ದಿನದ ಸುದ್ದಿ
ವಾಜಪೇಯಿ ಆಸ್ಪತ್ರೆಗೆ ದಾಖಲು
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನವ ದೆಹಲಿಯ ಏಮ್ಸ್ ಆಸ್ಪತ್ರೆಗೆ ಸೋಮವಾರ ದಾಖಲಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆ ವೈದ್ಯರು, ನಿಗದಿತ ಚಿಕಿತ್ಸೆಗಾಗಿ ಅವರನ್ನು ದಾಖಲಿಸಿಕೊಲ್ಳಲಾಗಿದೆ (ರೊಟೀನ್ ಚೆಕ್ ಅಪ್) ಎಂದು ತಿಳಿಸಿದ್ದಾರೆ.
ಡಾ. ರಂದೀಪ್ ಗುಲ್ಹೇರಿಯಾ ಅವರ ಬಳಿ ಚಿಕಿತ್ಸೆ ಪಡೆಯುತ್ತಿರುವ ವಾಜಪೇಯಿ ಅವರು, ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಗುಲ್ಹೆರಿಯಾ ಅವರು ವಾಜಪೇಯಿ ಅವರ ಖಾಸಗಿ ವೈದ್ಯರಾಗಿದ್ದಾರೆ.