ಸಿನಿ ಸುದ್ದಿ

ರವಿಮಾಮನಿಗೆ 60ರ ಸಂಭ್ರಮ ; ಕನ್ನಡಿಗ ಸಿನೆಮಾ ಟೀಸರ್ ರಿಲೀಸ್

Published

on

ಸುದ್ದಿದಿನ, ಬೆಂಗಳೂರು : ಕ್ರೇಜಿಸ್ಟಾರ್ ರವಿಚಂದ್ರನ್ ಇಂದು ತಮ್ಮ ಅರವತ್ತನೇ ವರ್ಷದ ಹುಟ್ಟು ಹಬ್ಬವನ್ನು ಕುಟುಂಬದೊಂದಿಗೆ ಆಚರಿಸಿಕೊಂಡರು.

ರವಿಚಂದ್ರನ್ ತಮ್ಮ ತಾಯಿ ಹೆಂಡತಿ ಮಕ್ಕಳು ಅಳಿಯ ಹಾಗೂ ಇತರೆ ಆಪ್ತವಲಯದೊಂದಿಗೆ ಮನೆಯಲ್ಲಿಯೇ ಸಿಂಪಲ್ ಆಗಿ ಸಂತೋಷದಿಂದ ಆಚರಿಸಿಕೊಂಡಿರುವ ಫೋಟೋಗಳು ವೈರಲ್ ಆಗಿವೆ.

ಅಂದಹಾಗೆ ರಸಿಕ ರವಿಮಾಮನಿಗೆ ಅರವತ್ತು ತುಂಬಿದ ಈ ಘಳಿಯಲ್ಲಿ ಅವರ ಕನ್ನಡಿಗ ಸಿನೆಮಾದ ಟೀಸರ್ ಕೂಡ ಬಿಡುಗಡೆಯಾಯಿತು. ಈ ಸಿನೆಮಾವನ್ನು ಜಟ್ಟ, ಮೈತ್ರಿ ಯಂತಹ ಸೂಪರ್ ಹಿಟ್ ಸಿನೆಮಾಗಳನ್ನು ಕೊಟ್ಟ ಬಿ.ಎಂ.ಗಿರಿರಾಜ್ ಅವರು ನಿರ್ದೇಶಿಸಿದ್ದಾರೆ. ಕೆಜಿಫ್ ನ ರವಿಬಸ್ರೂರ್ ಸಂಗೀತ ನೀಡಿದ್ದು, ಎಂದಿನಂತೆ ರವಿಚಂದ್ರನ್ ಸಿನೆಮಾಗಳ ಛಾಯಾಗ್ರಾಹಕ ಸೀತಾರಾಮ್ ಸಿನೆಮಾಟೋಗ್ರಫಿ ಸಿನೆಮಾಗಿದೆ.

ಟೀಸರ್ ನೋಡಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version