ದಿನದ ಸುದ್ದಿ
ಅನ್ ಲಾಕ್ 4.0 ಮಾರ್ಗಸೂಚಿಯಲ್ಲೇನಿದೆ ಗೊತ್ತಾ..?
ಸುದ್ದಿದಿನ, ದೆಹಲಿ :ಕೇಂದ್ರ ಸರ್ಕಾರ ಇಂದು ಅನ್ ಲಾಕ್ 4 ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಅದರಂತೆ ಸೆಪ್ಟೆಂಬರ್ 7ರಿಂದ ದೇಶವ್ಯಾಪಿ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ. ಇನ್ನು ಸೆಪ್ಟೆಂಬರ್ 30ರವರೆಗೆ ಶಾಲಾ ಕಾಲೇಜುಗಳನ್ನು ತೆರೆಯುವಂತ್ತಿಲ್ಲ.
ಅಲ್ಲದೆ ಸೆಪ್ಟೆಂಬರ್ 21ರಿಂದ ರಾಜಕೀಯ, ಕ್ರೀಡೆ, ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳಲ್ಲಿ 100 ಜನರು ಭಾಗವಹಿಸಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243