ದಿನದ ಸುದ್ದಿ
ಮೈಸೂರಿನ ಸೌಂದರ‌್ಯಕ್ಕೆ ಮನಸೋತಿದ್ದ ಅಟಲ್ ಜಿ
ಸುದ್ದಿದಿನ ಡೆಸ್ಕ್ | ಅಟಲ್ ಬಿಹಾರಿ ವಾಜಪೇಯಿ ಅವರು ಸಾಂಸ್ಕೃತಿಕ ನಗರಿ ಮೈಸೂರಿನ ಸೌಂದರ‌್ಯಕ್ಕೆ ಮನಸೋತಿದ್ದರು. 1999ರ ಜನವರಿ 3ರಂದು ಮೈಸೂರಿಗೆ ಬಂದಿದ್ದ ಅವರು ಇಲ್ಲಿನ ವಿಶಾಲ ರಸ್ತೆಗಳು, ಪ್ರಕೃತಿಯ ಸೊಬಗನ್ನು ಮನದುಂಬಿ ಶ್ಲಾಘಿಸಿದ್ದರು.
ಹೆಎಸ್‌ಎಸ್ ಪಾಲಿಟೆಕ್ನಿಕ್ ಕಾಲೇಜಿನ ವಿಕಲ ಚೇತನರ ಕಾಲೇಜಿನ ಹೊಸ ಕಟ್ಟಡದ ಉದ್ಘಾಟನೆಗಾಗಿ ವಾಜಪೇಯಿ ಅವರನ್ನು ಸುತ್ತೂರು ಮಠ ಆಹ್ನಾನಿಸಿತ್ತು. ಸುತ್ತೂರು ಶ್ರೀಗಳ ಮಾತಿಗೆ ಗೌರವ ಕೊಟ್ಟು ಬಂದಿದ್ದ ಅಟಲ್ ಜಿ ಅವರು ಮಾನಸ ಗಂಗೋತ್ರಿಯ ಕ್ಯಾಂಪಸ್‌ನಲ್ಲಿ ಸುತ್ತಾಡಿ ಕೆಲ ಕಾಲ ಕಳೆದರು.
ಜೆಎಸ್‌ಎಸ್ ವಿದ್ಯಾ ಸಂಸ್ಥೆಯು ಅಂಗವಿಕಲರಿಗಾಗಿ ಆರಂಭಿಸಿದ್ದ ಪಾಲಿಟೆಕ್ನಿಕ್ ಕಾಲೇಜಿನ ಬಗ್ಗೆ ವಾಜಪೇಯಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಅಂದಹಾಗೆ ಈ ಕಾಲೇಜು ಮಾನಸಗಂಗೋತ್ರಿಯ ಆವರಣದಲ್ಲೇ ಇದೆ. ಸಾವಿರಾರು ವಿಕಲ ಚೇತನ ವಿದ್ಯಾರ್ಥಿಗಳು ಇದರ ಲಾಭ ಪಡೆದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401