ದಿನದ ಸುದ್ದಿ
ಕೇರಳದಲ್ಲಿ ಮಳೆ ಅಬ್ಬರ; 25 ಲಕ್ಷ ರೂ. ನೀಡಿದ ನಟ ಸಹೋದರರು
ಸುದ್ದಿದಿನ ಡೆಸ್ಕ್: ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಕೇರಳದಲ್ಲಿ ಪ್ರವಾಹ ಉಂಟಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಅಲ್ಲಿನ ಅನ್ನಾಹಾರಕ್ಕೆ ಪರದಾಡುವಂತಾಗಿದೆ. ಇಂತಹ ಕರುಣಾಜನಕ ಸ್ಥಿತಿ ಕಂಡು ಮರುಗಿದ ಇಬ್ಬರು ನಟ ಸಹೋದರರು ಕೇವಲ ನಟನೆಗಷ್ಟೇ ಸೀಮಿತವಾಗದೇ ದೊಡ್ಡ ಮೊತ್ತದ ಹಣವನ್ನು ದೇಣಿಗೆ ನೀಡಿದ್ದಾರೆ.
ನಟನ ಕೌಶಲದಿಂದ ಇಬ್ಬರು ನಟ ಸಹೋದರರಾದ ವಿಜಯ್ ಮತ್ತು ಕಾರ್ತಿಕ್ ಬಹುಭಾಷಾ ನಟರು. ನಟನೆಯಿಂದಲೇ ಖ್ಯಾತರಾಗಿರುವ ನಟ ಸಹೋದರರು ಕೇರಳ ಮುಖ್ಯಮಂತ್ರಿ ವಿಪತ್ತು ನಿರ್ವಹಣಾ ನಿಧಿಗೆ ೨೫ ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಈ ಮೂಲಕ ಕೇರಳ ಜನರ ಅಭಿಮಾನ ಗಳಿಸಿದ್ದಾರೆ.
ಪ್ರವಾಹದಿಂದ ಮನೆ ಕಳೆದುಕೊಂಡಿವರಿಗೆ ೧೦ ಲಕ್ಷ ರೂ. ಹಾಗೂ ಸದಸ್ಯರನ್ನು ಸಾವನ್ನಪ್ಪಿದ್ದರೆ ೪ ಲಕ್ಷ ರೂ. ನೆರವನ್ನು ಮುಖ್ಯಮಂತ್ರಿ ವಿಜಯನ್ ಪಿಳರಾಯಿ ಘೋಷಿಸಿದ್ದಾರೆ. ಆಗಸ್ಟ್ 9ರಿಂದ 12 ವರೆಗೆ ೩೭ ಮಂದಿ ಮೃತಪಟ್ಟಿದ್ದು, ಐವರು ಕಾಣೆಯಾಗಿದ್ದಾರೆ.