ದಿನದ ಸುದ್ದಿ
ತಮಿಳು ನಾಡಿಗೆ ಕಾವೇರಿ ನೀರು ಬಿಟ್ಟರೆ ಕರ್ನಾಟಕ ಬಂದ್ ಮಾಡ್ತೀವಿ : ವಾಟಾಳ್ ನಾಗರಾಜ್ ಎಚ್ಚರಿಕೆ
ಸುದ್ದಿದಿನ, ಬೆಂಗಳೂರು : ಮೊದಲನೇಯದಾಗಿ ನಾನು ಪ್ರಾಧಿಕಾರ ಒಪ್ಪುತ್ತಿಲ್ಲ.ಆದರೆ ತಮಿಳುನಾಡು ಪ್ರಾದಿಕಾರ ಬೇಕು ಅಂತ ಹೇಳಿತ್ತು. ಪ್ರಾಧಿಕಾರಕ್ಕೆ ರಾಜ್ಯ ಸರ್ಕಾರದ ವಿರೋಧ ಕೂಡ ಇತ್ತು. ಆದ್ರೆ ಇದೀಗ ರಾಜ್ಯ ಸರ್ಕಾರ ಪ್ರಾಧಿಕಾರದ ಸಭೆಯಲ್ಲಿ ಭಾಗವಹಿಸಿ ಅದನ್ನು ಒಪ್ಪಿದೆ.ಯಾವುದೇ ಕಾರಣಕ್ಕೂ ಪ್ರಾಧಿಕಾರವನ್ನು ರಾಜ್ಯ ಸರ್ಕಾರ ಒಪ್ಪಬಾರದು. ಪ್ರಾಧಿಕಾರಕ್ಕೆ ನಮ್ಮ ವಿರೋಧವಿದೆ ಎಂದು ಮಂಡ್ಯದಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.
ಒಂದು ಹನಿ ನೀರು ಕೊಟ್ರೆ ನಮ್ಮ ವಿರೋಧವಿದೆ.
ನೀರು ಕೊಟ್ರೆ ಬೆಂಗಳೂರಿಗೆ ನೀರಿಲ್ಲ,ರೈತರಿಗೆ ನೀರಿಲ್ಲದ ಪರಿಸ್ಥಿತಿ ಉಂಟಾಗುತ್ತೆ. ಒಂದು ವೇಳೆ ನೀರು ಬಿಟ್ರೆ ಕನ್ನಡ ಸಂಘದಿಂದ ಕರ್ನಾಟಕ ಬಂದ್ ಮಾಡ್ತಿನಿ. ನಾನು ಕೆ ಆರ್ ಎಸ್ ನಲ್ಲಿ ಜೂನ್ 3 ರಂದು ಮಲಗಿ ಪ್ರತಿಭಟನೆ ಮಾಡ್ತೀನಿ ಅಂತಾ ಎಚ್ಚರಿಕೆ ನೀಡಿದ ಅವರು, ನಾನು ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ರಲ್ಲಿ ಮನವಿ ಮಾಡ್ತೀನಿ,ಯಾವುದೇ ಕಾರಣಕ್ಕೂ ನೀರು ಬಿಡಬಾರದು ಎಂದು ಒತ್ತಾಯಿಸಿದರು.
ಪ್ರಾಧಿಕಾರ ವಿರೋಧಿಸುವ ಮೂಲಕ ಪ್ರಾಧಿಕಾರಕ್ಕೆ ಧಿಕ್ಕಾರ ಕೂಗಿದ ವಾಟಾಳ್ ನಾಗರಾಜ್ ಅವರು, ಕಾವೇರಿ ನೀರು ಬಿಡುಗಡೆ ಮಾಡುವಂತೆ ಪ್ರಾಧಿಕಾರದ ಆದೇಶ ಹಿನ್ನೆಲೆ ಕೆ.ವಿ ಶಂಕರೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ವಾಟಾಳ್ ರಿಂದ ಹೆದ್ದಾರಿಯಲ್ಲಿ ಮಲಗಿ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಂಡ್ಯದ ಸಂಜಯ್ ವೃತ್ತದಲ್ಲಿ ರಸ್ತೆಯಲ್ಲಿ ನಡೆದ ಪ್ರತಿಭಟನೆ ನಡೆಸಿದ ಅವರು, ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಮಲಗಿ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243