ದಿನದ ಸುದ್ದಿ
ಉರ್ದು ಶಾಲೆಯ ಬಾಗಿಲು ಮುರಿದು ಕುಡುಕರ ಮೋಜು
ಸುದ್ದಿದಿನ,ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕಿನ ಹೊಳವನಹಳ್ಳಿಯ ಕರ್ನಾಟಕ ಪಬ್ಲಿಕ್ ಉರ್ದು ಶಾಲೆಯಲ್ಲಿ ಮದ್ಯಾಪಾನ ಮಾಡಿರುವ ಘಟನೆ ನಡೆದಿದೆ.
ಶಾಲೆಯ ಪಕ್ಕದಲ್ಲಿ ಉಪ ಪೊಲೀಸ್ ಠಾಣೆ ಹಾಗೂ ಗ್ರಾಮ ಪಂಚಾಯಿತಿ ಕಚೇರಿಯಿದ್ದರೂ ಕುಡುಕರು ಬಾಗಿಲು ಮುರಿದು ಮೋಜು-ಮಸ್ತಿ ಮಾಡಿದ್ದಾರೆ. ಈ ರೀತಿಯ ಘಟನೆಗಳು ಹಲವು ಬಾರಿ ನಡೆಯುತ್ತಿದ್ದು, ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಶಾಲೆಯಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳಿಗೆ ಕೂಡಲೇ ನಿಲ್ಲಿಸುವಂತೆ ಹಾಕುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243