ದಿನದ ಸುದ್ದಿ

ಪ್ರೇಮಿಗಳ ದಿನಾಚರಣೆ ಶಾಂತಿಯುತವಾಗಿ ಆಚರಿಸಲು ಪೊಲೀಸ್ ಇಲಾಖೆ ಮನವಿ ; ಶ್ರೀರಾಮ ಸೇನೆಯಿಂದ ವಿರೋಧ

Published

on

ಸುದ್ದಿದಿನ,ಮೈಸೂರು : ಇಂದು ಪ್ರೇಮಿಗಳ ದಿನಾಚರಣೆ ಹಿನ್ನಲೆ ಮೈಸೂರಿನಲ್ಲಿ ಪೊಲೀಸ್ ಇಲಾಖೆಯಿಂದಕಟ್ಟೆಚ್ಚರವಹಿಸಲಾಗಿದೆ.ಶಾಂತಿಯುತವಾಗಿ ಪ್ರೇಮಿಗಳ ದಿನಾಚರಣೆ ಆಚರಿಸಲು ಪೊಲೀಸ್ ಇಲಾಖೆ ಮನವಿಮಾಡಿದೆ.

ಮತ್ತೊಂದೆಡೆ ಪ್ರೇಮಿಗಳ ದಿನಾಚರಣೆಗೆ ವಿರೋಧ ವ್ಯಕ್ತವಾಗಿದ್ದು, ಶ್ರೀರಾಮ ಸೇನೆಯಿಂದ ಪ್ರೇಮಿಗಳ ದಿನಾಚರಣೆ ವಿರೋಧಿಸಿ ಕರಪತ್ರ ಹಂಚಲು ಸಿದ್ಧತೆನಡೆಸಿದೆ.ಮಹಾರಾಣಿ ಕಾಲೇಜು, ನಗರ ಬಸ್ ನಿಲ್ದಾಣದಲ್ಲಿ ಕರ ಪತ್ರ ಹಂಚಿ ಪ್ರೇಮಿಗಳ ದಿನ ಆಚರಿಸದಂತೆ ಯುವಕ, ಯುವತಿಯರಲ್ಲಿ ಜಾಗೃತಿ ಮೂಡಿಸುತ್ತಿದೆ.

ನಿತ್ಯ ಪ್ರೀತಿಸೊ ಜೀವಕ್ಕೆ ದಿನ ಯಾತಕೆ ಅನ್ನೊ ಮೂಲಕ ಜಾಗೃತಿ ಆರಂಭಿಸಿದ್ದು ಮತ್ತೊಂದುಕಡೆ ಆರೋಗ್ಯಕರ ಪ್ರೇಮಿಗಳ ದಿನಾಚರಣೆ ಆಚರಿಸೋ ಪ್ರೇಮಿಗಳಿಗೆ ಪೊಲೀಸ್ ಭದ್ರತೆ ನೀಡಿದೆ. ಸುಮಾರು 7 ಅಂಶಗಳನ್ನೊಳಗೊಂಡ ಷರತ್ತು ವಿಧಿಸಿದ ನಗರ ಪೊಲೀಸರು, ಕಾನೂನು ಬಾಹಿರ ಚಟುವಟಿಗೆಗಳಿಗೆ ಅವಕಾಶ ಇಲ್ಲ ಹಾಗೂ ಸಾರ್ವಜನಿಕರಿಗೆ ತೊಂದ್ರೆ ಆದ್ರೆ ಟೋಲ್ ಫ್ರೀ ನಂಬರ್ ಗೆ ಕರೆ ಮಾಡಬಹುದು ಎಂದು ಹೇಳಿದ್ದಾರೆ.

ಟೋಲ್ ಫ್ರೀ ನಂ 100, 2418339, 2418339.

ಒಟ್ಟಾರೆ ಪ್ರೇಮಿಗಳ ದಿನಾಚರಣೆ ಶಾಂತಯುತವಾಗಿ ಆಚರಿಸಲು ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಮನವಿಮಾಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version