ದಿನದ ಸುದ್ದಿ
ಯಾವುದೇ ಸವಾಲು ಎದುರಿಸಲು ರಕ್ಷಣಾಪಡೆಗಳು ಸದಾ ಸನ್ನದ್ಧ ಸ್ಥಿತಿಯಲ್ಲಿರುವಂತೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಕರೆ
ಸುದ್ದಿದಿನ, ತಮಿಳುನಾಡು : ಯಾವುದೇ ಸವಾಲು ಎದುರಿಸಲು ರಕ್ಷಣಾಪಡೆಗಳು ಸದಾ ಸನ್ನದ್ಧವಾಗಿರಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಕರೆ ನೀಡಿದ್ದಾರೆ.
ತಮಿಳುನಾಡಿನ ಊಟಿ ಬಳಿ ವೆಲ್ಲಿಂಗ್‌ಟನ್ ಸೇನಾಪಡೆ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿರುವ ಮೂರೂ ಪಡೆಗಳ ಸೇನಾಧಿಕಾರಿಗಳನ್ನು ಉದ್ದೇಶಿಸಿ ಮಂಗಳವಾರ ಭಾಷಣ ಮಾಡಿದ ಉಪರಾಷ್ಟ್ರಪತಿ, ಬದಲಾಗುತ್ತಿರುವ ರಕ್ಷಣಾ ವಾತಾವರಣಕ್ಕೆ ಅನುಗುಣವಾಗಿ ತಂತ್ರಜ್ಞಾನ ಬಲದೊಂದಿಗೆ ಸೇನಾಪಡೆಗಳು ಸದಾ ಸನ್ನದ್ಧ ಸ್ಥಿತಿಯಲ್ಲಿರಬೇಕು ಎಂದು ಸಲಹೆ ನೀಡಿದರು.
ಭಾರತ ಸದಾ ಶಾಂತಿ ಮತ್ತು ಸುಸ್ಥಿರತೆಯನ್ನು ಪ್ರತಿಪಾದಿಸುತ್ತದೆ; ’ವಸುಧೈವ ಕುಟುಂಬಕಂ’ ಪರಿಕಲ್ಪನೆಯ ಭಾರತ, ಇತಿಹಾಸದಲ್ಲಿ ಎಂದೂ ಯಾವುದೇ ರಾಷ್ಟ್ರದ ಮೇಲೆ ಆಕ್ರಮಣ ನಡೆಸಿಲ್ಲ. ಆದರೆ ಭಾರತದ ಮೇಲೆ ಯಾವುದೇ ದಾಳಿ ಯತ್ನ ನಡೆದರೆ, ತಕ್ಕ ಪ್ರತ್ಯುತ್ತರ ನೀಡಲು ದೇಶ ಶಕ್ತವಾಗಿದೆ ಎಂದು ಉಪರಾಷ್ಟ್ರಪತಿ ತಿಳಿಸಿದರು.
ಡ್ರೋಣ್, ರೋಬೋಟಿಕ್ಸ್ ಸೇರಿದಂತೆ ಮುಂದುವರಿದ ತಂತ್ರಜ್ಞಾನದೊಂದಿಗೆ ರಕ್ಷಣಾ ಪಡೆಗಳನ್ನು ಬಲಪಡಿಸಲಾಗುತ್ತಿದೆ. ’ಆತ್ಮ ನಿರ್ಭರ್ ಭಾರತ್’ ಪರಿಕಲ್ಪನೆಯಡಿ ರಕ್ಷಣಾ ವಲಯದ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲಾಗುತ್ತಿದೆ ಎಂದು ಉಪರಾಷ್ಟ್ರಪತಿ ತಿಳಿಸಿದರು. ಭಯೋತ್ಪಾದನೆ ಇಂದು ಬಹುದೊಡ್ಡ ಜಾಗತಿಕ ಬೆದರಿಕೆಯಾಗಿದ್ದು, ಇದರ ವಿರುದ್ಧ ರಕ್ಷಣಾ ಪಡೆಗಳು, ಅಗತ್ಯ ಕಾರ್ಯತಂತ್ರ ರೂಪಿಸಬೇಕು ಎಂದು ಉಪರಾಷ್ಟ್ರಪತಿ ಕರೆ ನೀಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243