ರಾಜಕೀಯ
ವಾಜಪೇಯಿ ಜೀವನದ ತುಣುಕುಗಳು
ಸುದ್ದಿದಿನ ವಿಶೇಷ | ಅಟಲ್ ಬಿಹಾರಿ ವಾಜಪೇಯಿ ಕೃಷ್ಣ ಬಿಹಾರಿ ಮತ್ತು ಕೃಷ್ಣಾ ದೇವಿ ದಂಪತಿಗೆ 1924ರ ಡಿಸೆಂಬರ್ 25ರಂದು ಮಧ್ಯ ಪ್ರದೇಶದ ಗ್ವಾಲಿಯರ್ ನಲ್ಲಿ ಜನಿಸಿದರು. ವಾಜಪೇಯಿ ಅವರ ಅಜ್ಜ ಪಂಡಿತ್ ಶ್ಯಾಮ್ ಲಾಲ್ ವಾಜಪೇಯಿ ಉತ್ತರ ಪ್ರದೇಶದ ಬತೇಶ್ವರ ಹಳ್ಳಿಯಿಂದ ಗ್ವಾಲಿಯರ್ ಗೆ ವಲಸೆ ಬಂದವರು.
ಅವರ ತಂದೆ ಕೃಷ್ಣ ಬಿಹಾರಿ ಶಾಲಾ ಶಿಕ್ಷಕರಾಗಿದ್ದರು. ಕವಿಯೂ ಹೌದು. ಸರಸ್ವತಿ ಶಿಶು ಮಂದಿರದಲ್ಲಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಆರಂಭಿಸಿದರು. ಗ್ವಾಲಿಯರ್ ನ ವಿಕ್ಟೋರಿಯಾ (ಈಗ ಲಕ್ಷ್ಮೀ ಬಾಯಿ) ಕಾಲೇಜಿನಲ್ಲಿ ಹಿಂದಿ, ಇಂಗ್ಲಿಷ್, ಸಂಸ್ಕೃತದಲ್ಲಿ ಡಿಸ್ಟಿಂಕ್ಷನ್ ನಲ್ಲಿ ಪದವಿ . ಖಾನಪುರದ ಡಿಎವಿ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಗ್ವಾಲಿಯರ್ ನ ಆರ್ಯ ಸಮಾಜದ ಆರ್ಯ ಕುಮಾರ ಸಭಾದ ಮೂಲಕ ಸಾಮಾಜಿಕ ಜೀವನ ಆರಂಭಿಸುದರು. 1944ರಲ್ಲಿ ಕಾರ್ಯದರ್ಶಿಯಾಗಿ ನೇಮಕವಾದರು. 1939ರಲ್ಲಿ ಆರೆಸ್ಸೆಸ್ ನ ಸ್ವಯಂ ಸೇವಕ್ ಆಗಿ ಸೇರಿಕೊಂಡರು. ಬಾಬಾಸಾಹೇಬ್ ಆಪ್ಟೆ ಅವರಿಂದ ಪ್ರೇರಿತರಾದ ವಾಜಪೇಯಿ, ಆರೆಸ್ಸೆಸ್ ನ ಸಭೆ, ಸಮಾರಂಭಗಳಲ್ಲಿ ಭಾಗವಹಿಸುವ ಮೂಲಕ ಪೂರ್ಣಪ್ರಮಾಣ ಕಾರ್ಯಕರ್ತರಾದರು. 1947ರಲ್ಲಿ ಪ್ರಚಾರಕ್ ಆಗಿ ಗುರುತಿಸಿಕೊಂಡರು. ದೇಶ ವಿಭಜನೆಯ ಸಮಸ್ಯೆಯಿಂದ ಕಾನೂನು ವ್ಯಾಸಂಗ ಮೊಟಕುಗೊಳಿಸಿದರು.
ಉತ್ತರ ಪ್ರದೇಶಕ್ಕೆ ವಿಸ್ತಾರಕ್ ಆಗಿ ನೇಮಕಗೊಂಡರು. ಅಲ್ಲಿ ದೀನ್ ದಯಾಳ್ ಉಪಾಧ್ಯಾಯ ಅವರ ಮಾಸಪತ್ರಿಕೆ “ರಾಷ್ಟ್ರಧರ್ಮ”, ವಾರಪತ್ರಿಕೆ “ಪಾಂಚಜನ್ಯ”, ವೀರ್ ಅರ್ಜುನ್, ಸ್ವದೇಶ ಪತ್ರಿಕೆಯಲ್ಲಿ ಕಾರ್ಯನಿರತರಾದರು. ಜೀವನದಲ್ಲಿ ಮದುವೆಯಾಗದೇ ಬ್ರಹ್ಮಚರ್ಯ ಪಾಲಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401