ಲೈಫ್ ಸ್ಟೈಲ್

ಕಸದಿಂದ ರಸ | ಪ್ಲಾಸ್ಟಿಕ್ ಬಾಟಲ್ ಗಳನ್ನು ಹೀಗೂ ಬಳಸಿಕೊಳ್ಳಬಹುದು..!

Published

on

ಬಸ್ಸ್ಟಾಂಡ್, ರಸ್ತೆಯ ಬದಿಯಲ್ಲಿ, ಕಸದ ತೊಟ್ಟಿಗಳಲ್ಲಿ ಎನ್ನದೆ ನಿರೂಪಯುಕ್ತ ಕುಡಿಯುವ ನೀರಿನ ಬಾಟಲಿಗಳು ಎಲ್ಲಂದರಲ್ಲಿ ಬಿದ್ದು ಉರುಳಾಡುತ್ತಿರುತ್ತವೆ. ಇಂತಹ ಬಾಟಲಿಗಳಲಿಂದ ಕೃಷಿಯಲ್ಲಿ ಒಂದು ವಿಭಿನ್ನವಾದ ರೀತಿಯಲ್ಲಿ ಹೊಸ ರೂಪವನ್ನ ನೀಡಿಬಹುದಾಗಿದೆ. ಇವುಗಳಲ್ಲಿ ದಿನನಿತ್ಯ ಜೀವನದಲ್ಲಿ ಬೇಕಾದ ಸೊಪ್ಪನ್ನು ಬೆಳೆಸಿ ಎಳೆ ಚಿಗುರನ್ನು ನೋಡುತ್ತಾ ಸಂಭ್ರಮವನ್ನು ಆನಂದಿಸಬಹುದಾಗಿದೆ.

ಅದೊಂದು ದಿನ ಹುಬ್ಬಳ್ಳಿಯಿಂದ ವಿಜಯಪುರಕ್ಕೆ ಬಸ್‍ನಲ್ಲಿ ಬರುವಾಗ ನಡೆದ ಘಟನೆಯಿದು. ನನ್ನ ಪಕ್ಕ ಸೀಟ್‍ನಲ್ಲಿ ಹಾಗೂ ನುಂದಿನ ಸೀಟ್‍ನಲ್ಲಿ ಕೆಲವು ಹುಡಗ ಹುಡುಗಿರ ಗುಂಪು ಕುತುಕೊಂಡು ಮಾತನಾಡುತ್ತಿದ್ದರು. ನಾನು ಪುಸ್ತಕ ಓದುತ್ತಿದೆ. ನನಗೆ ಅವರ ಚರ್ಚೆ ಪುಸ್ತಕ ಓದಲು ಅಡಚಣೆ ಮಾಡಿದರು ಕೂಡಾ ಆಸಕ್ತಿದಾಯವಾಗಿತ್ತು. ಅದೇನು ಅಂತಿರಾ ಹಾಗಾದರೆ ಮುಂದೆ ಓದಿ.

ನಾನು ಸುಮ್ಮನೆ ಕುಳಿತು ಅವರ ಮಾತುಗಳನ್ನು ಕೇಳಿಸಿಕೊಂಡೆ. ನಂತರ ನಾನು ಕೂಡಾ ಅವರೊಂದಿಗೆ ಮಾತು ಬೆಳೆಸಿದಾಗ ನನಗಂತ್ತು ಒಂದು ಅದ್ಬುತವಾದ ವಿಷಯ ತಿಳಿದುಕೊಂಡೆ. ಅದರಲ್ಲು ಪ್ಲಾಸ್ಟಿಕ್ ಬಳಕೆಯಿಂದ ಮತ್ತು ಅದರ ಬರುಬಳಕೆ ಹೇಗೆ ಮಾಡಬೇಕು ಎನ್ನುವುದನ್ನು ಅರಿತುಕೊಂಡೆ. ಅದನೆ ನನ್ನ ಅನುಭವನ್ನು ನಿಮ್ಮ ಜೊತೆಗೆ ಹಂಚಿಕೊಳ್ಳುತ್ತಿದ್ದೇನೆ.
ಪ್ಲಾಸ್ಟಿಕ್ ಬಕಳಕೆಯು ತುಂಬಾ ಅಪಾಯಕಾರಿಯಾಗಿದೆ. ಶಿರಸಿಯ ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿಗಳು ನಿರುಪಯುಕ್ತ ಪ್ಲಾಸ್ಟಿಕ್ ಬಾಟಲಿಗಳ ಮರುಬಳಕೆ ಮಾಡುತ್ತಿದ್ದಾರೆ. ಒಂದು ತಿಂಗಳು ಗಲ್ಲಿ ಗಲ್ಲಿ ಸುತ್ತಿ, ಹೋಟೆಲ್‍ಗಳು, ಅಂಗಡಿಗಳಿಂದ ನೀರು, ತಂಪು ಪಾನೀಯ ಕುಡಿದು ಎಸೆದ ಬಾಟಲಿಗಳನ್ನು ಸಂಗ್ರಹಿಸಿದರು. ನಂತರ ಸಗ್ರಹಿಸಿದ ಬಾಟಲಿಗಳಿಗೆ ಜೀವಕಳೆ ತುಂಬಿ, ಪರಿಸರ ಮಾಲಿನ್ಯ ತಡೆಗಟ್ಟಲು ವಿದ್ಯಾರ್ಥಿಗಳ ಪುಟ್ಟ ಪ್ರಯತ್ನನೊಂದಿಗೆ ಅಡಿಗಲ್ಲನ್ನು ಹಾಕಿದ್ದಾರೆ.

ಕಾಲೇಜಿನ ಎದುರು ಇರುವ ನಾಲ್ಕು ಕಂಬಗಳ ನಡುವೆ ವರ್ಟಿಕಲ್ ಗಾರ್ಡನ್ ನಿರ್ಮಿಸಿದ್ದಾರೆ. ಕಾಲೇಜಿಗೆ ಭೇಟಿ ನೀಡುವವರ ಗಮನವನ್ನು ಇಲ್ಲಿ ಜೋತಾಡುವ ದಾರಗಳ ನಡುವೆ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸೊಂಪಾಗಿ ಬೆಳೆದಿರುವ ಸೊಪ್ಪುಗಳು ಸೆಳೆಯುತ್ತವೆ. ಅರ್ಧ ಕಟ್ ಮಾಡಿರುವ ಬಾಟಲಿಗಳಲ್ಲಿ ಮೆಂತೆ, ಹರಿವೆ, ಪಾಲಕ್, ಸಬ್ಬಸಿಗೆ, ಈರುಳ್ಳಿ, ಕೊತ್ತಂಬರಿ ಬೀಜ ಬಿತ್ತಿ, ಸೊಪ್ಪು ಬೆಳೆಸುತ್ತಿದ್ದಾರೆ.

`ಇದಕ್ಕೇನು ಹೆಚ್ಚು ಶ್ರಮವಿಲ್ಲ. ಅಂಗಡಿ ಮುಂಗಟ್ಟುಗಳಿಂದ ಸಂಗ್ರಹಿಸಿ ತಂದಿದ್ದ ಪ್ಲಾಸ್ಟಿಕ್ ಬಾಟಲಿಗಳ ಹೊಟ್ಟೆ ಸಿಳಿ, ಅದರಲ್ಲಿ ತೆಂಗಿನ ನಾರಿನ ಪುಡಿ ತುಂಬಿ, ಬೀಜ ಬಿತ್ತನೆ ಮಾಡಬೇಕು. ನಾರಿನ ಪುಡಿಗೆ ತೇವಾಂಶ ಹಿಡಿದಿಟ್ಟುಕೊಳ್ಳುವ ಗುಣವಿದೆ. ಹೀಗಾಗಿ, ಎರಡು ದಿನಕ್ಕೊಮ್ಮೆ ನೀರು ಕೊಟ್ಟರೂ ಸಾಕು. ಬೀಜ ಹಾಕಿದ 8ರಿಂದ10 ದಿನಗಳಲ್ಲಿ ಸಸಿಗಳು ಮೇಲೇಳುತ್ತವೆ. ಎನ್‍ಪಿಕೆ ಗೊಬ್ಬರವನ್ನು (19:19:19) ಸಿಂಪಡಣೆ ಮಾಡಿದರೆ, ಸಸಿಗಳು ಆರೋಗ್ಯಕರವಾಗಿ ಬೆಳೆಯುತ್ತವೆ. ಇದು ಸುಲಭವಾಗಿ ನೀರಿನಲ್ಲಿ ಕರಗುತ್ತದೆ. ಹಾಗಾಗಿ ಸಿಂಪಡಣೆಯೂ ಸುಲಭ’ ಎಂದು ವಿದ್ಯಾರ್ಥಿಗಳು ಅಭಿಪ್ರಾಯ ಪಡುತ್ತಾರೆ.

ಬಾಟಲಿಯ ಪುನರ್ ಬಳಕೆಯ ವಿಚಾರ ಬಂದಿದ್ದು ಹೇಗೆ ಎಂಬ ಪ್ರಶ್ನೆಯನ್ನು ಮುಂದಿಟ್ಟಾಗ, ಇಸ್ರೇಲ್ ವಿಜ್ಞಾನ ಕೇಂದ್ರದಲ್ಲಿ ನೋಡಿದ್ದ ಬಾಟಲಿಯ ಮರು ಬಳಕೆಯ ಪ್ರಯೋಗವನ್ನು ಕಾಲೇಜಿನಲ್ಲಿ ಮಾಡೋಣವೆಂದು `ನಮ್ಮ ತರಕಾರಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಅವರು ನಮ್ಮನ್ನು ಹುರಿದುಂಬಿಸಿದರು ಎಂದು ಹೇಳಿದರು. ವಿದ್ಯಾರ್ಥಿಗಳೆಲ್ಲರು ಪ್ರತ್ಯೇಕವಾಗಿ ತಂಡ ಕಟ್ಟಿಕೊಂಡು ಬಾಟಲಿಗಳ ರಾಶಿ ತಂದು ಸುರಿದೆವು. ಈಗ ನೋಡಿ, ಅವೆಲ್ಲ ಶೋ ಪೀಸ್‍ಗಳಂತೆ ಕಾಣುತ್ತಿವೆ’ ಎಂದು ಅವರು ಕಾಲೇಜಿನ ಕಾರಿಡಾರ್ ಕಟ್ಟೆಯಂಚನ್ನು ಆವರಿಸಿಕೊಂಡಿದ್ದ ಬಾಟಲಿ ಪಾಟ್‍ನೆಡೆಗೆ ಕೈತೋರಿದರು ಎಂದು ಹೇಳಿದರು.

ಕೆಲವು ವರ್ಷಗಳ ಹಿಂದೆ ಅಂಗಳದಲ್ಲಿದ್ದ ಕೈತೋಟ್ (ಗಾರ್ಡನ್) ಈಗ ಮಹಡಿಯನ್ನೇರಿದೆ. ಕಾರಿಡಾರಿನ ಸುತ್ತ, ಟೆರೇಸ್ ಮೇಲಿನ ನೆರಳಿನ ಜಾಗದಲ್ಲೆಲ್ಲ ಜಲಪಾತದಂತೆ ಇಳಿಬಿದ್ದಿರುವ ಬಾಟಲಿಗಳು ಕಾಣುತ್ತವೆ.

ಮಳೆಗಾಲದಲ್ಲಿ ತೆರೆದ ಬಯಲಿನಲ್ಲಿ ತರಕಾರಿ, ಸೊಪ್ಪು ಬೆಳೆಸಿದರೆ, ಮಲೆನಾಡಿನ ಮಳೆಗೆ ಕೊಳೆಯುವ ಸಾಧ್ಯತೆ ಹೆಚ್ಚು. ಹಾಗೆಂದು, ಚಾವಣಿ ಕೆಳಗೆ ಸುಲಭದಲ್ಲಿ ಬೆಳೆಬಹುದು. ಬಾಟಲಿ ಗಟ್ಟಿಯಿದ್ದರೆ ಎರಡರಿಂದ ಮೂರು ಬೆಳೆಯನ್ನು ಆರಾಮವಾಗಿ ತೆಗೆಯಬಹುದು. ಇನ್ನೂ ಒಂದು ಹೆಜ್ಜೆ ಮುಂದಿಟ್ಟ ವಿದ್ಯಾರ್ಥಿಗಳು, ತೆಂಗಿನ ಚಿಪ್ಪಿನಲ್ಲೂ ಸಸಿ ಬೆಳೆಸಲು ತಯಾರಿ ನಡೆಸಿದ್ದಾರೆ. ತೆಂಗಿನ ಚಿಪ್ಪು ನೋಟದಲ್ಲೂ ಕಲಾತ್ಮಕ ಎಂದರು, ಅಲ್ಲಿನ ವಿದ್ಯಾರ್ಥಿಗಳು.

ಪೇಟೆಯಲ್ಲಿ ರಾಸಾಯನಿಕ ರಹಿತ ತರಕಾರಿ ಹುಡುಕುವುದೇ ಕಷ್ಟ. ರಾಸಾಯನಿಕ ಸಿಂಪಡಿಸಿದ ತರಕಾರಿ ಸೇವನೆ ಕ್ಯಾನ್ಸರ್‍ನಂತಹ ಗಂಭೀರ ಕಾಯಿಲೆಗೆ ಕಾರಣವಾಗಬಹುದು. ಸಾಧ್ಯವಾದಷ್ಟು ಮನೆಯಲ್ಲೇ ಬೆಳೆಸಿಕೊಂಡರೆ, ಸಾವಯವ ತರಕಾರಿ ತಿಂದ ಸಮಾಧಾನವೂ ಸಿಕ್ಕೀತು. ನಗರದಲ್ಲಿ ತರಕಾರಿ ಬೆಳೆಸಲು ಜಾಗ ಇಲ್ಲದಿದ್ದರೆ, ಪ್ಲಾಸ್ಟಿಕ್ ಬಾಟಲಿಯಲ್ಲಿ ಆಳ ಬೇರು ಬಿಡದಂತಹ ಸೊಪ್ಪು ಬೆಳೆಯಬಹುದು. ಎಣ್ಣೆ ಕ್ಯಾನ್, ಒಡೆದ ಬಕೆಟ್, ಪೇಂಟ್ ಡಬ್ಬ, ಸಿಮೆಂಟ್ ಚೀಲ ಹೀಗೆ ಎಸೆಯುವ ಪ್ಲಾಸ್ಟಿಕ್ ಅನ್ನು ಟೆರೇಸ್ ಮೇಲಿಟ್ಟು ತರಕಾರಿ ಗಿಡಗಳ ಬೆಳೆಸಬಹುದು ಎಂಬುದು ಅಲ್ಲಿನ ಪ್ರಾಧ್ಯಾಪಕರು ಸಲಹೆ ನೀಡುತ್ತಾರೆ.

ಹೀಗೆ ಬೆಳೆಯುವಾಗ ಮಣ್ಣನ್ನು ಉಪಯೋಗಿಸದಿರುವುದು ಲೇಸು. ತೆಂಗಿನ ನಾರಿನ ಪುಡಿ ಹಗುರ. ಇದು ಬಾಟಲಿಗೂ ಭಾರವಲ್ಲ, ಟೆರೇಸ್ ಮೇಲಿಟ್ಟರೂ ಬಾರಯಾಗುವುದಿಲ್ಲ ಜೊತೆಗೆ ದುಡ್ಡಿಗೂ ಕಷ್ಟವಿಲ್ಲ. ಮಾರ್ಕೆಟ್‍ನಲ್ಲಿ ಸುಲಭವಾಗಿ ಸಿಗುವ ನಾರಿನ ಪುಡಿ ಕೆ.ಜಿ.ಯೊಂದಕ್ಕೆ 10 ರೂಪಾಯಿಯಷ್ಟೇ, ಎಂದು ಹೇಳುವುದನ್ನು ಅವರು ಮರೆಯಲಿಲ್ಲ.

ಕಾಂಚನಾ. ಬಸವರಜ. ಪೂಜಾರಿ
3ನೇ ಸೆಮಿಸ್ಟರ್ ವಿದ್ಯಾರ್ಥಿನಿ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ತೋರವಿ
ವಿಜಯಪುರ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version