ಲೈಫ್ ಸ್ಟೈಲ್
ವಿದ್ಯಾಬಾಲನ್ ಸ್ಕಿನ್ ಟೋನ್…!
ವಿದ್ಯಾ ಬಾಲನ್ ಸ್ಪ್ಲಾಶಿ ಸ್ಕಿನ್ ಟೋನ್ ಅಂದ್ರೆ ಸ್ಪೆಷಲ್ ಅಟ್ರ್ಯಾಕ್ಷನ್. ಗ್ಲೋಯಿಂಗ್ ತ್ವಚೆಯಿಂದಲೇ ಎಲ್ಲರನ್ನೂ ಸೆಳೆಯುವ ಕೇರಳ ಸುಂದರಿ ತಮ್ಮ ಸೌಂದರ್ಯ ಇಮ್ಮಡಿಗೊಳಿಸಲು ಮೂಲಿಕೆಯೊಂದನು ಬಳಸುತ್ತಾರಂತೆ. ಇಷ್ಟಕ್ಕೂ ಆ ಮೂಲಿಕೆ ಬರುವುದು ಪಾಕಿಸ್ಥಾನದಿಂದ ಅನ್ನೋದು ಅಚ್ಚರಿಗೊಳಿಸುತ್ತೆ. ಇಷ್ಟಕ್ಕೂ ವಿದ್ಯಾ ಗ್ಲೋಯಿಂಗ್ ಸ್ಕಿನ್ ಸೀಕ್ರೆಟ್ ಏನು ಅನ್ನೋದನ್ನ ನೋಡೋಣ ಬನ್ನಿ.
ವಿದ್ಯಾ ಬಾಲನ್ ತಮ್ಮ 16 ನೇ ವಯಸ್ಸಿಗೆ ಫಿಲ್ಮ್ ಇಂಡಸ್ಟ್ರಿಗೆ ಬಂದವರು. ಅಂದಿನಿಂದ ಇಂದಿನ ತನಕ ತಮ್ಮ ಸ್ಕಿನ್ ಟೋನ್ ಹಾಗೇ ಉಳಿಸಿಕೊಂಡು ಬಂದವರು. ನ್ಯಾಷನಲ್, ಫಿಲ್ಮ್ ಫೇರ್ ಅವಾರ್ಡ್ಗಳನ್ನು ಪಡೆದ ಅಪರೂಪದ ವ್ಯಕ್ತಿತ್ವ ವಿದ್ಯಾರದು.
ಸೌಂದರ್ಯದಲ್ಲೇ ಆಳುವ ಗ್ಲಾಮರ್ ಪ್ರಪಂಚದಲ್ಲಿ ವಿದ್ಯಾ ತಮ್ಮ ಬ್ಯುಟಿ ಮೆಂಟೆನ್ಸ್ ಹೇಗೇ ಮಾಡ್ತಾರೆ? ಅನ್ನೋದು ಇಂಟರೆಸ್ಟಿಂಗ್ ಸಂಗತಿ. ಇದಕ್ಕಾಗಿ ತಪ್ಪದೇ ತಮ್ಮ ಸ್ಕಿನ್ ಅನ್ನು ಕ್ಲೆನ್ಸಿನ್ ಮಾಡೇ ಮಾಡ್ತಾಎರ. ಅಂತರಾಷ್ಟರೀಯ ಬ್ರ್ಯಾಂಡ್ ಕ್ರೀಮ್ಗಳನ್ನು ಇದಕ್ಕಾಗಿ ಬಳಸುತ್ತಾರೆ. ಇನ್ನೂ ಮೇಕಪ್ ತೆಗೆಯಲು ಮೇಕಪ್ ವೈಪ್ಸ್ಗಳನ್ನು ಬಳಸುತ್ತಾರೆ. ಇದಂತೂ ಇತ್ತೀಚೆಗೆ ಹೆಣ್ಮಕ್ಕಳ ಫೇವರೀಟ್ಗಳಲ್ಲಿ ಒಂದು. ಇದರಲ್ಲಿ ಮಾಯಿಸ್ಚರೈಸರ್ ಮತ್ತು ಅಲೋವೆರಾಗಳು ಇರುವ ಕಾರಣ ಇದು ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ.
ಇನ್ನು ವಿದ್ಯಾ ತಮ್ಮ ಫೇಶಿಯಲ್ ಕ್ರೀಂಗಳಲ್ಲಿ ಆದಷ್ಟು ಆಯುರ್ವೇದದ ಪ್ರಾಡಕ್ಟ್ಗಳನ್ನು ಹೆಚ್ಚು ಬಳಕೆ ಮಾಡ್ತಾರೆ. ಬಾಡಿ ವಾಶ್, ರೋಸ್, ಲೆಮನ್ ಪ್ರಾಡಕ್ಟ್ಗಳನ್ನು ಹೆಚ್ಚೆಚ್ಚು ಬಳಸ್ತಾರೆ ಡಿಂಪಲ್ ಸುಂದರಿ. ಆಯಿಲ್ ಫ್ರೀ ಮಾಯಿಸ್ಚರೈಸರ್ ತಪ್ಪದೇ ಹಚ್ಚಿಕೊಳ್ತಾರಂತೆ.
ಇನ್ನೂ ವಿದ್ಯಾ ಬ್ಯೂಟಿಯಲ್ಲೇ ಹೆಚ್ಚು ಗಮನ ಸೆಳೆಯುವುದು ವಿದ್ಯಾಬಾಲನ್ ಕಣ್ಣುಗಳು. ಅಭಿನಯವೇ ಇರಲಿ, ಯಾವುದೇ ಫಂಕ್ಷನ್ಗಳೇ ಇರಲಿ ವಿದ್ಯಾ ಕಣ್ಣುಗಳು ಹೆಚ್ಚು ಆಕರ್ಷಕವಾಗಿ ಕಾಣುತ್ತವೆ. ನಿಮಗೆ ಗೊತ್ತೆ ವಿದ್ಯಾ ತಮ್ಮ ಕಣ್ಣಿನ ಸೌಂದರ್ಯಕ್ಕೆ ವಿಶೇಷ ಕಾಳಜಿ ವಹಿಸ್ತಾರೆ. ಎಸ್ ವಿದ್ಯಾ ಕಣ್ಣಿನ ಅಂದ ಹೆಚ್ಚಿಸಲು ಒಂದು ವಿಶಿಷ್ಟ ಕಾಡಿಗೆ ಬಳಸುತ್ತಾರೆ. ಅದರಲ್ಲೂ ಈ ಕಾಡಿಗೆಯಲ್ಲಿ ಹರ್ಬಲ್ ಪ್ರಾಡಕ್ಟ್ಗಳಿವೆ. ಇಷ್ಟಕ್ಕೂ ಅದು ಭಾರತದಲ್ಲಿ ಸಿಗುವ ಕಾಡಿಗೆ ಅಲ್ಲವೇ ಅಲ್ಲ. ಎಸ್ ಪಾಕಿಸ್ತಾನದಿಂದ ಬರುವ ಅಪರೂಪದ ಕಾಡಿಗೆಯನ್ನು ವಿದ್ಯಾ ಐ ಐ ಮೇಕಪ್ನಲ್ಲಿ ಬಳಸುತ್ತಾರಂತೆ. ಈಗ ಆ ಕಾಡಿಗೆ ದೆಹಲಿಯಲ್ಲಿ ಸಖತ್ ಫೇಮಸ್ ಆಗಿದ್ಯಾಂತೆ. ಇದು ಕಣ್ಣಿಗೆ ಸೂಥಿಂಗ್ ಫೀಲ್ ನೀಡುವುದಲ್ಲದೇ ಹೆಲ್ದಿಯಾಗಿಯೂ ಇಡುತ್ತದಂತೆ. ಇದು ಬಾದಾಮಿ ಎಣ್ಣೆಯುಕ್ತವಾಗಿದ್ದು, ಕಣ್ನೀನ ರೆಪ್ಪೆ ಬೆಳೆಯಲು ಸಹ ಎಫೆಕ್ಟೀವ್ ಆಗಿ ಕೆಲಸ ನಿರ್ವಹಿಸುತ್ತದಂತೆ.
ಇನ್ನೂ ವಿದ್ಯಾ ತಮ್ಮ ಹೇರ್ ಕೇರ್ಗಾಗಿ ನಿಯಮಿತವಾಗಿ ಆಯಿಲ್ ಮಸಾಜ್ ಮಾಡ್ತಾರಂತೆ. ಇದು ವಿದ್ಯಾಗೆ ಗ್ಲಾಸಿ ಲುಕ್ ನೀಡೋದ್ರಲ್ಲಿ ನೆರವಿಗೆ ಬರುತ್ತದಂತೆ. ಅದಕ್ಕೆ ತಕ್ಕಂತೆ, ಶಾಂಫೂ ಮತ್ತು ಕಂಡೀಷನರ್ ಬಳಕೆ ಮಾಡ್ತಾರೆ ವಿದ್ಯಾ. ತಲೆ ಹೊಟ್ಟಿನ ಸಮಸ್ಯೆ ಬಾರದಂತೆ ತಮ್ಮ ಕೇಶವಿನ್ಯಾಸದಲ್ಲಿ ಮಾಯಿಸ್ಚರ್ ಕಾಪಾಡಿಕೊಳ್ಳುತ್ತಾರಂತೆ. ಇನ್ನೂ ತ್ವಚೆಯ ವಿಷಯದಲ್ಲಿ ಯಾವ ಕಾಂಪ್ರಮೈಸ್ ಕೂಡ ಬೇಡ ಅಂತಾರೆ. ತ್ವಚೆಗೆ ಕಡಿಮೆ ಕ್ವಾಲಿಟಿಯ ಪ್ರಾಡಕ್ಟ್ಗಳನ್ನು ಬಳಸಲೇಬಾರದು ಅಂತಾರೆ. ಆದಷ್ಟು ಕೆಮಿಕಲ್ಗಳಿಂದ ದೂರವಿದ್ದು, ಆಯುರ್ವೇದಿಕ್ ಪ್ರಾಡಕ್ಟ್ಗಳನ್ನೇ ಹೆಚ್ಚು ಬಳಸಿ ಅಂತಾರೆ ವಿದ್ಯಾ.
ಸೋ ನೋಡಿದ್ರಲ್ಲ, ಇವತ್ತು ಗ್ಲೋಬಲ್ ಬ್ಯೂಟಿ ಅಂತಲೇ ಫೇಮಸ್ ಆಗಿರುವ ವಿದ್ಯಾ ತಮ್ಮ ಕರಿಯರ್ ಮತ್ತು ಪರ್ಸನಲ್ ಲೈಫ್ ನಿಭಾಯಿಸಲು ಇಷ್ಟೆಲ್ಲಾ ಕಾಳಜಿ ವಹಿಸುತ್ತಾರೆ. ಈ ಕಾರಣದಿಂದಲೇ ವಿದ್ಯಾ ವಿಭೀನ್ನವಾಗಿ ನಿಲ್ತಾರೆ. ಎಲ್ಲರಿಗೂ ಸ್ಫೂರ್ತಿಯಾಗ್ತಾರೆ. ಎಸ್ ಯೂ ಆರ್ ಗ್ರೇಟ್ ಲೇಡಿ ವಿದ್ಯಾ..! ವಿ ಲವ್ ಯೂ ಸುಲು…!
ಯಾವುದೇ ಕ್ಷೇತ್ರವಿರಲಿ, ಹೆಣ್ಣುಮಕ್ಕಳು ತಮ್ಮ ಸೌಂದರ್ಯಕ್ಕೆ ಸಂಬಂಧಿಸಿದ ಕೀಳರಿಮೆಗಳಿಗೆ ಒಳಾಗಾಗುವಂಥ ಪ್ರಸಂಗಗಳು ಎದುರಾದ್ರೆ, ಖಂಡಿತಾ ವಿದ್ಯಾ ಬಾಲನ್ ಹೊಸ ವೈಬ್ಸ್ ಸೃಷ್ಟಿ ಮಾಡೋದ್ರಲ್ಲಿ ಅನುಮಾನವೇ ಇಲ್ಲ. ಅದೇನೇ ಇರಲಿ ಫ್ಯಾಟ್ ಇಸ್ ಬ್ಯೂಟಿ ಅನ್ನೋ ಫ್ಯಾಕ್ಟ್ ಜೊತೆಗೆ ಹೆಲ್ದಿ ಲೈಫ್ ಬಗ್ಗೆಯೂ ಕಾಳಜಿ ಇರಲಿ ಅನ್ನೋ ವಿದ್ಯಾ ಮಾತು ನೆನಪಿರಲಿ. ಸೋ ಇದಾಗಿತ್ತು ಇವತ್ತಿನ ಲೇಡೀಸ್ ಫಸ್ಟ್. ನಾಳೆ ಮತ್ತೆ ಭೇಟಿಯಾಗೋಣ ನಮಸ್ಕಾರ. ಸುದ್ದಿಯಲ್ಲಿ ಸದಾ