ದಿನದ ಸುದ್ದಿ

ವಿಡಿಯೋ : ಯುವತಿಯಿಂದ ಸಂಸದ‌ ಪ್ರತಾಪ್ ಸಿಂಹನ ಮೇಲೆ ‘ಲೈಂಗಿಕ ಕಿರುಕುಳ’ ಆರೋಪ..!

Published

on

ಸುದ್ದಿದಿನ,ಮೈಸೂರು : ಅದೇನೋ ಬಿಜೆಪಿ ಪಕ್ಷದ ನಾಯಕರಿಗೂ ಹಾಗೂ ಲೈಂಗಿಕ ಕಿರುಕುಳದ ಆರೋಪಗಳಿಗೂ ಬಿಡದ ನಂಟು. ಹೊನ್ನಾಳಿ ಶಾಸಕ‌ ರೇಣುಕಾಚಾರ್ಯ, ಹರತಾಳು ಹಾಲಪ್ಪ, ರಾಮದಾಸ್, ತೇಜಸ್ವಿ ಸೂರ್ಯ, ಇವರುಗಳು ಲೈಂಗಿಕ ಕಿರುಕುಳದ ಆರೋಪ ಹೊತ್ತು ಜನತೆಯಿಂದ ಛೀಮಾರಿ ಹಾಕಿಸಿಕೊಂಡದ್ದಾಯಿತು. ಈಗ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಸರದಿ.

ಮಂಡ್ಯದ, ಚಾಮುಂಡೇಶ್ವರಿ ನಗರದ ‘ಶೃತಿ’ ಎಂಬ ಪತ್ರಿಕೋದ್ಯಮ ವಿದ್ಯಾರ್ಥಿನಿ ಸಂಸದ ಪ್ರತಾಪ್ ಸಿಂಹ ಅವರಿಂದಾದ ಲೈಂಗಿಕ ಕಿರುಕುಳದ ಬಗ್ಗೆ ಸುಧೀರ್ಘವಾದ ಪತ್ರವೊಂದನ್ನು ಬರೆದಿದ್ದಾರೆ.

ಇದೀಗ ಈ ಪತ್ರವು ಹಾಗೂ ಯುವತಿಯೊಂದಿಗೆ ಅಶ್ಲೀಲವಾಗಿ ಮಾತನಾಡಿರು ಆಡಿಯೋವೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಶೃತಿ ಎಂಬುವರೊಂದಿಗೆ ಸ್ನೇಹ ಬೆಳೆಸಿದ್ದ ಪ್ರತಾಪ್ ಸಿಂಹ ಆಕೆಗೆ ದಿನನಿತ್ಯ ಅಶ್ಲೀಲ‌ ಸಂಭಾಷಣೆಯಲ್ಲಿ ಸಂಭೋದಿಸುತ್ತ, ಲೈಂಗಿಕ ಕ್ರಿಯೆಗೆ ಆಹ್ವಾನಿಸುತ್ತಿದ್ದರ ಬಗ್ಗೆ ನೊಂದು ಯುವತಿ ಮಾಧ್ಯಮಗಳ ಮೊರೆಹೋಗಿದ್ದಾರೆ.

ಈ‌ ಸಂಬಂಧ ಮೈಸೂರಿನ ಹಿರಿಯ ಪತ್ರಕರ್ತ ದೀಪಕ್ ಅವರು ‘ಮತಭಾರತ‘ ಎಂಬ ಸರಣಿ ವಿಡಿಯೋದಲ್ಲಿ ಪ್ರತಾಪ್ ಸಿಂಹ ಅವರ ಲೈಂಗಿಕ ಕಿರುಕುಳದ ಬಗ್ಗೆ ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಯುವತಿಯೊಬ್ಬರು ಪ್ರತಾಪ್ ಸಿಂಹ ಅವರ ಬಗ್ಗೆ ಆರೋಪಿಸಿರುವ ವಿಡಿಯೋದ ತುಣುಕು ಕೂಡ ಇದೆ. ಈ‌ ಅರೋಪಕ್ಕೆ ಸಂಬಂಧಿಸಿದಂತೆ ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ, ಪ್ರಜಾಪತಿನಿಧಿಯಾಗಿರುವ ಸಂಸದ ಪ್ರತಾಪ್ ಸಿಂಹ ಅವರು ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ವಿಡಿಯೋ‌ ನೋಡಲು ಲಿಂಕ್ ಮೇಲೆ ಕ್ಲಿಕ್ ಮಾಡಿ

https://m.facebook.com/story.php?story_fbid=660814254369266&id=100013220922255

ಯುವತಿಯ ಪತ್ರ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version