ದಿನದ ಸುದ್ದಿ
ಇದೇ 16 ರಂದು ಮಾಜಿ ಸೈನಿಕ ಆರ್. ವಿಜಯ್ ಕುಮಾರ್ ಅವರ ಕೈಲಾಸ ಸಮಾರಾಧನೆ
ಸುದ್ದಿದಿನ ,ಚಿತ್ರದುರ್ಗ : ನಗರದ ಮಾಜಿ ಸೈನಿಕರು ಹಾಗೂ ನಿವೃತ್ತ ಬಡ್ತಿ ಶಿಕ್ಷಕರಾದ ಆರ್. ವಿಜಯ್ ಕುಮಾರ್ (66) ಅವರ ಕೈಲಾಸ ಸಮಾರಾಧನೆಯು ಇದೇ 16 ರಂದು ಭಾನುವಾರ ಹೊಸದುರ್ಗ ತಾಲೂಕಿನ ಮೃತರ ಸ್ವಗೃಹ ದೇವಪುರ ಕಾಲೋನಿಯಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಆರ್.ವಿಜಯ್ ಕುಮಾರ್ ಅವರು ಜುಲೈ 2 ನೇ ತಾರೀಖು ಮೃತರಾಗಿದ್ದರು. ಮೃತರ ಕುಟುಂಬದ ಶ್ರೀಮತಿ ಜೆ. ಭಾಗ್ಯಮ್ಮ ಮತ್ತು ಮಕ್ಕಳಾದ ಡಾ. ವಿ.ಬಿ. ನಾಗವೇಣಿ, ಡಾ. ಮೋಹನ್ ಜೆ. ಶ್ರೀಮತಿ ವಿ.ಬಿ. ತ್ರಿವೇಣಿ, ಶ್ರೀ ಕೆ.ವಿ. ರಮೇಶ್ ಬಾಬು ಶ್ರೀಮತಿ ರಮ್ಯಶ್ರೀ, ಶ್ರೀ ವಿ.ಬಿ. ನವೀನ್ ಕುಮಾರ್ ಅವರು ಸಮಾರಾಧನೆಗೆ ಬಂಧು ಮಿತ್ರರು ಆಗಮಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಬೇಕಾಗಿ ವಿನಂತಿಸಿಕೊಂಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243