ರಾಜಕೀಯ

ಮಲ್ಯ ಆಸ್ತಿ ಮುಟ್ಟುಗೋಲು: ಮುಗಿಯದ ಗೊಂದಲ

Published

on

ಸುದ್ದಿದಿನ ಡೆಸ್ಕ್: ಮದ್ಯ ದೊರೆ ವಿಜಯ್ ಮಲ್ಯ ಅವರನ್ನು ಉದ್ದೇಶಿತ ಸುಸ್ತಿದಾರ ಎಂದು ಘೋಷಿಸಿದ ನಂತರ ಲಂಡನ್‍ನಲ್ಲಿರುವ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೋರ್ಟ್ ಆದೇಶ ನೀಡಿದ್ದರೂ, ಈ ಕುರಿತ ಗೊಂದಲ ಇನ್ನು ಮುಂದುವರಿದಿದೆ.

ಲಂಡನ್ ಹಾಗೂ ವೇಲ್ಸ್‍ನಲ್ಲಿರುವ ಅವರ ಆಸ್ತಿ ಮೌಲ್ಯನ್ನು 10,500 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಬ್ರಿಟನ್ ಕೋರ್ಟ್ ಈ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಮ್ಮತಿ ನೀಡಿದ್ದರೂ, ಬ್ರಿಟನ್‍ನಲ್ಲಿರುವ ಬಹುತೇಕ ಆಸ್ತಿಯು ಪತ್ನಿ ರೇಖಾ ಹಾಗೂ ಮಲ್ಯ ಅವರ ತಾಯಿಗೆ ಸೇರಿದ್ದಾಗಿದೆ.

ಬ್ರಿಟನ್‍ನಲ್ಲಿ ಮಲ್ಯ ಅವರ ಹೆಸರಿನಲ್ಲಿ ಕೆಲವೇ ಕಾರುಗಳು ಹಾಗೂ ಆಭರಣಗಳಿದ್ದು, ಇದರ ಮೌಲ್ಯ ಕೆಲವೇ ಕೋಟಿ ರೂಪಾಯಿಗಳಾಗಿವೆ ಎಂದು ತಿಳಿದುಬಂದಿದೆ. ಹಾಗಾಗಿ ಬ್ರಿಟನ್‍ನಲ್ಲಿರುವ ಆಸ್ತಿ ತಮ್ಮ ಪಾಲಿಗೆ ಬರುತ್ತದೋ ಇಲ್ಲವೋ ಎಂಬ ಗೊಂದಲದಲ್ಲಿ ಬ್ಯಾಂಕ್ ಅಧಿಕಾರಿಗಳು ನಿದ್ರೆಇಲ್ಲದ ರಾತ್ರಿ ಕಳೆಯುತ್ತಿದ್ದಾರೆ.

ಮಲ್ಯ ಅವರನ್ನು ಉದ್ದೇಶಿತ ಸುಸ್ತಿದಾರ ಎಂದು ಘೋಷಿಸುವ ಮೂಲಕ ಆರ್ಥಿಕ ಕಾನೂನಿನಲ್ಲಿ ಕೆಲ ಬದಲಾವಣೆ ತಂದು ಬ್ರಿಟನ್‍ನಲ್ಲಿರುವ ಮಲ್ಯ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೋರ್ಟ್ ಮೂಲಕ ಆದೇಶ ತರಲಾಗಿತ್ತು

 

Leave a Reply

Your email address will not be published. Required fields are marked *

Trending

Exit mobile version