ಲೈಫ್ ಸ್ಟೈಲ್

ಮಳೆಗಾಲಕ್ಕೆ ಕಿವಿಯಲ್ಲೂ ಅಂಬ್ರೆಲ್ಲಾ..!

Published

on

ರೋ ಅಂತ ನಿನ್ನೆಯ ಮಳೆಗೆ ಬೆಂಗಳೂರು ಕಕ್ಕಾಬಿಕ್ಕಿ. ಮಳೆರಾಯನ ಆರ್ಭಟಕ್ಕೆ ಎಲ್ಲವೂ ನೀರು ಪಾಲು. ಮಳೆ ಎಂದೊಡನೆ ನೆನಪಾಗುವುದು ‘ಕೊಡೆ’. ಮಳೆಗಾಲದಲ್ಲಿ ಪ್ರತಿ ಒಬ್ಬರ ಕೈಯಲ್ಲೊಂದು ಛತ್ರಿ ಇದ್ದೇ ಇರುತ್ತದೆ. ಈಗ ಫ್ಯಾಷನ್ ದುನಿಯಾದಲ್ಲೂ ಫ್ಯಾಷನ್ ಮಳೆ ಜೋರಾಗಿದೆ. ಈ ಫ್ಯಾಷನ್ ಮಳೆಯ ಅಬ್ಬರದಲ್ಲಿ ಕಿವಿಗೂ ಅಂಬ್ರೆಲ್ಲಾ ಓಲೆ ಟ್ರೆಂಡ್ ಸೃಷ್ಟಿಸಿದೆ.

ಹೌದು ಸ್ವಾಮಿ! ಕೈಯಲ್ಲಿರುವ ಛತ್ರಿ ಮಹಿಳೆಯರ ಕಿವಿಗೆ ತಲುಪಿದೆ. ಮಿನಿಯೇಚರ್ ಅಂಬ್ರೆಲ್ಲಾ ಡಿಸೈನ್ ನ ಕಿವಿ ಓಲೆಗಳು ಈಗ ವೈರಲ್.‌ ಕಾಲಕ್ಕೆ ತಕ್ಕಂತೆ ಬದಲಾಗುವ ಆಭರಣ ಲೋಕದಲ್ಲಿ ಸದ್ಯ  ಮಳೆಗಾಲದ  ಅಂಬ್ರೆಲ್ಲಾ ಇಯರಿಂಗ್ ಮಹಿಳೆಯರ ಹಾಟ್ ಫೇವರಿಟ್ ಆಗಿದೆ.

ಕಲರ್ಫುಲ್ ಅಂಬ್ರೆಲ್ಲಾ ಇಯರಿಂಗ್ ಈ ಸೀಸನ್ ನ ಸ್ಟೈಲ್ ಸ್ಟೇಟ್ ಮೆಂಟ್ ಆಗಿರುವುದು ಮಳೆರಾಯನಿಗೂ ಖುಷಿ ಕೊಟ್ಟಂಗಿದೆ. ಹಾಗಾದರೆ ತಡ ಯಾಕೆ, ನೀವೂ ಛತ್ರಿ ಯನ್ನು ಕೊನೆಗೊಮ್ಮೆ ಇಟ್ಟು ನೋಡಿ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version