ದಿನದ ಸುದ್ದಿ

ಅಸ್ಸಾಂನ ಸಹಾರಪುರದಲ್ಲಿನ ಭಾರತ – ಬಾಂಗ್ಲಾ ಗಡಿ ಪ್ರದೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಭೇಟಿ

Published

on

ಸುದ್ದಿದಿನ ಡೆಸ್ಕ್ : ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಅಸ್ಸಾಂನ ದಕ್ಷಿಣ ಸಲ್ಮಾರ್‌ನ ಮನ್‌ಕಚಾರ್ ಜಿಲ್ಲೆಗೆ ಭೇಟಿ ನೀಡಿದರು.

ನಂತರ ಗುವಾಹತಿಯಿಂದ 245 ಕಿಲೋಮೀಟರ್ ದೂರವಿರುವ ಸಹಾರಪುರದಲ್ಲಿನ ಭಾರತ – ಬಾಂಗ್ಲಾ ಗಡಿಪ್ರದೇಶವನ್ನು ಪರಿಶೀಲಿಸಲಿದ್ದು, ಗಡಿವಿಷಯಕ್ಕೆ ಸಂಬಂಧಿಸಿದಂತೆ ಅಲ್ಲಿನ ಬಿಎಸ್‌ಎಫ್ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಮೂರು ದಿನಗಳ ಅಸ್ಸಾಂ ಭೇಟಿಗಾಗಿ ಅಮಿತ್ ಷಾ ಅವರು ಗುವಾಹತಿಗೆ ಆಗಮಿಸಿದ್ದಾರೆ. ಈಶಾನ್ಯ ರಾಜ್ಯಗಳ ಪೊಲೀಸ್ ಹಾಗೂ ಕೇಂದ್ರ ಸಶಸ್ತ್ರಪಡೆಗಳ ದಾಸ್ತಾನು ಕೇಂದ್ರ ಮತ್ತು ಕೇಂದ್ರ ಕಾರ್ಯಾಗಾರಕ್ಕೆ ಸಚಿವರು ಅಡಿಗಲ್ಲು ಹಾಕಿದರು.

ಆನಂತರ ಸಚಿವರು ಮಧ್ಯಾಹ್ನ ತಮುಲ್‌ಪುರ್‌ನ ಕಾಲ್ಚನಿಯಲ್ಲಿ ಖಾದಿ ಹಾಗೂ ಗ್ರಾಮೋದ್ಯೋಗ ಗುಡಿಕೈಗಾರಿಕೆಗಳ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಹಾಗೆಯೇ ಕಾಮ್‌ರೂಪ್ ಜಿಲ್ಲೆಯ ಅಮಿಂಗಾವ್‌ನಲ್ಲಿ ಗಣತಿ ಕಾರ್ಯ ನಿರ್ದೇಶನಾಲಯದ ಕಚೇರಿ ಕಟ್ಟಡದ ಉದ್ಘಾಟನೆ ಹಾಗೂ ಎಸ್‌ಎಸ್‌ಬಿ ಕಟ್ಟಡಗಳ ಉದ್ಘಾಟನೆಯನ್ನು ವರ್ಚುಯಲ್ ಮೂಲಕ ನೆರವೇರಿಸಿದರು.

ಸಚಿವ ಅಮಿತ್ ಶಾ ಅವರು ಸಂಜೆ ಗುವಾಹತಿಯಲ್ಲಿ 300ಹಾಸಿಗೆಗಳ ಸಾಮರ್ಥ್ಯವಿರುವ ಗುವಾಹತಿ ಮೆಡಿಕಲ್ ಕಾಲೇಜಿನ ಸೂಪರ್ ಸ್ಪೆಷಾಲಿಟಿ ಘಟಕ ಹಾಗೂ ಆಸ್ಪತ್ರೆ ಮತ್ತು ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾನಿಲಯವನ್ನು ಕೂಡ ಉದ್ಘಾಟಿಸಿದರು.

 

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version