ದಿನದ ಸುದ್ದಿ
ವಿಶ್ವ ವೀರಶೈವ ಲಿಂಗಾಯಿತ ಏಕೀಕರಣ ಪರೀಷತ್ ನಿಂದ ನಾಳೆ ಬಸವ ಜಯಂತಿ – ಪ್ರತಿಭಾ ಪುರಸ್ಕಾರ
ಸುದ್ದಿದಿನ,ದಾವಣಗೆರೆ: ವಿಶ್ವ ವೀರಶೈವ ಲಿಂಗಾಯಿತ ಏಕೀಕರಣ ಪರೀಷತ್(ರಿ) ಹಾಗು ವಿಶ್ವ ಕಲ್ಯಾಣ ಪರಿಸರ ಗ್ರಾಹಕ ಸಾಂಸ್ಕೃತಿಕ ಪರಿಷತ್ತು ಜಂಟಿಯಾಗಿ ಮೇ 25 ರಂದುಬೆಳಿಗ್ಗೆ 10.30 ಕ್ಕೆ ಬಸವಜಯಂತಿ ಉತ್ಸವ ಮತ್ತು ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ. 90 ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕಾಯಕಯೋಗಿ ಬಸವಶ್ರೀ ಪ್ರಶಸ್ತಿ, ಕಾಯಕಯೋಗಿ ಶರಣೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಗರದ ಗುರುಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ತಿನ ಅಧ್ಯಕ್ಷ ಡಾ. ರೇವಣ್ಣ ಬಳ್ಳಾರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಸಾನಿಧ್ಯವನ್ನು ಪಾಂಡೋಮಟ್ಟಿ ಶ್ರೀ ಡಾ.ಗುರುಬಸವ ಮಹಾ ಸ್ವಾಮಿಗಳು, ಅಧ್ಯಕ್ಷ ಡಾ. ರೇವಣ್ಣ ಬಳ್ಳಾರಿ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಉಚ್ಛ ನ್ಯಾಯಾಲಯ ಕನ್ನಡದಲ್ಲಿ ಮೊದಲ ತೀರ್ಪು ನೀಡಿದ ನ್ಯಾಯಮೂರ್ತಿ ಅರಳಿ ನಾಗರಾಜ್ ಉದ್ಘಾಟನೆ ನೆರವೇರಿಸುವರು.
ಕುಸುಮಾ ಲೋಕೇಶ್, ಜಿ.ಕೆ. ಶಕುಂತಲಾ
ಅವರು ಬಸವಾದಿಶರಣರ ವಚನಗಳ ಕುರಿತಾಗಿ ಉಪನ್ಯಾಸ ನೀಡುವರು ಎಂದರು.
ಜ್ಯೋತಿ ಬಸವಶ್ರೀ ಪ್ರಶಸ್ತಿಯನ್ನು ನ್ಯಾಯಮೂರ್ತಿ ಅರಳಿ ನಾಗರಾಜ್‍ರವರಿಗೆ, ಕಾಯಕಯೋಗಿ ಬಸವಶ್ರೀ ಪ್ರಶಸ್ತಿಗಳನ್ನು ಹೊನ್ನಾಳಿ ಹಿರಿಯ ಖ್ಯಾತ ಸಾಹಿತಿಗಳಾದ ಯು.ಎನ್.ಸಂಗನಾಳ ಮಠ್, ಮೈಸೂರು ಆಕಾಶವಾಣಿ ಕೇಂದ್ರದ ವಿಶ್ರಾಂತ ನಿರ್ದೇಶಕ ಎಮ್.ವಿ.ರಮೇಶ್, ಮೈಸೂರು ಕನ್ನಡ ಜಾಗೃತಿ ಸಮಿತಿ ಸದಸ್ಯರಾದಭೇರ್ಯ ರಾಮ್ ಕುಮಾರ್, ನಗರದ ಜನರಲ್ ಸರ್ಜನ್ ಡಾ. ರವಿಕುಮಾರ್.ಟಿ.ಎಮ್., ಶಿವಕುಮಾರ್ ಹೆಚ್.ಎಸ್.,
ಪೌರಕಾರ್ಮಿಕ ಎನ್.ರಾಜು ರವರಿಗೆ ಮತ್ತು ಕಾಯಕಯೋಗಿ ಶರಣೆ ಪ್ರಶಸ್ತಿಗಳನ್ನು ನಗರದ ಸಿದ್ದಗಂಗಾ
ಶಾಲೆ ರುವಾರಿ ಜಸ್ಟಿನ್ ಡಿಸೋಜ, ಕವಿ, ಸಾಹಿತಿ, ಸಂಧ್ಯಾಸುರೇಶ್, ಶಿಕ್ಷಕಿ ಮಾಯಿನೂರು ಖಾನಂ, ಶುಶ್ರೂಷಕಿ
ರೂಪಾ ಬಸವರಾಜ್ ಮಾತೂರ್ ಅವರಿಗೆ ಪ್ರದಾನ ಮಾಡಲಾಗುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪತ್ರಕರ್ತ ಮಂಜುನಾಥ್ ಏಕಬೋಟೆ, ಹರ್ಷಿತ್ ಇಂಡಸ್ಟ್ರೀ ಮಾಲೀಕ ಶ್ರೀಹರಿ ಎನ್.ಗೌರಿಪುರ, ಇಂದೂಧರ್ ಇಶಾನಿಮಠ್, ಬಸವರಾಜ್ ಸಿರಿಗೆರೆ
ಭಾಗವಹಿಸಲಿದ್ದಾರೆ. ಇದಲ್ಲದೇ ಸುಮಾರು 120 ಕ್ಕೂ ಹೆಚ್ಚು
ಪಿಯುಸಿ, ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 90 ಕ್ಕೂ ಹೆಚ್ಚು ಅಂಕ ಪಡೆದ ಪ್ರತಿಭಾವಂತರಿಗೆ
ಪ್ರತಿಭಾ ಪುರಸ್ಕಾರ ನೀಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ, ಇಂ-ದುಧರ್ ನಿಶಾನಿಮಠ್, ಜಿ.ಕೆ.ಶಕುಂತಲಾ, ಬಸವರಾಜ್ ಸಿರಿಗೆರೆ, ಶಿವಕುಮಾರ್ ಡಿ. ಶೆಟ್ಟರ್, ಎ.ಬಿ. ರುದ್ರಮ್ಮ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243