/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ವಾಹನಗಳ ನೊಂದಣಿ ಫಲಕಗಳ ಮೇಲಿರುವ ಹೆಸರು, ಚಿಹ್ನೆ, ಲಾಂಛನಗಳನ್ನು ತೆರವುಗೊಳಿಸಲು ಕ್ರಮ

Published

on

ಸುದ್ದಿದಿನ,ದಾವಣಗೆರೆ : ಉಚ್ಚ ನ್ಯಾಯಾಲಯ ಹಾಗೂ ಸಾರಿಗೆ ಆಯುಕ್ತರು, ಬೆಂಗಳೂರು ಇವರ ಆದೇಶದಂತೆ ವಾಹನಗಳ ನೊಂದಣಿ ಫಲಕಗಳ ಮೇಲೆ ಅನಧಿಕೃತವಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ/ರಾಜ್ಯ ಮಾನವ ಹಕ್ಕುಗಳ ಆಯೋಗಗಳ ಹೆಸರುಗಳನ್ನು ಹೋಲುವಂತಹ ರಾಷ್ಟ್ರೀಯ/ರಾಜ್ಯ ಮಾನವ ಹಕ್ಕುಗಳ ಸಂಸ್ಥೆ/ಒಕ್ಕೂಟ/ಇತ್ಯಾದಿ ಹೆಸರುಗಳನ್ನು ಚಿಹ್ನೆ/ಲಾಂಛನಗಳನ್ನು ಹಾಗೂ ಇತರೆ ಸಂಘ ಸಂಸ್ಥೆಗಳ ಹೆಸರುಗಳನ್ನು ತೆರವುಗೊಳಿಸಬೇಕು.

ಇಂತಹ ವಾಹನಗಳನ್ನು ವಿಶೇಷ ಕಾರ್ಯಾಚರಣೆ ಮಾಡಿ ಕೇಂದ್ರ ಮೋಟಾರು ವಾಹನಗಳ 1989 ರ ನಿಯಮ 50 ಮತ್ತು 51 ರ ಹಾಗೂ ಎಂಬ್ಲಮ್ಸ್ ಮತ್ತು ನೇಮ್ಸ್ (ಪ್ರಿವೇನ್ಶನ್ ಆಫ್ ಇಮ್‍ಪ್ರಾಪರ್ ಯೂಸ್) ಆ್ಯಕ್ಟ್ 1950 ಕಲಂ 3, 4 ಮತ್ತು 5 ರ ವಿರುದ್ದ ಕ್ರಮವನ್ನು ಕೈಗೊಂಡು ಡಿ.28 ರೊಳಗಾಗಿ ತೆರವುಗೊಳಿಸುವಂತೆ ಆದೇಶಿಸುತ್ತಾರೆ.

ಇಂತಹ ವಾಹನಗಳ ಮಾಲೀಕರು ಹಾಗೂ ಚಾಲಕರು, ಸಂಘ ಸಂಸ್ಥೆಗಳು ಅನಧಿಕೃತವಾಗಿ ಅಳವಡಿಸಿಕೊಂಡಿರುವಂತಹ ನೊಂದಣಿ ಫಲಕಗಳನ್ನು ಈ ಕೂಡಲೇ ತೆರವುಗೊಳಿಸುವಂತೆ ತಿಳಿಸಿದೆ.

ದಾವಣಗೆರೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಮೋಟಾರು ವಾಹನಗಳ ನಿರೀಕ್ಷಕರು ಅನಧಿಕೃತವಾಗಿ ಅಳವಡಿಸಿಕೊಂಡಿರುವಂತಹ ನೊಂದಣಿ ಫಲಕಗಳನ್ನು ತರವುಗೊಳಿಸಲು ದಾವಣಗೆರೆ ಜಿಲ್ಲೆಯಾದ್ಯಂತ ವಿಶೇಷ ಕಾರ್ಯಾಚರಣೆಯನ್ನು ಮಾಡಲಿದೆ ಹಾಗೂ ತಪಿತಸ್ಥ ವಾಹನಗಳ ಮೇಲೆ ಕಾನೂನಿನ ಕ್ರಮವನ್ನು ಕೈಗೊಳ್ಳಲಿದ್ದಾರೆ ಎಂದು ದಾವಣಗೆರೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್.ಜೆ. ಬಣಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version