ದಿನದ ಸುದ್ದಿ
ಉರ್ದು ಶಿಕ್ಷಕರಿಗೆ ಸನ್ಮಾನ
ಸುದ್ದಿದಿನ,ಚಿತ್ರದುರ್ಗ : ಜಿಲ್ಲೆಯ ಸರ್ಕಾರಿ ಉರ್ದು ಶಿಕ್ಷಕರ ಸಂಘ ವತಿಯಿಂದ (ನಿನ್ನೆ) ಶನಿವಾರ ಫಾರ್ತಿಮ ಶೇಖ್ ಜಿಲ್ಲಾ ಪ್ರಶಸ್ತಿ ವಿತರಿಸಲಾಯಿತು.
ಸವಿತ್ರಿಬಾಯಿ ಪುಲೆ ಮತ್ತು ಫಾರ್ತಿಮ ಶೇಖ್ ಜನ್ಮ ದಿನದ ಅಂಗವಾಗಿ ಜಿಲ್ಲೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಸರ್ಕಾರಿ ಉರ್ದು ಶಿಕ್ಷಕರಿಗೆ ಮತ್ತು ಶಿಕ್ಷಕಿಯರಿಗೆ ಸನ್ಮಾನಿಸಲಾಯಿತು .ಇದರಲ್ಲಿ ಸರ್ಕಾರಿ ಉರ್ದು ಶಾಲೆಯ ಶಿಕ್ಷಕರಿಗೆ ತಾಲ್ಲೂಕಿನ ಎರಡು ಶಿಕ್ಷಕರಂತೆ ಸನ್ಮಾನಿಸಲಾಯಿತು.
ಕಾರ್ಯ ಕ್ರಮಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರ ಅಧ್ಯಕ್ಷರಾದ ಮಾರುತೇಶ್ ರವರು ಸರ್ಕಾರಿ ಉರ್ದು ಶಿಕ್ಷಕರಿಗೆ ಅವರ ಜವಬ್ದಾರಿಗಳು ಕರ್ತವ್ಯಗಳು ನಿಭಾಯಿಸಬೇಕಾದ ಅಂಶಗಳ ಬಗ್ಗೆ ಮಾತನಾಡುತ್ತಾ, ಸರ್ಕಾರಿ ಉರ್ದು ಶಾಲೆಯ ಶಿಕ್ಷಕರಿಗೆ ಏನೇ ಸಮಸ್ಯೆ ಇದ್ದರು ಬಗೆ ಹರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸರ್ಕಾರಿ ಉರ್ದು ಶಿಕ್ಷಕರ ಸಂಘ ಅಧ್ಯಕ್ಷರಾದ ಹರೂನ್ ರಶೀದ್ ಸರ್ಕಾರಿ ಉರ್ದು ಶಿಕ್ಷಕರ ಸಂಘ ಕಾರ್ಯದರ್ಶಿಯಾದ ಹಿದಾಯತ್ ವುಲ್ಲಾ ಉರ್ದು ಶಾಲೆಯ ಇ.ಸಿ.ಓ ಸಮೀರಾ ಸರ್ಕಾರಿ ಉರ್ದು ಶಿಕ್ಷಕರು ,ಜಬೀವುಲ್ಲಾ. ಬಾಪೂಜಿ ಮತ್ತು ರೀಜನಲ್ ಶಾಲೆಯ ಅಧ್ಯಕ್ಷರಾದ ಶ್ರೀಯುತ ಅಪಾಕ ಅಹಮ್ಮದ್ ಸರ್ಕಾರಿ ಉರ್ದು ನಿವೃತಿ ಮುಖೋಪ್ಯಾಧಾಯರಾದ ಮಸ್ಸೂರ್ ಭಾಷ . ಚಳ್ಳಕೆರೆ ಉರ್ದು ಸಿ ಆರ್ ಪಿ ಮುಜಿಬ್ ಉರ್ ರೆಹಮಾನ್ ಸರ್ಕಾರಿ ಉರ್ದು ಶಿಕ್ಷಕರು ಮತ್ತು ಶಿಕ್ಷಕಿರು ಉಪಸ್ಥಿತಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243