ಲೈಫ್ ಸ್ಟೈಲ್

ಜೀರ್ಣಶಕ್ತಿಯ ರಾಮಬಾಣ ‘ಬಸಳೇ ಸೊಪ್ಪು’!

Published

on

ಸಳೆ ಸೊಪ್ಪು ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳ ಮನೆಗಳಲ್ಲಿ ಹೆಚ್ಚಾಗಿ ಬೆಳೆಸುತ್ತಾರೆ. ತಂಪಿಗೆ ಹೆಸರಾಗಿರುವ ಈ ಸೊಪ್ಪು ರುಚಿಯಲ್ಲಿ ಮಹತ್ವವಾಗಿದೆ. ಇದರಲ್ಲಿ ಹಲವು ಆರೋಗ್ಯಕರ ಅಂಶಗಳನ್ನು ನೋಡುಬಹುದು.

ಔಷಧೀಯ ಗುಣಗಳು

  • ಬಸಳೆ ಸೊಪ್ಪಿನಲ್ಲಿ ‘ಎ’ ಮತ್ತು ‘ಸಿ’ ಜೀವಸತ್ವ ಹೆಚ್ಚಾಗಿದೆ. ಇದರ ಸೇವನೆಯನ್ನು ನಿಯಮಿತವಾಗಿ ಮಾಡಬೇಕು. ಏಕೆಂದರೆ, ಇದನ್ನು ಸೇವಿಸುವುದರಿಂದ ಬೇಗ ಜೀರ್ಣವಾಗಿ, ಹಸಿವು ಹೆಚ್ಚಾಗುತ್ತದೆ.
  • ಈ ಸೊಪ್ಪಿನಲ್ಲಿ ಕಬ್ಬಿಣದ ಅಂಶ ಹಾಗೂ ರಂಜಕದ ಅಂಶ ಕೂಡ ಹೇರಳವಾಗಿದೆ. ಆದ್ದರಿಂದ ಮಲವಿಸರ್ಜನೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ರಾಮಬಾಣ. ಮಕ್ಕಳು ಮತ್ತು ಗರ್ಭಿಣಿಯರಿಗೆ ಇದು ತುಂಬಾ ಉಪಯುಕ್ತ.
  • ನಿಮ್ಮ ಚರ್ಮ ಒಣಗಿದಂತಿದ್ದು, ಹೊಳಪು ಕಳೆದುಕೋಡಿದ್ದರೆ ಬಸಳೆ ಹೊಳಪು ಬರುವುದಿಲ್ಲದೆ; ತುರಿಕೆಯಿಂದ ಕೂಡಿದ ಚರ್ಮವಿದ್ದರೆ ಅದೂ ಸಹ ವಾಸಿ ಆಗುತ್ತದೆ.
    ಇದು ಒಳ್ಳೆಯ ದಂತ ಮಂಜನವಾಗುಯೂ ಕೆಲಸ ನಿರ್ವಹಿಸುತ್ತದೆ.
  • ಇದರ ಬೀಜದ ಪುಡಿಯನ್ನು ನೀವು ನಶ್ಯದಂತೆ ಉಪಯೋಗಿಸಿದರೆ ಅರೆ ತಲೆನೋವು ಮಾಯವಾಗುತ್ತದೆ.
  • ಗರ್ಭಿಣಿಯರಿಗೆ ಹಾಗೂ ಎಳೆಯ ಮಕ್ಕಳಿಗೆ ಬಸಳೇ ಸೊಪ್ಪಿನ ಪಲ್ಯ ಕೊಡುವುದರಿಂದ ಮಲಬದ್ಧತೆ ನಿವಾರಣೆಯಾಗುವುದು.
  • ಆಹಾರದಲ್ಲಿ ಬಸಳೇ ಸೊಪ್ಪನ್ನು ಪ್ರತಿದಿನ ಬಳಸುತ್ತಿದ್ದರೆ ಶರೀರದ ತೂಕ ಹೆಚ್ಚುತ್ತದೆ.
    ಬಾವು, ಕೀವು ಮುಂತಾದವುಗಳ ಶಮನಕ್ಕೆ ಬಸಳೆ ಸೊಪ್ಪಿನ ಎಲೆಯನ್ನು ಅರೆದು ಅದನ್ನು ಗಾಯದ ಮೇಲೆ ಹಚ್ಚಿದರೆ ಭಾವು ಕಡಿಮೆಯಾಗುತ್ತದೆ.

ನೂರು ಗ್ರಾಂ ಬಸಳೇ ಸೊಪ್ಪಿನಲ್ಲಿರುವ ಪೋಷಕಾಂಶಗಳು

  • ತೇವಾಂಶ : 90.8 ಗ್ರಾಂ
  • ಸಸಾರಜನಕ : 208 ಗ್ರಾಂ
  • ಕೊಬ್ಬು : 0.4 ಗ್ರಾಂ
  • ಪಿಷ್ಠ : 42.0 ಗ್ರಾಂ
  • ಕ್ಯಾಲ್ಷಿಯಂ : 200 ಮಿಲಿ ಗ್ರಾಂ
  • ಕಬ್ಬಿಣ : 10.ಒ ಮಿಲಿ ಗ್ರಾಂ
  • ಥೈಯಾಮಿನ್ : 0.03 ಮಿಲಿ ಗ್ರಾಂ
  • ರೈಬೋಪ್ಲಾವಿನ್ : 0.16 ಮಿಲಿ ಗ್ರಾಂ
  • ನಿಯಾಸಿನ್ : 0.05 ಮಿಲಿ ಗ್ರಾಂ
  • ‘ಸಿ’ ಜೀವಸತ್ವ : 87.0 ಮಿಲಿ ಗ್ರಾಂ
  • ರಂಜಕ : 35.0 ಮಿಲಿ ಗ್ರಾಂ

ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401

Leave a Reply

Your email address will not be published. Required fields are marked *

Trending

Exit mobile version