ದಿನದ ಸುದ್ದಿ

ಅನಧಿಕೃತ ಪ್ರಚಾರ ; 673 ಎಫ್‌ಐಆರ್ ದಾಖಲು

Published

on

ಸುದ್ದಿದಿನ ಡೆಸ್ಕ್ : ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು, ಸಾರ್ವಜನಿಕ ಸಭೆಗಳು, ಅನಧಿಕೃತ ಪ್ರಚಾರ ಸೇರಿದಂತೆ ಇಲ್ಲಿಯವರೆಗೆ ಒಟ್ಟು 673 ಎಫ್‌ಐಆರ್ ದಾಖಲಿಸಲಾಗಿದೆ.

ವಿವಿಧೆಡೆ ವಿತರಿಸುತ್ತಿದ್ದ ನಗದು, ಮದ್ಯ, ಮಾದಕ ದ್ರವ್ಯ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದಿರುವ ವಿಚಕ್ಷಣ ದಳ ಮತ್ತು ಪೊಲೀಸರು 2 ಸಾವಿರದ 36 ಪ್ರಥಮ ತನಿಖಾ ವರದಿ ದಾಖಲಿಸಿದ್ದಾರೆ. ಚುನಾವಣೆ ಘೋಷಣೆಯಾದ ದಿನದಿಂದ ಇಲ್ಲಿಯವರೆಗೆ ಒಟ್ಟಾರೇ 69 ಸಾವಿರದ 778ಶಸ್ತ್ರಾಸ್ತ್ರಗಳನ್ನು ಜಮೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಇಲ್ಲಿಯವರೆಗೂ ಸಿಆರ್ ಪಿಸಿ ಕಾಯ್ದೆಯಡಿ 5 ಸಾವಿರದ 80 ಪ್ರಕರಣಗಳನ್ನು ದಾಖಲಿಸಲಾಗಿದ್ದು, 13 ಸಾವಿರದ 640 ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಲಾಗಿದೆ. ಅಬಕಾರಿ ಇಲಾಖೆ ಒಟ್ಟು 19 ಸಾವಿರದ 122 ಪ್ರಕರಣ ದಾಖಲಿಸಿದ್ದು, 1 ಸಾವಿರದ 776 ವಿವಿಧ ಮಾದರಿಯ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದರು.

ಮತದಾರರ ಸಹಾಯವಾಣಿ ಮೂಲಕ ಸ್ವೀಕರಿಸಲಾದ 18 ಸಾವಿರದ 315 ಕರೆಗಳನ್ನು ಇತ್ಯರ್ಥಪಡಿಸಲಾಗಿದೆ. ವಿವಿಧ ಮಾಧ್ಯಮಗಳ ಮೂಲಕ ಒಟ್ಟು 1 ಸಾವಿರದ 29 ದೂರುಗಳು ಬಂದಿದ್ದು, 767 ದೂರುಗಳನ್ನು ಬಗೆಹರಿಸಲಾಗಿದೆ ಎಂದರು.

ಸಿ-ವಿಜಿಲ್ ಆಪ್ ಮೂಲಕ 6 ಸಾವಿರದ 447 ದೂರು ಸ್ವೀಕರಿಸಲಾಗಿದ್ದು, ಈ ಪೈಕಿ 5 ಸಾವಿರದ 483 ದೂರುಗಳು ನಿಜವೆಂದು ಕಂಡುಬಂದಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗಿದೆ.
ಸುವಿಧಾ ಅಡಿಯಲ್ಲಿ ವಿವಿಧ ಅನುಮತಿ ಕೋರಿ ಸ್ವೀಕರಿಸಲಾದ ಒಟ್ಟು 12 ಸಾವಿರದ 518ಅರ್ಜಿಗಳಲ್ಲಿ 10 ಸಾವಿರದ 71 ಅರ್ಜಿಗಳಿಗೆ ಅನುಮತಿ ನೀಡಲಾಗಿದೆ. 500 ಬಾಕಿ ಉಳಿದಿದ್ದು, 277 ಅರ್ಜಿಗಳು ರದ್ದಾಗಿವೆ ಎಂದು ಅವರು ಮಾಹಿತಿ ನೀಡಿದರು.

ಐವರು ಅಭ್ಯರ್ಥಿ

ಚುನಾವಣೆಯಲ್ಲಿ 2 ಸಾವಿರದ 427 ಪುರುಷರು, 185 ಮಹಿಳೆಯರು ಸೇರಿದಂತೆ ಒಟ್ಟು 2 ಸಾವಿರದ 613 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಳ್ಳಾರಿ ನಗರ ಕ್ಷೇತ್ರದಲ್ಲಿ ಅತಿ ಹೆಚ್ಚು 24 ಅಭ್ಯರ್ಥಿಗಳು ಕಣದಲ್ಲಿದ್ದರೆ, ಯಮಕನ ಮರಡಿ, ದೇವದುರ್ಗ, ತೀರ್ಥಹಳ್ಳಿ, ಕುಂದಾಪುರ, ಕಾಪು, ಮಂಗಳೂರು, ಬಂಟ್ವಾಳ ಕ್ಷೇತ್ರದಲ್ಲಿ ಅತಿ ಕಡಿಮೆ ಐವರು ಅಭ್ಯರ್ಥಿಗಳಿರುವುದಾಗಿ ಮನೋಜ್ ಕುಮಾರ್ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243,

Trending

Exit mobile version