ದಿನದ ಸುದ್ದಿ

ಅಶ್ಲೀಲ ಸಿಡಿ ಪ್ರಕರಣದ ಸಂತ್ರಸ್ತೆ ಗರ್ಭಿಣಿ..? ಎಸ್ ಐ ಟಿ ಹೇಳಿದ್ದೇನು..?

Published

on

ಸುದ್ದಿದಿನ, ಬೆಂಗಳೂರು : ಮಾಜಿ ಸಚಿವ ರಮೇಶ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯಲ್ಲಿ ಆಕೆ ಗರ್ಭವತಿ ಎನ್ನುವುದು ದೃಢವಾಗಿದೆ ಎನ್ನುವ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದವು.

ಈ ಕುರಿತು ಕನ್ನಡದಿನಪತ್ರಿಕೊಂದು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡವನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದಿದ್ದು ಈ ವಿಷಯ ಸುಳ್ಳು ಎಂಬುದು ಖಚಿತಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ | ಜೀರೋ ತ್ಯಾಜ್ಯದ ಹೀರೋ, ಬೆಂಗಳೂರಿನ ಜ್ಯೂಸ್ ರಾಜಾ ಅವರನ್ನು ಹಿಸ್ಟರಿ ಟಿವಿ18 ನ ‘ಒಎಂಜಿ! ಯೆ ಮೇರಾ ಇಂಡಿಯಾ’ದಲ್ಲಿ ಭೇಟಿ ಮಾಡಿ

ಈ ಸಿಡಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ಸುಳ್ಳುಸುದ್ದಿಗಳನ್ನು ಹರಡುವ ಹಾಗಿಲ್ಲ. ಏನಾದರೂ ಹರಡಿದರೆ ಅದು ಕಾನೂನು ಬಾಹಿರವಾಗಿದೆ. ಅಕಸ್ಮಾತ್ ಆಗಿಯಾದರೂ ಸುಳ್ಳು ಪೋಸ್ಟ್‌ಗಳನ್ನು ಹಾಕಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಎಸ್ ಐ ಟಿ ಎಚ್ಚರಿಕೆ ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version