ದಿನದ ಸುದ್ದಿ

ಚಿಕಿತ್ಸೆಗೆ ಸ್ಪಂದಿಸುತ್ತಿರುವ ವಾಜಪೇಯಿ

Published

on

ಸುದ್ದಿದಿನ ಡೆಸ್ಕ್: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಉಳಿದಿದ್ದು, ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಏಮ್ಸ್ ಆಸ್ಪತ್ರೆ ಮೂಲಗಳು ತಿಳಿಸಿವೆ.

ಉಸಿರಾಟದ ತೊಂದರೆ, ಮೂತ್ರ ಕೋಶ ಸೋಂಕಿನಿಂದ ಬಳುತ್ತಿರುವ ಅವರು ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಸೋಂಕಿನಿಂದ ಬಳಲುತ್ತಿರುವ ವಾಜಪೇಯಿ ಅವರಿಗೆ ರೋಗ ನಿರೋಧಕಗಳನ್ನು ನೀಡಲಾಗಿದೆ. ಆ ಕೋರ್ಸ್ ಮುಗಿಯುವ ವರೆಗೆ ಏನೂ ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

2009ರಿಂದ ಹಾಸಿಗೆ ಹಿಡಿದಿರುವ ವಾಜಪೇಯಿ ಅವರು, ಆರೋಗ್ಯದಲ್ಲಿ ವ್ಯತ್ಯಾಸವಾಗಿ ಸೋಮವಾರವಷ್ಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಲಭ್ಯವಾಗಿರುವ ವರದಿಗಳ ಪ್ರಕಾರ ವಾಜಪೇಯಿ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರ ಕಿಡ್ನಿಯಲ್ಲಿ ಕೂಡ ಸಮಸ್ಯೆ ಇದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಈಚೆಗಷ್ಟೆ ವಾಜಪೆಯಿ ಅವರು ಜ್ವರದಿಂದ ಬಳಲುತ್ತಿದ್ದು, ಸೋಮವಾರ ಚಿಕಿತ್ಸೆ ಪಡೆದ ನಂತರ ಅವರ ಸ್ಥಿತಿ ಸುಧಾರಿಸಿದೆ ಎಂದು ತಿಳಿದು ಬಂದಿತ್ತು.

ಡಾ. ರಂದೀಪ್ ಗುಲ್ಹೇರಿಯಾ ಅವರ ಬಳಿ ಚಿಕಿತ್ಸೆ ಪಡೆಯುತ್ತಿರುವ ವಾಜಪೇಯಿ ಅವರು, ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಗುಲ್ಹೆರಿಯಾ ಅವರು ವಾಜಪೇಯಿ ಅವರ ಖಾಸಗಿ ವೈದ್ಯರು.

Leave a Reply

Your email address will not be published. Required fields are marked *

Trending

Exit mobile version