ಕಳು ಸಂತಾಪ‌ ಸೂಚಿಸಿದ್ದಾರೆ.

ಮೊಮ್ಮಗಳಾದ ಎಂ.ಜಿ.ಶಶಿಕಲಾ‌ಮೂರ್ತಿ, ಕಾಂಗ್ರೆಸ್ ನ ಬಸವಾಪಟ್ಟಣ ಬ್ಲಾಕ್ ನ ಮಹಿಳಾ ಅಧ್ಯಕ್ಷೆ, ವೀರಶೈವ ಮಹಾ ಸಭಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಇವರು ತೀವ್ರ ಸಂತಾಪ ಸೂಚಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version