ದಿನದ ಸುದ್ದಿ
ಬಸವರಾಜ ಹೊರಟ್ಟಿ ಭೂ ಕಬಳಿಕೆ ಆರೋಪ : ಉಗ್ರ ಹೋರಾಟದ ಎಚ್ಚರಿಕೆ ನೀಡಿದ ವಾಲ್ಮೀಕಿ ಸ್ವಾಮೀಜಿ
ಸುದ್ದಿದಿನ, ತುಮಕೂರು : ಬಸವರಾಜು ಹೊರಟ್ಟಿಯವರ ವಿರುದ್ಧ 40 ಕೋಟಿ ಮೌಲ್ಯದ ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ಅವರನ್ನ ಸಭಾಪತಿ ಸ್ಥಾನದಿಂದ ಕೆಳಿಗಿಳಿಸಬೇಕು ಎಂದು ಶ್ರೀ ವಾಲ್ಮೀಕಿ ಪ್ರಸನ್ನನಂಧ ಸ್ವಾಮೀಜಿ ರಾಜನಹಳ್ಳಿ ಪೀಠಾಧ್ಯಕ್ಷರು ಹೇಳಿದ್ದಾರೆ.
ತುಮಕೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹೊರಟ್ಟಿಯವರನ್ನು ಕೆಳಗಿಲಿಸಲಿಲ್ಲ ಉಗ್ರ ಹೋರಾಟ ಮಾಡುವುದಾಗಿ ಸಿಎಂಗೆ ಎಚ್ಚರಿಕೆ ನೀಡಿದರು ಸ್ವಾಮೀಜಿ. ನಮ್ಮ ಶ್ರೀ ಮಠಕ್ಕೆ ಸೇರಿದಂತ ಸರ್ವೋದಯ ಶಿಕ್ಷಣ ಟ್ರಸ್ಟ್ ಧಾರವಾಡ ಈ ಆಸ್ತಿಯನ್ನ ವಿಧಾನ ಪರಿಷತ್ ಸಭಾಪತಿಗಳಾದಂತ ಬಸವರಾಜು ಹೊರಟ್ಟಿಯವರು ಅದರ ಆಸ್ತಿಯನ್ನ ನಾನು ಕಬಳಿಸಿಲ್ಲ ಎಂದು ಎರಡು ದಿನಗಳ ಹಿಂದೆ ಪತ್ರಿಕ ಹೇಳಿಕೆ ನೀಡಿದ್ದಾರೆ. ಆದರೆ ಅವರು ನಮ್ಮ ಆಸ್ತಿಯನ್ನ ಕಬಳಿಕೆ ಮಾಡಿರುವ ಬಗ್ಗೆ ನಮ್ಮ ಹತ್ತಿರ ದಾಖಲೆಗಳಿವೆ. ಮಾಧ್ಯಮಗಳ ಮೂಲಕ ನಾವು ದಾಖಲೆಗಳನ್ನು ಬಿಡುಗಡೆ ಮಾಡುತ್ತಿದ್ದೇವೆ. ಬಸವರಾಜು ಹೊರಟ್ಟಿಯವರು ನಾವು ಸರ್ವೊದಯ ಶಿಕ್ಷಣ ಸಂಸ್ಥೆಗೆ ರಾಜೀನಾಮೆ ನೀಡಿದ್ದೇವೆ ಎಂದಿದ್ದಾರೆ.
ಅವರು ಮಂತ್ರಿಗಳಿದ್ದ ಸಂದರ್ಭದಲ್ಲಿ ಸಂಸ್ಥೆಯ ವ್ಯವಹಾರಗಳನ್ನ ಮಾಡಿರುವ ದಾಖಲೆಗಳು ನಮ್ಮ ಹತ್ತಿರ ಇದೆ ಎಂದು ಕಿಡಿಕಾರಿದರು.
ಸಭಾಪತಿಯಾಗಿರು ಹೊರಟ್ಟಿಯವರು ಜನರಿಗೆ ಸುಳ್ಳು ಹೇಳಬಾರದು ಜನರ ದಾರಿ ತಪ್ಪಿಸ ಬಾರದು. ಮಾಧ್ಯಮಗಳು ವೇದಿಕೆಯನ್ನು ಸಿದ್ಧಪಡಿಸಿದರೆ ನಮ್ಮ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಬರುತ್ತೇವೆ. ಅವರು ಕೂಡ ದಾಖಲೆಗಳನ್ನು ತೆಗೆದುಕೊಂಡು ಬರಲಿ ಜನಗಳ ಮುಂದೆ ಯಾರು ಲೀಗಲ್ ಆಗಿದ್ದಾರೆ ಎಂದು ಗೊತ್ತಾಗುತ್ತೆ. ನಾವು ಸಿಎಂ ಗೆ ಒತ್ತಾಯ ಮಾಡುತ್ತಿದ್ದೇವೆ ಅವರನ್ನು ಕೂಡಲೇ ಸಭಾಪತಿ ಸ್ಥಾನದಿಂದ ಕೆಳಗಿಳಿಸಬೇಕು .ಇಲ್ಲದೇ ಹೋದರೆ ಇಡೀ ರಾಜ್ಯದ್ಯಂತ ಮಠ ಮತ್ತು ಸಮುದಾಯ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು ಸ್ವಾಮೀಜಿ.
ಸುದ್ದಿದಿನ.ಕಾಂ|ವಾಟ್ಸಾಪ್|9986715401