ದಿನದ ಸುದ್ದಿ
ಎರಡು ಸಲ ಪ್ರಧಾನಿಯಾದ ವಾಜಪೇಯಿ
ಸುದ್ದಿದಿನ ವಿಶೇಷ| ದೇಶ ರಾಜಕಾರಣದಲ್ಲಿ ಅಜಾತಶತ್ರು ಎಂದೇ ಕರೆದಿಕೊಳ್ಳುವ ಅಟಲ್ ಬಿಹಾರಿ ವಾಜಪೇಯಿ ಎರಡು ಬಾರಿ ಪ್ರಧಾನ ಮಂತ್ರಿ ಸ್ಥಾನ ಅಲಂಕರಿಸಿದವರು. ಮೊದಲ ಸಲ 1996ರಲ್ಲಿ 13ದಿನಗಳ ಕಾಲ ಪ್ರಧಾನಿಯಾಗಿ ಆಯ್ಕಯಾದರು. ಎರಡು ಸಲ 1998ರಿಂದ 2004ರ ವರೆಗೆ ಪ್ರಧಾನಿ ದೇಶದ ಆಡಳಿತ ನಡೆಸಿದರು. ೧೦ನೇ ಪ್ರಧಾನಿ ಆಗಿ ದೇಶದ ಆಡಳಿತ ನಡೆಸಿದರು. ೧೯೭೭ರಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದರು.
ನಾಲ್ಕು ದಶಕಗಳ ಕಾಲ ಲೋಕಸಭೆಯಲ್ಲಿ ೨೦೦೯ ವರೆಗೆ ಉತ್ತರ ಪ್ರದೇಶದ ಲಕ್ನೋವನ್ನು ಪ್ರತಿನಿಧಿಸಿದ್ದರು. ಕೆಳಮನೆಗೆ ಹತ್ತು ಬಾರಿ ಹಾಗೂ ಮೇಲ್ಮನೆ ರಾಜ್ಯಸಭೆಗೆ ಎರಡು ಬಾರಿ ಆಯ್ಕೆಯಾಗಿದ್ದರು. ಅನಾರೋಗ್ಯ ಸಮಸ್ಯೆಯಿಂದ ದೂರ ಉಳಿಯಬೇಕಾಯಿತು.
ಬಿಜೆಪಿ ನಿಮಾರ್ತೃ ವಾಜಪೇಯಿ
ಭಾರತೀಯ ಜನ ಸಂಘದ ಸಂಸ್ಥಾಪಕ ಸದಸ್ಯರಾಗಿದ್ದ ವಾಜಪೇಯಿ, 1968ರಿಂದ 1972ರವರೆಗೆ ಅದರ ಅಧ್ಯಕ್ಷರಾಗಿದ್ದರು. ಜನತಾ ಸರ್ಕಾರ ಪತನಗೊಂಡಾಗ ವಾಜಪೇಯಿ ಅವರು ಜನಸಂಘವನ್ನು ೧೯೮೦ರಲ್ಲಿ ಭಾರತೀಯ ಜನತಾ ಪಕ್ಷವಾಗಿ ಪರಿವರ್ತಿಸಿದರು. ಕಾಂಗ್ರೆಸೇತರ ಮೊದಲ ಪ್ರಧಾನಿಯಾಗಿ ಆಯ್ಕೆಯಾಗಿ ಐದು ವರ್ಷಗಳ ಕಾಲ ಆಡಳಿತ ಪೂರ್ಣಗೊಳಿಸಿದರು.
ಉತ್ತಮ ಆಡಳಿತ ದಿನ
ದೇಶದಲ್ಲಿ ಉತ್ತಮ ಆಡಳಿತ ನೀಡಿದ ವಾಜಪೇಯಿ ಜನ್ಮದಿನವನ್ನು ಉತ್ತಮ ಆಡಳಿತ ದಿನವನ್ನಾಗಿ ಆಚರಿಸಲಾಗುತ್ತಿದೆ. ಮೋದಿ ನೇತೃತ್ವದ ಸರ್ಕಾರ 2014ರಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಅವರಿಗೆ ಭಾರತ ರತ್ನ ಗೌರವ ನೀಡಿ ಸನ್ಮಾನಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401