/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಲೈಫ್ ಸ್ಟೈಲ್

‘ರೋಸ್ ವಾಟರ್’ ಇಷ್ಟೆಲ್ಲಾ ಉಪಯೋಗಕ್ಕೆ ಬರುತ್ತೆ..!

Published

on

ಸುಂದರವಾಗಿ ಕಾಣಬೇಕು ಎಂಬುದು ಎಲ್ಲ ಬಯಕೆ ಇರುತ್ತದೆ. ಕೆಲವರೂ ಹುಟ್ಟಿನಿಂದಲೇ ಸಹಜ ಸೌಂದರ್ಯ ಗಣಿಗಳಿದ್ದರೆ ಇನ್ನು ಕೆಲವರು ಸಾಧಾರಣವಾಗಿರುತ್ತಾರೆ. ಆದರೆ ಸುಂದರವಾಗಿ ಕಾಣಿಸಲು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ಹೊರಗಿನ ಸೌಂದರ್ಯ ವರ್ಧಕಗಳನ್ನು ಬಳಸುತ್ತಾರೆ ಆದರೆ ಅದರಿಂದ ಕೆಲವೊಂದ ಬಾರಿ ರಿಯಾಕ್ಸ್ ಉಂಟಾಗಿದ್ದಾಗ ನೈಸರ್ಗಿಕ ಸೌಂದರ್ಯ ಸಾಧನಗಳತ್ತ ಮೊರೆ ಹೋಗುತ್ತಾರೆ. ಅದರಂತೆ ಹೂವುಗಳ ರಾಣಿ ಗುಲಾಬಿಯ ಅಂದ ಚೆಂದಕ್ಕೆ ಮನ ಸೋಲದವರಾರು? ಸಂಸ್ಕೃತದಲ್ಲಿ ಶತಪರ್ಣಿ ಎಂದು ಕರೆಯಲ್ಪಡುವ ಗುಲಾಬಿಯನ್ನು ಪರ್ಶಿಯನ್‍ನಲ್ಲಿ ಗುಲಾಬ್ ಎನ್ನುತ್ತಿದ್ದರು ಈ ಗುಲಾಬ್ ಮುಂದೆ ಅದೇ ಕನ್ನಡದಲ್ಲಿ ಗುಲಾಬಿಯಾಯಿತು.

ನಿಸರ್ಗದಲ್ಲಿ ಸಿಗುವ ತಾಜಾ ಗುಲಾಬಿ ಪಕಳೆಗಳನ್ನು ಉಪಯೋಗಿಸುವುದರಿಂದ ಸೌಂದರ್ಯ ವೃದ್ಧಿಯಾಗುವುದರ ಜೊತೆಗೆ ಕೋಮಲ ತ್ವಚೆಯನ್ನು ಪಡೆಯಬಹುದು. ಗುಲಾಬಿಯ ಪಕಳೆಗಳಿಂದ ತಯಾರಿಸುವ ರೋಸ್ ವಾಟರ್ ಹಿಂದಿನ ಕಾಲದಿಂದಲೂ ಬಳಕೆಯಲ್ಲಿದೆ. ಮದುವೆ, ಉಪನಯನದಂತಹ ಶುಭ ಸಮಾರಂಭಗಳ ಸಂದರ್ಭದಲ್ಲಿ ಸುವಾಸನೆಗಾಗಿ ರೋಸ್ ವಾಟರ್‍ನ್ನು ಸಿಂಪಡಿಸುತ್ತಾರೆ.

‘ರೋಸ್ ವಾಟರ್’ ನ ಉಪಯೋಗಳು

  1. ರೋಸ್‍ವಾಟರ್ ಜತೆ ಜೇನುತುಪ್ಪ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದರೆ ಮುಖದ ಕಾಂತಿ ಹೆಚ್ಚುತ್ತದೆ.
  2. ರೋಸ್ ವಾಟರ್ ಹಾಗೂ ಗ್ಲಿಸರಿನ್ ಮಿಕ್ಸ್ ಮಾಡಿ ಹಚ್ಚುವುದರಿಂದ ತ್ವಚೆಗೆ ಮಾಯಿಶ್ಚರೈಸರ್ ಆಗಿ ನಿಮ್ಮ ಚರ್ಮ ಆಕರ್ಷಕವಾಗಿ ಕಾಣುತ್ತದೆ.
  3. 1ಚಮಚ ರೋಸ್ ವಾಟರ್‍ಗೆ ನಿಂಬೆ ರಸ ಮಿಕ್ಸ್ ಮಾಡಿ ಮಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ತಂಪಾದ ನೀರಿನಿಂದ ತೊಳೆಯಬೇಕು. ಇದರಿಂದ ಮೊಡವೆ ಕಡಿಮೆಯಾಗುತ್ತವೆ. ಹಗೂ ಅವುಗಳ ಕಲೆಯೂ ಉಳಿಯುವುದಿಲ್ಲ.
  4. ರೋಸ್ ವಾಟರ್ ಅನ್ನು ತಲೆ ಬುಡಕ್ಕೆ ಹಚ್ಚುವುದರಿಂದ ಕೂದಲಿಗೆ ಕಂಡೀಷನರ್ ಹಚ್ಚಿದಂತಾಗುತ್ತದೆ.
  5. ನ್ಯಾಚುರಲ್ ಫೇಸ್‍ಸ್ಕ್ರಬ್ ಮಾಡುವಾಗ ಅದರಲ್ಲಿ ರೋಸ್ ವಾಟರ್ ಬಳಸಿದರೆ ನಿಮ್ಮ ಚರ್ಮಕ್ಕೆ ಮತ್ತಷ್ಟು ಹೊಳಪು ಬರುತ್ತದೆ.
  6. ತುಟಿಗೆ ರೋಸ್ ವಾಟರ್ ಹಚ್ಚಿದರೆ ತುಟಿ ಮೃದುವಾಗುತ್ತವೆ.
  7. ಅರಿಶಿಣ ಹಾಗೂ ರೋಸ್ ವಾಟರ್ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಕಲೆ ಹೋಗಲಾಡಿಸಬಹುದು.
  8. ಸುಟ್ಟ ಗಾಯದ ಉರಿಯೂತ ಹೋಗಲಾಡಿಸಲು ರೋಸ್ ವಾಟರ್ ಹಚ್ಚಬೇಕು.
  9. ಬಿಸಿಲಿಗೆ ನಿಮ್ಮ ಚರ್ಮ ಟ್ಯಾನ್ ಆಗಿರುವುದನ್ನು ಹೋಗಲಾಡಿಸಬೇಕಾದರೆ ರೋಸ್ ವಾಟರ್ ಹಚ್ಚಬೇಕು.
  10. 2 ಹತ್ತಿಯ ಪ್ಯಾಡ್ ಅನ್ನು ರೋಸ್ ವಾಟರ್‍ನಲ್ಲಿ ಅದ್ದಿಸಿ 10 ನಿಮಿಷಗಳ ಕಾಲ ಕಣ್ಣಿನ ಮೇಲೆ ಇಟ್ಟುಕೊಳ್ಳುವುದರಿಂದ ಇದು ಕಣ್ಣುಗಳ ಊತವನ್ನು ಕಡಿಮೆ ಮಾಡುತ್ತದೆ.
  11. ಮಲಗುವ ಮುನ್ನ ರೋಸ್ ವಾಟರನ್ನು ಮುಖಕ್ಕೆ ಹಚ್ಚಿಕೊಂಡು ಮಲಗುವುದರಿಂದ ಮುಖದಲ್ಲಿರುವ ಸುಕ್ಕು ಕಡಿಮೆ ಮಾಡುತ್ತದೆ.
  12. ಒಣಚರ್ಮ ಹೋಗಲಾಡಿಸಲು ಓಟ್ ಮೀಲ್, ಜೇನುತುಪ್ಪ ಮತ್ತು ಹಾಲಿನೊಂದಿಗೆ ರೋಸ್ ವಾಟರ್ ಅನ್ನು ಬೆರೆಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಒಣಗಿದ ಬಳಿಕ ತೊಳೆದರೆ ಇದು ನಿಮ್ಮ ಚರ್ಮಕ್ಕೆ ತೇವಾಂಶವ ಒದಗಿಸುತ್ತದೆ.
  13. ತುರಿಕೆ, ಗುಳ್ಳೆಯಂಥ ತ್ವಚೆಯ ಸಮಸ್ಯೆಗಳಿಗೆ ರೋಸ್ ವಾಟರ್ ರಾಮಬಾಣವಾಗಬಲ್ಲದು.

‘ರೋಸ್ ವಾಟರ್’ ಅನ್ನು ಮನೆಯಲ್ಲಿಯೇ ತಯಾರಿಸುವ ವಿಧಾನ

ಮೊದಲು ನೀರನ್ನು ಬಿಸಿ ಮಾಡಿ ಅದಕ್ಕೆ ತಾಜಾ ಗುಲಾಬಿ ದಳಗಳನ್ನು ಹಾಕಬೇಕು. ನಂತರ ಪಾತ್ರೆಯ ಮುಚ್ಚಳ ಹಾಕಿ ತಣ್ಣಗಾಗಲು ಬಿಡಬೇಕು. ಅದು ತಣ್ಣಗಾದ ಮೇಲೆ ಗುಲಾಬಿ ದಳ ಹಾಕಿರುವ ನೀರನ್ನು ಪ್ರಿಡ್ಜ್ ನಲ್ಲಿ ಇಡಬೇಕು. ಒಂದು ದಿನ ಹಾಗಯೇ ಇರಲಿ. ನಂತರ ಅದನ್ನು ಸೋಸಬೇಕು. ಆ ನೀರನ್ನು ಬಾಟಲಿಯಲ್ಲಿ ಹಾಕಿದಾಗ ರೋಸ್ ವಾಟರ್ ರೆಡಿ.

ನಿವೇದಿತ ಸುರೇಶ್ ಸೋಲಾಪುರ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version