ಲೈಫ್ ಸ್ಟೈಲ್
ವಿದ್ಯಾಬಾಲನ್ ಸ್ಯಾರಿ ಕ್ರೇಜ್..!
ವಿದ್ಯಾ ಬಾಲನ್ ಅಂದ ಕೂಡಲೇ ಕಣ್ನ ಮುಂದೆ ಬರೋದು ಚೆಂದನೆಯ ಸೀರೆಗಳು. ಟ್ರೆಡಿಷನಲ್ ಲುಕ್ನಲ್ಲೇ ಕಂಗೋಳಿಸುವ ವಿದ್ಯಾರನ್ನು ನೋಡಿ ಇಂಥದ್ದೇ ಸೀರೆಗಳನ್ನೇ ಉಡಬೇಕು ಎನ್ನುವಷ್ಟು ಪ್ರಭಾವಿಸುವ ಸ್ಟೈಲ್ ಐಕಾನ್ ವಿದ್ಯಾ. ಅಷ್ಟೇ ಅಲ್ಲದೇ ಪ್ಲಸ್ ಸೈಜ್ ಮಹಿಳೆಯರಿಗೆ ಸಾಕಷ್ಟು ಟಿಪ್ಸ್ಗಳನ್ನು ಅವರ ಸ್ಟೈಲ್ ಮೂಲಕ ಹೇಳಿದ್ದಾರೆ. ಅದನ್ನೀಗ ನೋಡೋಣ ಬನ್ನಿ..
ಚೆಂದನೆಯ ಪ್ರಿಂಟ್ಸ್, ಪ್ಲೈನ್ ಕಾಟನ್ ಸೀರೆಗಳು…! ಗಾಢ, ತೆಳು ಬಣ್ಣದ ಮನಮೋಹಕ ಸೀರೆಗಳು….! ಅದಕ್ಕೆ ಹೊಂದುವಂಥ ಕಾಟನ್, ಕಲಂಕಾರಿಯ ಬ್ಲೌಸ್ಗಳು… ಎಸ್. ವಿದ್ಯಾ ಬಾಲನ್ ಅಂದಕೂಡಲೇ ಕಣ್ಮುಂದೆ ಬರುವ ಚಿತ್ರವಿದು.
ಎಸ್ ವಿದ್ಯಾ ಅಂದ್ರೆ ಬಾಲಿವುಡ್ನ ಮಂದಿಗೆ ಸ್ವಲ್ಪ ಹೊಟ್ಟೆ ಕಿಚ್ಚೇ ಸರಿ. ಯಾಕಂದ್ರೆ ಬಾಲಿವುಡ್ನ ಝೀರೋ ಸೈಜ್ ಟ್ರೆಂಡ್ಗೆ ಬೆಂಡಾಗದೇ, ತನಗಿಷ್ಟ ಬಂದಂತೆ ಸ್ಟೈಲ್ ಫಾಲೋ ಮಾಡುವ ದುಂಡು ಮಲ್ಲಿಗೆ . ಬಹುತೇಕ ಭಾರತೀಯ ನಾರಿಯರಂತೆ ಗುಂಡು ಗುಂಡಾಗಿರುವ ಅಪ್ಪಟ ರಿಯಾಲಿಟಿ ಬ್ಯೂಟಿ. ಜೊತೆಗೆ ಆಕ್ಟಿಂಗ್ ವಿಷಯದಲ್ಲೂ ಆಕೆ ತನ್ನದೇ ಸಿಗ್ನೇಚರ್ ಬರೆದ ಅದ್ಭುತ ಕಲಾವಿದೆ. ಈ ಕಾರಣದಿಂದಲೇ ಚಬ್ಬೀ ಸುಂದರಿ ಮೇಲೆ ಲೇಡೀಸ್ಗೆ ಫುಲ್ ಲವ್.
ಈ ಹಿನ್ನೆಲೆಯಲ್ಲಿ ವಿದ್ಯಾ ಬಾಡಿ ಟೈಪ್ಗೆ ಅನುಗುಣವಾಗಿ ಫ್ಯಾಷನ್ ಫಾಲೋ ಮಾಡ್ತಾರೆ. ಅದರಲ್ಲೂ ಕೆಲವರಿಗೆ ಹೆವ್ವಿ ಹಿಪ್ಸ್ ಇದ್ರೆ ಅವರಿಗೆ ಸೀರೆ ಹೆಚ್ಚು ಮ್ಯಾಚ್ ಆಗುತ್ತೆ ಅಂತಾರೆ. ದಪ್ಪ ಇರುವವರಿಗೆ, ಮತ್ತು ಸ್ಲಿಮ್ ಇರುವವರಿಗೆ ಸೀರೆಗಿಂತ ಇನ್ಯಾವ ಉಡುಗೆಯೂ ಚೆಂದ ಕಾಣುವುದಿಲ್ಲ ಅನ್ನೋದು ವಿದ್ಯಾ ಉವಾಚ.
ತನ್ನ ಎಥ್ನಿಕ್ ಬ್ಯೂಟಿಯಿಂದಲೇ ಮತ್ತೆ ಮತ್ತೆ ನೋಡಬೇಕೆನಿಸುವಂತಿರುವ ವಿದ್ಯಾ , ಅನೇಕ ಮಹಿಳೆಯರು ಸೀರೆ ಉಡಲು ದೊಡ್ಡ ಇನ್ಸ್ಪಿರೇಷನ್. ವಿದ್ಯಾ ಕಾಟನ್ ಸೀರೆಯಲ್ಲೇ ಅಪ್ ಕಿ ಸುಲು ಸಿನಿಮಾದಲ್ಲಿ ಎಲ್ಲರನ್ನೂ ಕುಣಿಸಿಬಿಟ್ಟ ಬ್ರಿಲಿಯಂಟ್ ನಟಿ. ಕಾಟನ್ ಸೀರೆಗಳಲ್ಲೇ ವಂಡರ್ಸ್ಗಳನ್ನು ಕ್ರಿಯೆಟ್ ಮಾಡುವ ಮ್ಯಾಜಿಕಲ್ ನಟಿ. ಸಿಂಪಲ್ ಕಾಟನ್ ಸಿರೆಗೆ ರಿಚ್ ಫುಲ್ ಸ್ಲೀವ್ಸ್ ಬ್ಲೌಸ್ ಧರಿಸಿ, ಗ್ರ್ಯಾಂಡ್ ಆಗಿ ತನ್ನನ್ನು ಪ್ರೆಸೆಂಟ್ ಮಾಡುವ ಕಲಾತ್ಮಕ ಗೊಂಬೆ.
ವಿದ್ಯಾ ಬಾಲನ್ ತನ್ನ ಸೀರೆಯ ಸೊಬಗಿನಿಂದಲೇ ಶಾರ್ಟ್ ಸ್ಕರ್ಟ್ ಚೆಂದುಳ್ಳಿಯರ ನಡುವೆ ಹೆಮ್ಮೆಯಿಂದ ತನ್ನದೇ ಐಡೆಂಟಿಟಿ ಕ್ರಿಯೆಟ್ ಮಾಡಿಕೊಂಡ ಸೊಗಸುಗಾತಿ. ತನ್ನ ದಪ್ಪನೆಯ ಮೈಕಟ್ಟಿಗಾಗಿ ಸಾಕಷ್ಟು ವಿಮರ್ಶೆಗಳನ್ನು ಎದುರಿಸಿದ್ರು ಕೂಡ, ವಿದ್ಯಾ ಜಗ್ಗಲಿಲ್ಲ, ಬಗ್ಗಲಿಲ್ಲ. ಗುಂಡನೆಯ ಮೈಕಟ್ಟಿಗೂ ಅಭಿನಯಕ್ಕೂ ಸಂಬಂಧವೇ ಇಲ್ಲ, ನಿಮ್ಮ ಮನಸ್ಥಿತಿ ಬದಲಿಸಿಕೊಳ್ಳಿ ಎಂದು ನೀರಿಳಿಸಿದ್ದನ್ನು ನೋಡಿ ಎಷ್ಟೋ ಹೆಣ್ಣು ಮಕ್ಕಳು ವಾವ್ ವಾಟ್ ಎ ಲೇಡಿ ಎಂದು ಚಪ್ಪಾಳೆ ತಟ್ಟಿದ್ದು ಇನ್ನೂ ಹಸಿಯಾಗಿಯೇ ಇದೆ.
ಇವತ್ತಿಗೂ ಎಂಟರ್ಟೇನ್ಮೆಂಟ್ ಪೇಜ್, ಮ್ಯಾಗಜೀನ್ ಕವರ್ ಫೋಟೋ, ಫ್ಯಾಷನ್ ಬ್ಲಾಗ್ಗಳಲ್ಲಿ ಈ ಸೆನ್ಸೇಷನಲ್ ಬ್ಯೂಟಿಯ ಬಗ್ಗೆಗಿನ ಹೊಗಳಿಕೆಗಳು ಕಡಿಮೆಯಾಗಿಲ್ಲ. ಇನ್ನೂ ವಿದ್ಯಾ ಉಡುವ ಕಾಟನ್, ಝರಿ ಸೀರೆಗಳಿಗೆ ಮ್ಯಾಚ್ ಮಾಡುವ ರೆಡ್ ಬಿಂದಿ, ಆಕ್ಸಡೈಸ್ಡ್ ನೆಕ್ ಪೀಸ್, ಗೋಲ್ಡನ್ ಆಭರಣಗಳು ಅದಕ್ಕೆ ಹೊಂದುವ ಮೇಕಪ್ ಮ್ಯಾಜಿಕಲ್ ಪ್ರಭಾವಳಿಯನ್ನು ಆಕೆಯ ಸುತ್ತ ಸುತ್ತುವಂತೆ ಮಾಡುತ್ತವೆ.
ಗ್ಲೋಬಲ್ ಬ್ಯೂಟಿಯ ಕಾಂಚೀಪುರಂ ಸೀರೆಯ ಪ್ರೀತಿಗೆ ಮರುಳಾದ ಮಂದಿಗೆನೂ ಕಮ್ಮಿ ಇಲ್ಲ. ವೈಬ್ರಂಟ್ ಶೇಡ್ಸ್ಗಳಲ್ಲಿ ಕಂಗೋಳಿಸುವ ಕಲೆಕ್ಷನ್ಸ್ಗಳು ಸೀರೆಯ ಶ್ರೀಮಂತಿಕೆಯನ್ನು ಎತ್ತಿ ತೋರಿಸುತ್ತವೆ. ಇನ್ನೂ ಗೋಲ್ಡನ್ ಸೀರೆಗಳು ವಿದ್ಯಾ ಫೇವರೀಟ್ . ಇನ್ನೂ ವಿದ್ಯಾ ತಮ್ಮ ಮಿನಿಮಲಿಸ್ಟಿಕ್ ಅಪ್ರೋಚ್ನಿಂದಲೇ ಹೆಚ್ಚು ಇಷ್ಟವಾಗ್ತಾರೆ. ಕೆಲವೊಮ್ಮೆ ಚಿಕ್ಕ ಜುಮ್ಕಾಗಳಾದ್ರೆ, ಕೆಲವೊಮ್ಮೆ ದೊಡ್ಡ ಇಯರಿಂಗ್ಸ್. ಇನ್ನೂ ಕೆಲವೊಮ್ಮೆ ಥ್ರೆಡ್ ಆಭರಣಗಳಿಗಷ್ಟೇ ಸೀಮಿತ. ಈ ಎಲ್ಲಾ ಕಾರಣಗಳಿಂದಲೇ ಸಾತ್ವಿಕ ಸುಂದರಿ ವಿದ್ಯಾ ಎಲ್ಲರ ಮನವನ್ನು ಗೆದ್ದಿದ್ದಾರೆ. ಅಲ್ಲದೇ ತಮ್ಮ ಸೀರೆಯ ಬಗ್ಗೆ ಕೆಲವೊಮ್ಮೆ ಪಾಸಿಟಿವ್ ಮತ್ತು ಕೆಲವೊಮ್ಮೆ ನೆಗೆಟೀವ್ ಕಮೆಂಟ್ಗಳನ್ನು ಪಡೆದಿರುವ ವಿದ್ಯಾ, ಔಟ್ಡೇಟೆಡ್ ಟ್ರೆಂಡ್ ಆದ್ರೂ ಓಲ್ಡ್ ಇಸ್ ಗೋಲ್ಡ್ ಅನ್ನೋದನ್ನ ಪದೇ ಪದೇ ಪ್ರೂವ್ ಮಾಡ್ತಿರುವ ಅಪರೂಪದ ದೀವಾ.
ವಿದ್ಯಾ ಬಾಲನ್ ತಮ್ಮ ಸೀರೆಗಳಿಂದಲೇ ಹೇಗೆ ತಮ್ಮದೇ ವಿಶಿಷ್ಟ ಚಾಪು ಮೂಡಿಸ್ತಿದ್ದಾರೆ ಅನ್ನೋದನ್ನ. ಸೀರೆ ಅಂದ್ರೆ ಮೂಗು ಮುರಿಯುವ ಮುನ್ನ ನಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ಸ್ಟೈಲ್ ಕ್ರಿಯೆಟ್ ಮಾಡೋದು ಹೇಗೆ ಅನ್ನೋದ್ರ ಬಗ್ಗೆ ಒಮ್ಮೆ ಯೋಚಿಸಿ ನೋಡಿ. ಇನ್ನೂ ವಿದ್ಯಾ ಬಾಲನ್ ಬಳಸುವ ಒಂದು ಬ್ಯೂಟಿ ಪ್ರಾಡಕ್ಟ್ ಪಾಕಿಸ್ತಾನದಿಂದ ಬರುತ್ತಂತೆ. ಇದು ವಿದ್ಯಾ ಸೌಂದರ್ಯದ ಹಿಂದಿರುವ ಸೀಕ್ರೆಟ್ ಅಂತೆ.
ಮುಂದುವರಿಯುವುದು