ಸಿನಿ ಸುದ್ದಿ
‘ವಜ್ರುಮುನಿ’ ಟೈಟಲ್ ವಿವಾದ | ಚಲನಚಿತ್ರ ವಾಣಿಜ್ಯಮಂಡಳಿಗೆ ದೂರುಸಲ್ಲಿಸಿದ ವಜ್ರಮುನಿ ಕುಟುಂಬ
ಸುದ್ದಿದಿನ ಡೆಸ್ಕ್ | ವಜ್ರುಮುನಿ ಸಿನಿಮಾದ ಟೈಟಲ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಖಳನಟನ ವಜ್ರುಮುನಿ ಇ ಪತ್ನಿ ಲಕ್ಷ್ಮೀದೇವಿ ಮತ್ತು ಪುತ್ರ ಜಗದೀಶ್ ಅವರಿಂದ ಚಲನ ಚಿತ್ರ ವಾಣಿಜ್ಯ ಮಂಡಳಿಗೆ ಇಂದು ದೂರುಸಲ್ಲಿಸಲಾಯಿತು.
ನಮ್ಮ ಕುಟುಂಬದವರ ಅನುಮತಿ ಪಡೆಯದೇ ಶೀರ್ಷಿಕೆಯನ್ನು ಬಳಸಿರೋದು ಹಾಗೂ ಇನ್ನು ಮುಂದೆ ಅನುಮತಿಯಿಲ್ಲದೆ ವಜ್ರುಮುನಿಯವರ ಯಾವುದೇ ಭಾವ ಚಿತ್ರಗಳನ್ನ, ದೃಶ್ಯಗಳನ್ನ ಬಳಸದಂತೆ ಮನವಿಮಾಡಿದ್ದಾರೆ.
ಇನ್ನು ಸಿನಿಮಾದಲ್ಲಿ ಯಾವೆಲ್ಲ ವಿಚಾರಗಳನ್ನ ತೋರಿಸ್ತಾರೆ ಎಂದು ನಮ್ಮೊಡನೆ ಚಿತ್ರತಂಡ ಚರ್ಚೆ ಮಾಡದೇ ಸಿನಿಮಾ ಮಾಡಲು ಹೊರಟಿದೆ ಎಂದು ಆರೋಪ ವ್ಯಕ್ತಪಡಿಸಿದರು.
ಈ ಹಿನ್ನೆಲೆ ಫಿಲಂ ಚೇಂಬರ್, ಚಿತ್ರತಂಡ ಹಾಗು ವಜ್ರುಮನಿ ಕುಟುಂಬ ಕರೆದು ಮಾತುಕತೆ ಮಾಡುವ ಸಾದ್ಯತೆ ಇದೆ ಎಂದು ತಿಳಿದುಬಂದಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401