ದಿನದ ಸುದ್ದಿ

ಮೂರು ನೂತನ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಚಾಲನೆ

Published

on

ಸುದ್ದಿದಿನಡೆಸ್ಕ್:ಬೆಂಗಳೂರು-ಮದುರೈ ಮಾರ್ಗ ಸೇರಿದಂತೆ ಮೂರು ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಹಸಿರುನಿಶಾನೆ ತೋರಿದರು.

ಈ ವೇಳೆ ಮಾತನಾಡಿದ ಅವರು, ಆಧುನಿಕ ರೈಲು ಮೂಲಸೌಕರ್ಯ ವಿಕಸಿತ ಭಾರತ ದೃಷ್ಠಿಕೋನದ ಒಂದು ದೃಢ ಆಧಾರ ಸ್ಥಂಭವಾಗಿದೆ. ರೈಲು ಮಾರ್ಗಗಳ ವಿದ್ಯುದೀಕರಣ, ನೂತನ ರೈಲುಗಳ ಚಾಲನೆ, ಮಾರ್ಗಗಳ ಆರಂಭ, ಇವೆಲ್ಲವೂ ಶೀಘ್ರವಾಗಿ ಕಾರ್ಯಗತಗೊಳ್ಳುತ್ತಿವೆ. ಈ ಬಾರಿಯ ಆಯವ್ಯಯದಲ್ಲಿ ಎರಡೂವರೆ ಲಕ್ಷ ಕೋಟಿ ರೂಪಾ ಯಿಗೂ ಹೆಚ್ಚು ಹಣವನ್ನು ರೈಲ್ವೆಯ ಅಭಿವೃದ್ಧಿಗಾಗಿ ಮೀಸಲಿಡಲಾಗಿದ್ದು, ರೈಲ್ವೆಗೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗುತ್ತಿದೆ ಎಂದರು.

ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ ಯೋಜನೆಗಳಡಿ ದೇಸಿ ನಿರ್ಮಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಮೀರತ್-ಲಖನೌ, ಬೆಂಗಳೂರು-ಮದುರೈ ಮತ್ತು ಚೆನ್ನೈ-ನಾಗರಕೊಯಿಲ್ ನಿಲ್ದಾಣಗಳ ನಡುವೆ ಸಂಚರಿಸಲಿವೆ. ಈ ಮೂಲಕ ಕರ್ನಾಟಕ, ಉತ್ತರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಪ್ರಯಾಣಿಕರಿಗೆ ಅತ್ಯಾಧುನಿಕ ಮತ್ತು ಜಾಗತಿಕ ಶ್ರೇಣಿಯ ರೈಲು ಸೇವೆಗಳನ್ನು ಒದಗಿಸಲಾಗುತ್ತಿದೆ. ಈ ಮೂರು ರೈಲುಗಳ ಸಂಚಾರದಿಂದ ಸಾಮಾನ್ಯ ಪ್ರಯಾಣಿಕರ ಜತೆಗೆ ವೃತ್ತಿಪರರು, ಉದ್ಯಮಿಗಳು ಹಾಗೂ ವಿದ್ಯಾರ್ಥಿ ಸಮುದಾಯಗಳಿಗೂ ಅನುಕೂಲವಾಗಲಿದೆ.

https://x.com/narendramodi/status/1829779031044096417?t=J0qqAEO50gONg86mNTlL-A&s=19

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version