ದಿನದ ಸುದ್ದಿ

ವಜ್ರಾಗೆ ಪ್ರಿನ್ಸೆಸ್ ಆಫ್ ದಾವಣಗೆರೆ ಕಿರೀಟ

Published

on

ಸುದ್ದಿದಿನ: ದಾವಣಗೆರೆ ನಗರದಲ್ಲಿ ಇತ್ತೀಚೆಗೆ ಡೆಸ್ಟಿನಿ ಇವೆಂಟ್ಸ್‍ನ ನವೀನ್ ಅವರು ಏರ್ಪಡಿಸಿದ್ದ ಫ್ಯಾಷನ್ ಫೆಸ್ಟ್ ಟ್ಯಾಲೆಂಟ್ ಸರ್ಚ್‍ನಲ್ಲಿ ನಗರದ ಬಾಲ ಪ್ರತಿಭೆ ಕು. ಮಹಾಲಕ್ಷ್ಮಿ ಸಿ.ಜೆ.(ವಜ್ರ) ಮಿಸ್ ಪ್ರಿನ್ಸೆಸ್ ಆಫ್ ದಾವಣಗೆರೆ ಆಗಿ ಆಯ್ಕೆಯಾಗಿದ್ದಾರೆ.

ಬಾಲ ಪ್ರತಿಭೆ ಮತ್ತು ಯುವ ಪ್ರತಿಭೆಗಳನ್ನು ಗುರುತಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, 6 ವರ್ಷದ ಕು. ಮಹಾಲಕ್ಷ್ಮಿ ಸಿ.ಜೆ.(ವಜ್ರ) ಇವರು ನೂರಾರು ಸ್ಪರ್ಧಿಗಳನ್ನು ಹಿಂದಿಕ್ಕಿ ಅಂತಿಮವಾಗಿ ಮಿಸ್ ಪ್ರಿನ್ಸೆಸ್ ಆಫ್ ದಾವಣಗೆರೆ ಆಗಿ ಆಯ್ಕೆಯಾದರು.

ಕು. ಮಹಾಲಕ್ಷ್ಮಿ ಸಿ.ಜೆ.(ವಜ್ರ) ಅನುಭವ ಮಂಟಪದ ತರಳಬಾಳು ವಿದ್ಯಾಸಂಸ್ಥೆಯಲ್ಲಿ 1ನೇ ತರಗತಿ ಓದುತ್ತಿದ್ದು, ಮಹಾನಗರ ಪಾಲಿಕೆಯ ಲೆಕ್ಕಾಧಿಕಾರಿ ಎಂ.ಎಸ್.ಜಯರಾಂ ಮತ್ತು ಮಂಜುಳಾ ಟಿ.ಎನ್. ಇವರ ಪುತ್ರಿ.

Leave a Reply

Your email address will not be published. Required fields are marked *

Trending

Exit mobile version