ದಿನದ ಸುದ್ದಿ
Breaking | ಭಗವದ್ಗೀತೆ ಸುಟ್ಟು ಸೇಡು ತೀರಿಸಿಕೊಂಡ ವಿಡಿಯೊ ವೈರಲ್
ಸುದ್ದಿದಿನ ಡೆಸ್ಕ್ | ದೆಹಲಿಯ ಜಂತರ್- ಮಂತರ್‌ನಲ್ಲಿ ಭಾರತದ ಸಂವಿಧಾನವನ್ನು ಸುಟ್ಟು ಹಾಕಿದ ಸಂಪ್ರದಾಯವಾದಿಗಳಿಗೆ ಧಿಕ್ಕರಿಸಿ ಮೈಸೂರಿನ ಪ್ರಗತಿ ಪರ ಚಿಂತಕ ಹಾರೋಹಳ್ಳಿ ರವೀಂದ್ರ ಅವರು ಭಗವದ್ಗೀತೆಯನ್ನು ಸುಟ್ಟು ಹಾಕುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾನುವಾರ ಸಂಜೆ ನಾಲ್ಕು ಗಂಟೆ ಸಮಯದಲ್ಲಿ ಹಾರೋಹಳ್ಳಿ ಗ್ರಾಮದಲ್ಲಿ ರವೀಂದ್ರ ಅವರು ಭಗವದ್ಗೀತೆಗೆ ಬೆಂಕಿ ಹಚ್ಚುವ ಮೂಲಕ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಭಗವದ್ಗೀತೆಗೆ ಬೆಂಕಿ ಹಚ್ಚುವ ದೃಶ್ಯವನ್ನು ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಸಾಮಾಜಿ ಜಾಲ ತಾಣದಲ್ಲಿ ವೈರಲ್ ಆಗಿದೆ. ಕೇವಲ ಐದು ಗಂಟೆ ಅವಯಲ್ಲಿ ಏಳು ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಸದ್ಯ 200ಕ್ಕೂ ಹೆಚ್ಚು ಮಂದಿ ಇದನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಕಾರಣ ವಿಡಿಯೊ ಇನ್ನಷ್ಟು ವೈರಲ್ ಆಗುವ ಸಾಧ್ಯತೆಯಿದೆ. ರವೀಂದ್ರ ಅವರ ಕೃತ್ಯವನ್ನು ಕೆಲವರು ಸಮರ್ಥಿಸಿಕೊಂರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಯಾವುದೇ ಠಾಣೆಯಲ್ಲಿ ಪ್ರಕರಣ ದಾಖಲಾಗಿದಲ್ಲ.