ದಿನದ ಸುದ್ದಿ

ವಾಜಪೇಯಿ ಸ್ಥಿತಿ ಇನ್ನಷ್ಟು ಗಂಭೀರ

Published

on

ಸುದ್ದಿ ದಿನ ಡೆಸ್ಕ್: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವುದಾಗಿ ನವ ದೆಹಲಿಯ ಏಮ್ಸ್ ಆಸ್ಪತ್ರೆ ಮೂಲಗಳು ವರದಿ ನೀಡಿವೆ.

ವಾಜಪೇಯಿ ಅವರ ಆರೋಗ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಆತಂಕ ವ್ಯಕ್ತಪಡಿಸಿದ್ದು, ಬಿಜೆಪಿ ನಾಯಕರ ದಂಡು ಆಸ್ಪತ್ರೆಗೆ ದೌಡಾಯಿಸಿದೆ.

2009ರಿಂದ ಹಾಸಿಗೆ ಹಿಡಿದಿರುವ ವಾಜಪೇಯಿ ಅವರು, ಆರೋಗ್ಯದಲ್ಲಿ ವ್ಯತ್ಯಾಸವಾಗಿ ಸೋಮವಾರವಷ್ಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಲಭ್ಯವಾಗಿರುವ ವರದಿಗಳ ಪ್ರಕಾರ ವಾಜಪೇಯಿ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರ ಕಿಡ್ನಿಯಲ್ಲಿ ಕೂಡ ಸಮಸ್ಯೆ ಇದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಈಚೆಗಷ್ಟೆ ವಾಜಪೆಯಿ ಅವರು ಜ್ವರದಿಂದ ಬಳಲುತ್ತಿದ್ದು, ಸೋಮವಾರ ಚಿಕಿತ್ಸೆ ಪಡೆದ ನಂತರ ಅವರ ಸ್ಥಿತಿ ಸುಧಾರಿಸಿದೆ ಎಂದು ತಿಳಿದು ಬಂದಿತ್ತು.

ರಾಹುಲ್ ಗಾಂಧಿ ಭೇಟಿ

ವಾಜಪೇಯಿ ಅವರ ಆರೋಗ್ಯ ಸ್ಥಿತಿ ಕುರಿತು ತಿಳಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಡಾ. ರಂದೀಪ್ ಗುಲ್ಹೇರಿಯಾ ಅವರ ಬಳಿ ಚಿಕಿತ್ಸೆ ಪಡೆಯುತ್ತಿರುವ ವಾಜಪೇಯಿ ಅವರು, ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಗುಲ್ಹೆರಿಯಾ ಅವರು ವಾಜಪೇಯಿ ಅವರ ಖಾಸಗಿ ವೈದ್ಯರು.

Leave a Reply

Your email address will not be published. Required fields are marked *

Trending

Exit mobile version