ದಿನದ ಸುದ್ದಿ

ಉಗ್ರ ಸಂಘಟನೆಗಳ ಮೇಲೆ ದಾಳಿಯಷ್ಟೆ ; ನಾಗರಿಕರನ್ನು ಟಾರ್ಗೆಟ್ ಮಾಡಿಲ್ಲ : ವಿದೇಶಾಂಗ ಕಾರ್ಯದರ್ಶಿ ವಿಜಯ್​ ಕೇಶವ್ ಗೋಖಲೆ

Published

on

ಸುದ್ದಿದಿನ, ದೆಹಲಿ : ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇಂದು ನಸುಕಿನ ಜಾವ ನಡೆದ ಏರ್​​ಸ್ಟ್ರೈಕ್​​​​​ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ವಿಜಯ್​ ಕೇಶವ್ ಗೋಖಲೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

2004ರಿಂದಲೂ ತನ್ನ ನೆಲದಲ್ಲಿರುವ ಉಗ್ರರ ನೆಲೆಗಳನ್ನು ನಾಶ ಮಾಡುವಂತೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದೆವು ಆದ್ರೂ ಪಾಕ್​ ಕ್ರಮ ಕೈಗೊಂಡಿಲ್ಲ.

ಪದೇ ಪದೇ ಭಾರತದ ಮೇಲೆ ಪಾಕ್​ ಪ್ರಚೋದಿತ ಉಗ್ರರು ದಾಳಿ ನಡೆಸುತ್ತಲೇ ಇದ್ದರು. ಹೀಗಾಗಿ ಜೈಷ್- ಇ-ಮೊಹ್ಮದ್ ಸಂಘಟನೆಗಳ ನೆಲೆ ಮೇಲೆ ದಾಳಿ ನಡೆಸಿದ್ದೇವೆ. ಯಾವುದೇ ನಾಗರಿಕರನ್ನು ನಾವು ಟಾರ್ಗೆಟ್ ಮಾಡಿಲ್ಲ ಎಂದು ಹೇಳಿದರು.

ಕೇವಲ 24 ಗಂಟೆಗಳಲ್ಲಿ ಕಾರ್ಯಾಚರಣೆಗೆ ಗ್ರೀನ್ ಸಿಗ್ನಲ್ ನೀಡಿದ್ದು, POKಯಲ್ಲಿ ಜೈಷ್ ಉಗ್ರರು ಜಮಾಯಿಸಿದ್ದ ಮಾಹಿತಿ ನೀಡಿದ್ದ ಗುಪ್ತಚರ ಇಲಾಖೆ ಪ್ರಧಾನಿಗಳ ಭದ್ರತಾ ಸಲಹೆಗಾರ ಅಜಿತ್‌ ಧೋವಲ್‌ಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಪ್ರಧಾನಿ ಮೋದಿಗೆ ವಿಚಾರ ತಿಳಿಸಿದ ಧೋವಲ್,ತಡಮಾಡದೇ POKಯ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಲು ಆದೇಶ
ಮುಂಜಾನೆ 3.30ರ ಸುಮಾರಿಗೆ ಜೈಷ್-ಎ-ಮಹ್ಮಮದ್‌ ಕ್ಯಾಂಪ್‌ಗಳು ಉಡೀಸ್
ಮಿರಾಜ್ ಯುದ್ಧ ವಿಮಾನಗಳ ಮೂಲಕ ಅಟ್ಯಾಕ್ ಮಾಡಿದೆ ಭಾರತೀಯ ಸೇನೆ‌ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version